ಅಂಗಡಿ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ

ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪ.

ಸಾವಿನಲ್ಲೂ ರಾಜಕೀಯ ಮಾಡುವಂತಹ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿರುವುದು ದುರ್ದೈವ.

ಕೋರೊನಾ ಸಂದರ್ಭದಲ್ಲಿ ನಾಗರಿಕರಿಗೊಂದು, ನಾಯಕರಿಗೊಂದು ಕಾನೂನು ಇರಲಿಲ್ಲ.

ಬಿಜೆಪಿ ಪ್ರಣಾಳಿಕೆ ಬಗ್ಗೆ ಜನ‌ ಮೆಚ್ಚುಗೆ. ಕಾಂಗ್ರೆಸ್ ಗೆ ಈಗಲೇ ಸೋಲಿನ ಭೀತಿ ಶುರುವಾಗಿದೆ ಎಂದ ಕಡಾಡಿ


ಬೆಳಗಾವಿ
ಸುದೀರ್ಘ ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ದಿ.ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸಾವಿನಲ್ಲಿಯೂ ರಾಜಕೀಯ ಮಾಡುವಂಥ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.


ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ ಅಂಗಡಿ ಅವರ ನಿಧನವಾದಾಗ ಕೊರೊನಾ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ದೆಹಲಿಯಲ್ಲಿಯೇ ಇದ್ದೇವು. ದೇಶದಲ್ಲಿ ಕಾನೂನು ರಚನೆ ಮಾಡಿತ್ತು. ನಾಗರಿಕರಿಗೊಂದು ಕಾನೂನು, ನಾಯಕರಿಗೊಂದು ಕಾನೂನು ಮಾಡಿರಲಿಲ್ಲ. ಎಲ್ಲರಿಗೂ ಒಂದೇ ಕಾನೂನು ಇತ್ತು. ಡಿಸಿಎಂ ಡಿ.ಕೆ.ಶಿವಕುಮಾರ ಇಂಥದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಕಡಾಡಿ ಹೇಳಿದರು,
ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ಬೇರೆ ಬೇರೆ ದೇಶಗಳಿಗೆ ಆಹ್ವಾನ ಮಾಡಲಾಗಿದೆ. ಇದರಲ್ಲಿ ಸುಮಾರು 15 ದೇಶದ ರಾಷ್ಟ್ರೀಯ ಪಕ್ಷಗಳು ಆಗಮಿಸಲಿವೆ. ಲೋಕಸಭಾ ಚುನಾವಣೆಯನ್ನು ಇಡೀ ವಿಶ್ವವೇ ನೋಡುತ್ತಿದೆ. ನಮ್ಮ ದೇಶದ ಚುನಾವಣೆ ಹೇಗೆ ನಡೆಯುತ್ತದೆ ಎಂದು ನೋಡಲು ಬರುತ್ತಿದ್ದಾರೆ ಎಂದರು.


ಈಗಾಗಲೇ ದೇಶದ ಎಲ್ಲ ಜನರ ಅಭಿಪ್ರಾಯ ಸಂಗ್ರಹಿಸಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದು ಮೋದಿ ಗ್ಯಾರಂಟಿ ಎಂದರು. ಇಲ್ಲಿಯವರೆಗೂ ಪಕ್ಷಗಳು ಜಾತಿಯ, ಸಮುದಾಯದ ಆದಾರದ ಮೇಲೆ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದನ್ನು ನೋಡಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರು, ರೈತರು, ಶ್ರಮಿಕರ ಏಳಿಗೆ ಹಾಗೂ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಅಂಶಗಳನ್ನು ಬಿಜೆಪಿ ಪ್ರಣಾಳಿಕೆಯ ಸಂಕಲ್ಪ ಪತ್ರದಲ್ಲಿ ತಿಳಿಸಲಾಗಿದೆ ಎಂದರು.
ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಬಿಜೆಪಿ ಮುಖಂಡರಾದ ಎಂ.ಬಿ.ಜೀರಲಿ, ರಾಜೇಂದ್ರ ಹರಕುಣಿ, ರಮೇಶ ದೇಶಪಾಂಡೆ , ಉಜ್ವಲಾ ಬಡವನಾಚೆ, ಹನುಮಂತ ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!