Headlines

ಹೆಬ್ಬಾಳಕರ ಪಂಚಮಸಾಲಿ ಅಲ್ಲ..ಬಣಜಿಗ..!

ಹೆಬ್ಬಾಳಕರ ವಿರುದ್ಧ ಪಂಚಮಸಾಲಿ ಅಸ್ತ್ರ. ಮುರುಗೇಶ ನಿರಾಣಿ ಹೊಸ ಬಾಂಬ್.

ಸಚಿವೆ ಪತಿ ರವೀಂದ್ರ ಬಣಜಿಗ. ಎಂದ ನಿರಾಣಿ. ಹೆಬ್ಬಾಳಕರ ಏನು ಗ್ರಾಮೀಣ ಕ್ಷೇತ್ರದವರಾ?

ಬೆಳಗಾವಿ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅನಗತ್ಯವಾಗಿ ಪಂಚಮಸಾಲಿ ಜಾತಿ ರಾಜಕೀಯ ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಂಚಮಸಾಲಿ ಅಲ್ಲವೇ ಅಲ್ಲ.. ಅವರು ಬಣಜಿಗ. ಕಾಂಗ್ರೆಸ್ ಅಭ್ಯರ್ಥಿ ಕೂಡ ಬಣಜಿಗ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು..

ನಗರದಲ್ಲಿಂದು ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಮದುವೆಗೂ ಮುಂಚೆ ಲಕ್ಷ್ಮೀ ಹಟ್ಟಿಹೊಳಿ ಆಗಿದ್ದಾಗ ಅವರು ಪಂಚಮಸಾಲಿ ಇದ್ದರು. ಆದರೆ ರವೀಂದ್ರ ಹೆಬ್ಬಾಳಕರ ಅವರನ್ನು ಮದುವೆಯಾದ ನಂತರ ಲಕ್ಷ್ಮೀ ಅವರು ಬಣಜಿಗ ಆದರು. ಅಂದರೆ ಅವರ ಮಗ‌ ಕೂಡ ಬಣಜಿಗ ಎಂದು ನಿರಾಣಿ ಹೇಳಿದರು.

ಅದರೆ ಈ ಸತ್ಯವನ್ನು ಮರೆಮಾಚಿ ಸಚಿವೆ ಹೆಬ್ಬಾಳಕರ ಅವರು ಸಮಾಜಕ್ಕೆ ಮತ್ತು ಜನತೆಗೆ ತಪ್ಪು ಸಂದೇಶ ಕೊಡುತ್ತಿದ್ದಾರೆಂದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಹೋರಾಟ ನಡೆದಿತ್ತು. ಆಗ ಹೆಬ್ಬಾಳಕರ ಅವರು ಬಿಜೆಪಿ ಸರ್ಕಾರ ಪಂಚಮಸಾಲಿಗೆ 2a ಮೀಸಲಾತಿ ಕೊಟ್ಟರೆ ನಾನು ಅವರ ಮನೆತನಕ ಹೋಗಿ ಬೆಳಗಾವಿ ಕುಂದಾ ಕೊಟ್ಟು ಬರುವುದಾಗಿ ಹೇಳಿದ್ದರು.

ಒಂದು ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇವಲ ಮೂರೇ ತಿಂಗಳಲ್ಲಿ ಪಂಚಮಸಾಲಿಗೆ 2a ಮೀಸಲಾತಿ ಕೊಡುತ್ತೇವೆ. ಆಗ ನಿರಾಣಿ ಅಣ್ಣನವರು ನನಗೆ ಚಿನ್ನದ ಬಳೆ ಕೊಡಬೇಕು ಎಂದಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳು ಗತಿಸಿದರೂ 2a ಮೀಸಲಾತಿ ಸಿಕ್ಕಿಲ್ಲ. ಆದ್ದರಿಂದ ಅದು ಸಿಗುವ ತನಕ ಸಚಿವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಚಿವೆ ಹೆಬ್ಬಾಳಕರ

ಹೆಬ್ಬಾಳಕರ ಎಲ್ಲಿಯವರು?

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೊರಗಿನವರು ಎನ್ನುವ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದವರಾ ಎಂದು ಪ್ರಶ್ನೆ ಹಾಕಿದರು

ಮೂಲತಃ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಪಡದ ಖಾನಾಪುರ ತಾಲುಕಿನ ಹಳ್ಳಿಯವರು. ಅದು ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೂ ಬರಲ್ಲ ಎಂದರು.

ನಾವು ಲೋಕಸಭೆ ಚುನಾವಣೆಯಲ್ಲಿ ಜಾತಿ ರಾಜಕಾರಣ ಮಾಡುತ್ತಿಲ್ಲ. ಆದರೆ ವಿರೋಧಿಗಳು ಹೇಳುತ್ತಿರುವ ಹೇಳಿಕಗಳಿಗೆ ಸ್ಪಷ್ಟನೆ ನೀಡಿದ್ದಾಗಿ ತಿಳಿಸಿದರು.

ಆರ್.ಎಸ್ ಮುತಾಲಿಕ. ಎಂ‌. ಬಿ. ಜಿರಲಿ. ಮಹಾನಗರ ಅಧ್ಯಕ್ಷೆ ಗೀತಾ ಸುತಾರ‌ ಮತ್ತಿತರರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!