Headlines

ಚಿಕ್ಕೋಡಿಯಲ್ಲಿ ಯಾರ ಹವಾನೂ ಇಲ್ಲ…!

ಚಿಕ್ಕೋಡಿಯಲ್ಲಿ ಯಾವ ಮೋದಿ ಹವಾನೂ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹವಾ ಇದೆ ಹೊರತು ಪ್ರಧಾನಿ ಮೋದಿ ಅವರ ಹವಾ ಇಲ್ಲ. ಮೋದಿ ಅವರ 10 ವರ್ಷದ ವೈಫಲ್ಯಗಳಿಂದ ಜನ ಬೇಸತ್ತು ಜನ ಕಾಂಗ್ರೆಸನತ್ತ ಮುಖ ಮಾಡುತ್ತಿದ್ದಾರೆ. ಚಿಕ್ಕೋಡಿಯಲ್ಲಿ ಏನೆ ಇದ್ದರೂ ಕ್ಯಾಂಡೆಟ್ ವರ್ಸಿಸ್ ಕ್ಯಾಂಡೆಟ್ ಅಷ್ಟೆ ಎಂದು ಲೋಕೊಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಯಮಕನಮರಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅನೇಕ ಜನಪರ ಯೋಜನೆಗಳನ್ನೂ ಜಾರಿಗೆ ತಂದು ಜನರ ಮನಸ್ಸಿನಲ್ಲಿ ಉಳಿಯುವ ಪಕ್ಷವಾಗಿ ಹೊರಹೊಮ್ಮಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ಸಹ ಸಿಎಂ ಸಿದ್ದರಾಮಯ್ಯ ಹವಾ ಇದೆ ಹೊರತು ಪ್ರಧಾನಿ ಮೋದಿ ಅವರ ಹವಾ ಇಲ್ಲ ಎಂದ ಅವರು, ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಎಂಪಿ ಆಯ್ಕೆಯಾದ ನಂತರ ಯಾವುದೇ ರೀತಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಹೀಗಾಗಿ ಈ ಕ್ಷೇತ್ರ ಅಭಿವೃದ್ಧಿಗೆ ಈ ಭಾರಿ ಮತದಾರರು ಪ್ರಿಯಂಕಾ ಜಾರಕಿಹೊಳಿಗೆ ಹೆಚ್ಚು ಮತ ನೀಡಲಿದ್ದಾರೆ. ಅಲ್ಲದೇ ಜಾರಕಿಹೊಳಿ ಕುಟುಂಬ 30 ವರ್ಷಗಳಿಂದ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಕಾಂಗ್ರೆಸ್‌ ಪಕ್ಷವೂ ಕೂಡಾ ಬಡವರ ಹಾಗೂ ರೈತರಪರವಿದ್ದು, ಸಾಕಷ್ಟು ಯೋಜನೆ ಹಾಗೂ ಗ್ಯಾರಂಟಿಗಳನ್ನು ಜಾರಿ ಮಾಡಿದೆ.

ಕಳೆದ 20 ದಿನಗಳಿಂದ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದು ಹಂತದ ಪ್ರಚಾರ ಮುಕ್ತಯವಾಗಿದೆ. ಇನ್ನು ಏನೆ ಇದ್ದರೂ ಎರಡನೇ ಹಂತದ ಪ್ರಚಾರ ಮಾಡಬೇಕು ಅಷ್ಟೆ ಅಂದ ಅವರು, ಲೋಕಸಭಾ ಚುನಾವಣೆ ಮುಗಿದ ನಂತರ ಗ್ಯಾರಂಟಿ ಯೋಜನೆಗಳು ಬಂದ್‌ ಮಾಡಲಾಗುತ್ತಿದೆ ಎಂದು ಬಿಜೆಪಿಯವರು ಸುಳ್ಳು ಮಾತುಗಳನ್ನಾಡುತ್ತಿದ್ದಾರೆ. ನಮ್ಮ ಪಕ್ಷದ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ನೋಡಿ ಬಿಜೆಪಿಯವರು ಈ ರೀತಿ ಅಪ್ರಚಾರ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಗ್ರಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಹೇಳಿದರು.

ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಸೇರಿಸುವುದು ಸರಿಯಲ್ಲ: ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವದಕ್ಕಿಂತ ಮುಂಚೆ ಬಿಜೆಪಿ ಅಧಿಕಾರಕ್ಕಿದ್ದಾಗ ಇಂಥಹ ಅನೇಕ ಘಟನೆಗಳು ನಡೆದಿವೆ. ಆದರೆ ಆ ಪ್ರಕರಣಗಳ ಕುರಿತು ಬಿಜೆಪಿಯವರು ಒಂದು ಮಾತು ಆಡಲಿಲ್ಲ. ಈಗ ನೇಹಾ ಪ್ರಕರಣಕ್ಕೆ ರಾಜಕೀಯ ಸೇರಿಸಲಾಗುತ್ತಿದೆ. ಇದು ಸರಿಯಲ್ಲ ಎಂದ ಅವರು, ನೇಹ ಹತ್ಯೆ ಪ್ರಕರಣ ಇದು ವಯಕ್ತಿಕವಾಗಿದ್ದರಿಂದ ಪೊಲೀಸ್‌ ಇಲಾಖೆ ಸಂಪೂರ್ಣ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!