Headlines

ದೇಶಕ್ಕೆ ಮೋದಿ, ಬೆಳಗಾವಿಗೆ ಶೆಟ್ಟರ್..

ಭಾರತ ದಿವಾಳಿ ಆಗುವುದನ್ನು ತಪ್ಪಿಸಲು ದೇಶಕ್ಕೆ ಮೋದಿ, ಬೆಳಗಾವಿಗೆ ಶೆಟ್ಟರ್ ಆಯ್ಕೆ ಅಗತ್ಯ: ಜಗದೀಶ್ ಮೆಟಗುಡ್ಡ

ಬೆಳಗಾವಿ: ಜಗತ್ತಿನ ಅನೇಕ ದೇಶಗಳು
ಎಲ್ಲವೂ ಉಚಿತ ನೀಡಿ, ಬಳಿಕ ದಿವಾಳಿ ಆಗಿದೆ.‌ ಹಾಗಾಗಿ ಭಾರತದ ಪರಿಸ್ಥಿತಿ ಅರ್ಥ ಮಾಡಿಕೊಂಡು ದೇಶಕ್ಕೆ ಮೋದಿಯವರು ಮತ್ತೆ ಪ್ರಧಾನಿ ಮತ್ತೆ ಆಗಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಕಸ ಜಗದೀಶ ಮೆಟಗುಡ್ಡ ಅವರು ತಿಳಿಸಿದರು.

ಬುಧವಾರ ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಲಹೊಂಗಲ ಮತಕ್ಷೇತ್ರದ ತಡಸಲೂರ ಗ್ರಾಮದ ಚನ್ನಮ್ಮನವರ ಓಣಿಯ ವಾಲ್ಮೀಕಿ ದೇವಸ್ಥಾನದ ಹತ್ತಿರ ಪ್ರಚಾರ ಸಭೆ ನಡೆಸಿ, ಮಾತನಾಡಿದ ಅವರು, ವೇನಿಜೋಲಾ ದೇಶ ಇದೊಂದು ಪ್ರೆಟ್ರೋಲಿಯಂ ಉತ್ಪತ್ತಿ ಮಾಡುವ ದೇಶ, ಆ ದೇಶ ಅಲ್ಲಿನ ಜನರಿಗೆ ಎಲ್ಲವೂ ಉಚಿತ ನೀಡಿ ದಿವಾಳಿ ಆಗಿದೆ.‌ ಪಕ್ಕದ ದೇಶ ಶ್ರೀಲಂಕಾದಲ್ಲಿ ಒಂದೆ ಮನೆತನೆ ಆಳ್ವಿಕೆ ಮಾಡಿ ಇಡೀ ದೇಶವನ್ನೆ ಹಾಳು ಮಾಡಿದೆ. ಶ್ರೀಲಂಕಾ ಟೂರಿಸಂ ನಲ್ಲಿ ಜಗತ್ತಿನಲ್ಲೇ 10ನೆ ಸ್ಥಾನದಲ್ಲಿ ಇತ್ತು, ಅಂತಹ ದೇಶವೇ ಹಾಳಾಗಿದೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪ್ರಧಾನಿ ಆದ ಬಳಿಕ ಬೆಲೆಗಳು ಗಗನಕ್ಕೆ ಏರಿ ಪಾಕಿಸ್ತಾನವು ದಿವಾಳಿ ಆಗಿದೆ. ಪಾಕಿಸ್ತಾನದಲ್ಲೇ ಮೋದಿ ಅಂತಹ ಪ್ರಧಾನಿ ಬೇಕು ಎಂದು ಅಲ್ಲಿಯ ಜನರು ಹೇಳುತ್ತಾರೆ. ಆದರೆ ಕರ್ನಾಟಕದ ವಿಧಾನಸಭೆಯಲ್ಲೇ ಪಾಕಿಸ್ತಾನ ಜಿಂದಾಬಾದ ಎಂದು ಘೋಷಣೆ ಕುಗುತ್ತಿದ್ದಾರೆ. ನರೇಂದ್ರ ಮೋದಿಯವರ ಪ್ರಭಾವ ನಮ್ಮ ಜನರಿಗೆ ತಿಳಿಯುತ್ತಿಲ್ಲ. ಆದರೆ ಬೇರೆ ದೇಶ ಮೋದಿ ನಾಯಕತ್ವ ಒಪ್ಪಿಕೊಂಡಿದ್ದಾರೆ ಎಂದು ತಳಿಸಿದರು.

ವಿಶೇಷವಾಗಿ ನರೇಂದ್ರ ಮೋದಿಯವರನ್ನು ಮೂರನೆ ಸಲ ಪ್ರಧಾನಿಯನ್ನಾಗಿ ಮಾಡಬೇಕು.‌ ಮೋದಿಯವರು ಮೂರನೆ ಸಲ ಪ್ರಧಾನಿ ಆಗವಬೇಕು ಎಂದರೆ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು. ಹಾಗಾಗಿ ಮಾರ್ಚ್ 7 ರಂದು ನಡೆಯುವ ಮತದಾನದ ದಿನ ಎಲ್ಲರೂ ಕಮಲದ ಚಿನ್ಹೆಗೆ ಮತ ನೀಡಿ, ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು‌.‌

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಲಿದೆ. ಬೆಳಗಾವಿ ಲೋಕಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೂ ಅವರು ಯಾವುದೆ ಕೇಲಸ ಮಾಡುವದಿಲ್ಲ. ಹಾಗಾಗಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.‌

ಜಗದೀಶ್ ಶೆಟ್ಟರ್ ಅವರು ಮಾತನಾಡಿ, ನರೇಂದ್ರ ಮೋದಿ ಅವರ 10 ವರ್ಷಗಳ ಸಾಧನೆ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಕೈಗೊಂಡ ಕ್ರಮಗಳ ಕುರಿತು ಮಾತನಾಡಿದರು.‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡದರು.‌

ಈ ಸಂದರ್ಭದಲ್ಲಿ ಡಾ. ವಿ.ಐ. ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ, ಮಂಡಲ ಅಧ್ಯಕ್ಷರಾದ ಗುರುಪಾದ ಕಳ್ಳಿ, ಪ್ರಮುಖರಾದ ಗುರು ಮೆಟಗುಡ್, ಸುನೀಲ್ ವರ್ಣೇಕರ, ಸುಭಾಷ ಬಾಗೇವಾಡಿ, ಬಸವರಾಜ ಬಂಡಿವಡ್ಡರ, ಝಡ್ ಪಿ ಮುರುಗೂಡ, ಈರಣ್ಣ ಹುಬ್ಬಳ್ಳಿ, ಗೂಳಪ್ಪ ಹೊಸಮನಿ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!