Headlines

ಸಕ್ಕರೆ ಕಾರ್ಖಾನೆಗೇ ಸಾಲ ಕೊಟ್ಟ 31 ರ ಯುವಕ…!

ಬೆಳಗಾವಿ ಲಕ್ಷ್ಮೀ ಪುತ್ರನ ಹೆಸೆರಿಗೆ ಕಾರೂ ಇಲ್ಲ.

ಹರ್ಷ ಶುಗರ್ಸಗೆ ಬರೊಬ್ವರಿ 3 ಕೋಟಿ ಸಾಲ ಕೊಟ್ಟ ಮೃನಾಲ್. ಸ್ವಂತ ಅಜ್ಜಿಗೂ 27 ಲಕ್ಷ ಸಾಲ ನೀಡಿದ ಮೊಮ್ಮಗ.

10 ಕೋಟಿ ಆಸ್ತಿ ಒಡೆಯನಾದ ಮೃನಾಲ್ ಹೆಬ್ಬಾಳಕರ

ಬೆಳಗಾವಿ.
ಕೇವಲ 31 ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿರುವ ಕಾಂಗ್ರೆಸ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃನಾಲ್ ಹೆಬ್ಬಾಳಕರ ಈಗ ಬಹುಕೋಟಿ ಒಡೆಯ ಎನಿಸಿಕೊಂಡಿದ್ದಾರೆ.

ಜೊತೆಗೆ ತಮ್ಮ ಕುಟುಂಬದ ಒಡೆತನಕ್ಕೆ ಸೇರಿದ ಹರ್ಷ ಶುಗರ್ಸಗೆ ಮೂರು ಕೋಟಿ ರೂ ಸಾಲ ನೀಡಿದ್ದಾರೆ.
ಇದರ ಜೊತೆಗೆ ಕುಟುಂಬದ ಸದಸ್ಯರಿಗೆ ಸಾಲ ನೀಡಿರುವ ಮೃನಾಲ್ ಹೆಸರಿನಲ್ಲಿ ಒಂದೇ ಒಂದು ಕಾರ್ ಕೂಡ ಇಲ್ಲ ಎನ್ನುವುದು ವಿಶೇಷ.
ಅಂತಹ ಬಹುಕೋಟಿ ಆಸ್ತಿ ಸಂಪಾದನೆ ಜೊತೆಗೆ ಸಾಲಮಾಡಿರುವ ಮೃನಾಲ್ ಈಗ ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

, ಇಂದು ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಕೊಡಲಾಗಿದ್ದ ಅಫಿಡೆವಿಟ್ನಲ್ಲಿ ತಮ್ಮ ಸಂಪೂರ್ಣ ಆಸ್ತಿ ಮತ್ತು ಸಾಲದ ಮಾಹಿತಿಯನ್ನು ನೀಡಿದ್ದಾರೆ,
ಬ್ಯಾಂಕ್ ಮತ್ತು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿದ್ದಾರೆ. ಇನ್ನೊಂದು ಕಡೆ ತಮ್ಮ ಬಂಧುಗಳಿಗೆ ಹಾಗೂ ಹರ್ಷ ಶುಗರ್ಸ ಸಾಲ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಮೃಣಾಲ್ ಹೆಬ್ಬಾಳಕರ ವಾರ್ಷಿಕ 29 ಲಕ್ಷ .31 ಸಾವಿರದಾ 830 ರೂ ಲಕ್ಷ ಆದಾಯ ಹೊಂದಿದ್ದಾರೆ. ತಮ್ಮ ಬಳಿ 1.72 ಲಕ್ಷ ನಗದು ಹಣ ಇಟ್ಟುಕೊಂಡಿದ್ದರೆ, ಪತ್ನಿ ಹಿತಾ ಅವರ ಬಳಿ 46 ಸಾವಿರ ನಗದು ಹಣವಿದೆ. ಮೃಣಾಲ್ ಹೆಸರಿನಲ್ಲಿ 10 ಕೋಟಿಗೂ ಅಧಿಕ ಚರಾಸ್ತಿ ಮತ್ತು 1.25 ಕೋಟಿ ಸ್ಥಿರಾಸ್ತಿ ಇದೆ. ಪತ್ನಿಯ ಹೆಸರಿನಲ್ಲಿ 23.55 ಲಕ್ಷ ಚರಾಸ್ತಿ ಮಗಳು ಐರಾ ಹೆಸರಿನಲ್ಲಿ 7.85 ಲಕ್ಷ ಚರಾಸ್ತಿ ಇದೆ.


