Headlines

ಬೆಳಗಾವಿ ತುಂಬ ಪೆಗ್ ಮಾತು..!

ಮದ್ಯವನ್ನೇ ಮುಟ್ಟದ ಮಾಜಿ ಶಾಸಕ ಸಂಜಯ ಪಾಟೀಲ ಪೆಗ್ ಬಗ್ಗೆ ಆಡಿದ ಮಾತು.

ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು ಪಗ್ ಮಾತು. ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ. ಸಂಜಯ ಪಾಟೀಲರ ನೀಚತನದ ಕೆಲಸ ಎಂದ ಲಕ್ಷ್ಮೀ..

ಕಾಂಗ್ರೆಸ್ ಕಾರ್ಯಕರ್ತರವಗುಂಡಾಗಿರಿ ವಿರುದ್ಧ ಠಾಣೆ ಮೆಟ್ಟಿಲೇರಿದ.


ಬೆಳಗಾವಿ.
ಅವರು ಕಿಂಚಿತ್ತೂ ಮದ್ಯವನ್ನು ಸೇವಿಸಲ್ಲ. ಪೆಗ್ ಅಂದ್ರೂ ಗೊತ್ತಿಲ್ಲ. ಆದರೆ ಅವರು ಒಂದು ಎಕ್ಸಟ್ರಾ ಪೆಗ್' ಬಗ್ಗೆ ಆಡಿದ ಮಾತು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಿಕ್ಕೇರುವಂತೆ ಮಾಡಿದೆ. ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲರು ಯಾರದೇ ಹೆಸರನ್ನು ಉಲ್ಲೇಖಿಸದೇ ಆಡಿದ ಮಾತಿದು, ಈ ಮಾತಿಗೆ ಕಾಂಗ್ರೆಸ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕೆರಳಿ ಕೆಂಡವಾಗಿದ್ದಾರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಹಿಂಡಲಗಾದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಸಂಜಯ ಪಾಟೀಲರು ಮಾತಿನ ಭರಾಟೆಯಲ್ಲಿ ಪೆಗ್ ಬಗ್ಗೆ ಪ್ರಸ್ತಾಪ ಮಾಡಿದ್ದರು, ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸೇರಿದ್ದಾರೆ, ಈ ಸಂದೇಶಅಕ್ಕಾ'ಗೆ ಹೋದರೆ ಅವರಿಗೆ ನಿದ್ದೇನೆ ಬರಲ್ಲ. ನಿದ್ರೆ ಮಾತ್ರೆ ಅಥವಾ ಒಂದು ಪೆಗ್ ಎಕ್ಸಟ್ರಾ ತಗೋಬೇಕಾಗುತ್ತದೆ ಎನ್ನುವ ಹಾಸ್ಯ ಚಟಾಕೆಯನ್ನು ಹಾರಿಸಿದ್ದರು,

ಸಹಜವಾಗಿ ಈ ಮಾತಿಗೆ ಲಕ್ಷ್ಮೀ ಹೆಬ್ಬಾಳಕರ ಕೆರಳಿದರು, ಇದು ನನಗಷ್ಟೇ ಅಲ್ಲ ಇಡೀ ಮಹಿಳಾ ಸಮುದಾಯಕ್ಕೆ ಅವಮಾನ, ಅವರ ನೀಚ ಹೇಳಿಕೆ ಸಹಿಸಲಾಗದು ಎಂದು ಗುಡುಗಿದ್ದರು, ಇದು ಅಷ್ಟಕ್ಕೆ ಮುಗಿದಿದ್ದರೆ ಬೇರೆ ಮಾತು ಬರುತ್ತಿರಲಿಲ್ಲ. ಆದರೆ ತಡರಾತ್ರಿ ಹೊತ್ತು ಆಯಿಷಾ ಸನದಿ ಮುಖಂಡತ್ವದಲ್ಲಿ ಒಂದಿಷ್ಟು ಕಾಂಗ್ರೆಸ್ ಕಾರ್ಯಕರ್ತರು ಸಂಜಯ ಪಾಟೀಲರ ಮನೆ ಮುಂದೆ ಹೋಗಿ ಗಲಾಟೆ ಕೂಡ ಮಾಡಿದರು, ಅಷ್ಟೇ ಅಲ್ಲ ಓರ್ವ ಮಹಿಳೆ ಅವರ ಮನೆ ಬಳಿ ಇದ್ದ ವ್ಯಕ್ತಗೆ ಕಪಾಳ ಮೋಕ್ಷ ಕೂಡ ಮಾಡಿದರು,
ಇಂದೂ ಕೂಡ ಹೆಬ್ಬಾಳಕರ ಅದೇ ವಿಷಯ ಮುಂದಿಟ್ಟುಕೊಂಡು ಸಂಜಯ ಪಾಟೀಲ ವಿರುದ್ಧ ವಾಗ್ಧಾಳಿ ನಡೆಸಿದರು, ಇದು ಮಹಿಳಾ ಕುಲಕ್ಕೆ ಅವಮಾನ ಎಂದು ಜರಿದರು,
ಆದರೆ ಈ ಬಗ್ಗೆ ಸಂಜಯ ಪಾಟೀಲ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ನಾನು ಯಾವುದೇ ಸಂದರ್ಭದಲ್ಲಿ ಮಹಿಳೆಯರಿಗೆ ಅವಮಾನ ಮಾಡಿಲ್ಲ. ಮೇಲಾಗಿ ಕಳೆದ ದಿನ ಸಭೆಯಲ್ಲಿ ನಾನು ಯಾರದೇ ಹೆಸರನ್ನು ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ. ಆದರೂ ಅವರು ತಮ್ಮ ಹೆಗಲನ್ನು ಮುಟ್ಟಿಕೊಳ್ಳುತ್ತಿರುವುದು ಏಕೆ ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಜಯ ಪಾಟೀಲ ಸ್ಪಷ್ಟನೆ…!


ಕಳೆದ ದಿನ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ನಾನು ಮಹಿಳೆಯರಿಗೆ ಅವಮಾನವಾಗುವ ರೀತಿಯಲ್ಲಿ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ನಾನು ಮಾತನಾಡಿದ ಆಡಿಯೋ, ವಿಡಿಯೋವನ್ನು ಯಾರು ಬೇಕಿದ್ದವರು ಕೇಳಲಿ, ಅದರಲ್ಲಿ ನಾನು ಮಾತನಾಡುವಾಗ ಯಾರದ್ದೂ ಹೆಸರು ಉಲ್ಲೇಖ ಮಾಡಿಲ್ಲ. ಮೇಲಾಗಿ ನಾನು ಯಾವುದೇ ಮಹಿಳೆಯರ ಬಗ್ಗೆನೂ ಕೆಟ್ಟ ಶಬ್ದಗಳನ್ನು ಬಳಸಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಸಚಿವರು ಎಲ್ಲವನ್ನೂ ತಮ್ಮ ಮೇಲೆಯೇ ಹಾಕಿಕೊಂಡು ಈ ರೀತಿ ಮಾಡುತ್ತಿರುವುದು ಅವರ ಹತಾಶ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಸಂಜಯ ಪಾಟೀಲರು ಹೇಳಿದರು.
ಸಚಿವರ ತವರು ಕ್ಷೇತ್ರದಲ್ಲಿ ಬಿಜೆಪಿಯತ್ತ ಹೆಚ್ಚಿನ ಮಹಿಳೆಯರು ಆಕಷರ್ಿತರಾಗುತ್ತಿದ್ದಾರೆ ಎನ್ನುವುದಕ್ಕೆ ಕಳೆದ ದಿನ ನಡೆದ ಸಮಾವೇಶ ಸಾಕ್ಷಿ. ಇದು ಸಚಿವೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ,ಇದರಿಂದ ಅವರಿಗೆ ಈಗಲೇ ಒಂದು ರೀತಿಯ ಸೋಲಿನ ಭಯ ಕಾಡುತ್ತಿರಬಹುದು ಎಂದು ಅವರು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಏನೇ ಆರೋಪಗಳಿದ್ದರೆ ಅದರ ಬಗ್ಗೆ ಚುನಾವಣೆ ಅಧಿಕಾರಿಗೆ ದೂರು ಕೊಡಬಹುದು, ಬೇಕಿದ್ದರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಬಹುದು, ಅದನ್ನು ಬಿಟ್ಟು ಕಾಂಗ್ರೆಸ್ನ ಕೆಲ ಮಹಿಳೆಯರನ್ನು ಮನೆಗೆ ಕಳಿಸಿ ಗಲಾಟೆ ಮಾಡಿಸುವುದು ಯಾವ ನ್ಯಾಯ ಎಂದು ಅವರು ಪ್ರಶ್ನೆ ಮಾಡಿದರು,

Leave a Reply

Your email address will not be published. Required fields are marked *

error: Content is protected !!