ಮೃಣಾಲ್ ಹೆಬ್ಬಾಳಕರ ಹರ್ಷಾ ಶುಗರ್ಸ 3 ಕೋಟಿ 66 ಲಕ್ಷ ಕ್ಕೂ ಅಧಿಕ ಮೊತ್ತವನ್ನು ಸಾಲ ನೀಡಿದ್ದಾರೆ. ಸಚಿವೆ ತಾಯಿ(ಮೃನಾಲ್ ಅಜ್ಜಿ) ಗಿರಿಜಾ ಹಟ್ಟಿಹೊಳಿ ಅವರಿಗೆ 27 ಲಕ್ಷ 15 ಸಾವಿರ, ಹರ್ಷ ಡೆವಲೆಪರ್ಸಗೆ 17 ಲಕ್ಷ 70 ಸಾವಿರ ರೂ ಸಾಲ ನೀಡಿದ್ದಾರೆ, ಇನ್ನುಳಿದಂತೆ ನೀರಜಾ ದೀಲಿಪ್ ದೇಸಾಯಿ ಅವರಿಗೆ 25 ಲಕ್ಷ ಮತ್ತು ರಾಹುಲ್ ಕೊಡೊಳ್ಳಿ ಅವರಿಗೆ 1 ಲಕ್ಷ ರೂ ಸಾಲ ನೀಡಿ ಸಾಹುಕಾರ ಎನಿಸಿಕೊಂಡಿದ್ದಾರೆ.


ಹರ್ಷ ಬಿಲ್ಡರ್ಸ್ನಲ್ಲಿ 30 ಸಾವಿರ ಇಕ್ವಿಟಿ ಶೇರ್, ಮೃನಾಲ್ ಶುಗರ್ಸ್ಬನಲ್ಲಿ 4 ಕೋಟಿ 11 ಲಕ್ಷ 80 ಸಾವಿರ ಶೇರ್ ಬಂಡವಾಳ ಹೂಡಿಕೆ ಮಾಡಿದ್ದಾರೆ, ಅದೇ ರೀತಿ ತನ್ನ ತಾಯಿ ಹೆಸರಿನಲ್ಲಿರುವ ಲಕ್ಷ್ಮೀತಾಯಿ ಸೌಹಾರ್ದ ಸಂಘದಲ್ಲಿ ಕೂಡ 2 ಸಾವಿರ ಶೇರ್ ಹೂಡಿಕೆ ಮಾಡಿದ್ದಾರೆ. ವಿಕಾಸ ಅರ್ಬನ್ ಕೋ ಆಪ್ ಸೊಸೈಟಿಯಲ್ಲಿ ಕೂಡ 7 ಲಕ್ಷ 51 ಸಾವಿರ ಶೇರ್ ಬಂಡವಾಳ ಹೂಡಿಕೆ ಮಾಡಿದ್ದಾರೆ.
ಹರ್ಷ ಹೊಟೆಲ್ ಮತ್ತು ರೆಸಾರ್ಟನಲ್ಲಿ 45 ಲಕ್ಷ 70 ಸಾವಿರ ಪಾಲುದಾರಿಕೆಯಲ್ಲಿ ಬಂಡವಾಳ ಹೂಡಿಕೆ ಮಾಡಿದ್ದರೆ, ಹರ್ಷ ಮೈನ್ಸ ಮತ್ತು ಕ್ರಷರ್ಸ್ನಲ್ಲಿ 53 ಲಕ್ಷ 20 ಸಾವಿರಕ್ಕೂ ಅಧಿಕ ಬಂಡವಾಳ ಹೂಡಿಕೆ ಮಾಡಿದ್ದಾರೆ,

ತಮ್ಮ ಬಳಿ 3.78 ಲಕ್ಷ ರೂ ಬೆಲೆಯ ಬಂಗಾರದ ಆಭರಣ ಹಾಗೂ ಪತ್ನಿಯ ಬಳಿ 14.65 ಲಕ್ಷ ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳಿವೆ. ಮೃಣಾಲ್ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ 10 ಕೋಟಿ ಸಾಲ ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!