Headlines

ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಹವಾ

ಹೆಚ್ಚಿದ ಪ್ರಿಯಂಕಾ ಜಾರಕಿಹೊಳಿ ಹವಾ..!*

  • ಮಂಕು ಕವಿದ ಬಿಜೆಪಿ ಪಾಳಯ, ಗೆಲುವಿಗೆ ಸಿದ್ಧ‘ಹಸ್ತ’-
  • ಬೆಳಗಾವಿ : ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ವರ್ಣರಂಜಿತ ವ್ಯಕ್ತಿತ್ವದಿಂದ ಗಮನ ಸೆಳೆಯುವ ಚಿಕ್ಕೋಡಿ ಇದೀಗ ಸಾರ್ವತ್ರಿಕ ಲೋಕಸಮರದ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ರಾಜಕೀಯವಾಗಿ ಪ್ರಬಲವಾಗಿರುವ ಎರಡು ಕುಟುಂಬಗಳ ಪ್ರತಿಷ್ಠೆಯ ಕಣವಾಗಿರುವ ಚಿಕ್ಕೋಡಿ ಲೋಕಸಭೆ ಕ್ಷೇತ್ರ ಈ ಬಾರಿ ಮತ್ತೊಮ್ಮೆ ಜಿದ್ದಾಜಿದ್ದಿನ ಹೋರಾಟದ ಅಖಾಡವಾಗಿದೆ.

ಹಾಲಿ ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮರುಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಇವರಿಗೆ ಈ ಬಾರಿ ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಎದುರಾಳಿ. ಬಿಜೆಪಿ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದ್ದರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಿವಿಧ ಪ್ರತಿತಂತ್ರಗಳನ್ನು ಹೆಣೆದು ಕೈ ವಶ ಮಾಡಿಕೊಳ್ಳಲು ಹವಣಿಸುತ್ತಿದೆ.

ಈ ಲೋಕಸಭೆ ವ್ಯಾಪ್ತಿಗೆ ಬರುವ ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಇದೀಗ ಮತ ಸಮರದ ಭರಾಟೆ ಪ್ರಖರ ಬಿಸಿಲಿನೊಂದಿಗೆ ಏರತೊಡಗಿದೆ. ಕ್ಷೇತ್ರದಲ್ಲಿ ಸಚಿವ ಸತೀಶ ಜಾರಕಿಹೊಳಿ ಮತ್ತವರ ತಂಡ ಪರಿಣಾಮಕಾರಿಯಾಗಿ ಮತಪ್ರಚಾರದಲ್ಲಿ ತೊಡಗಿದ್ದರಿಂದ ಕೈ ಪಡೆ ಮುಂಚೂಣಿಯಲ್ಲಿದೆ. ಸದ್ಯದ ಮತಪ್ರಚಾರದಲ್ಲಿ ಕಾಂಗ್ರೆಸ್‍ಗೆ ಮುನ್ನಡೆ ಕಂಡು ಬರುತ್ತಿದ್ದರೆ, ಬಿಜೆಪಿ ಪಾಳಯದಲ್ಲಿ ಮಂಕು ಕವಿದ ವಾತಾವರಣ ಸೃಷ್ಟಿಯಾದಂತಿದೆ.

ಜೊಲ್ಲೆ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಜೊತೆಗೆ ಹಿಂದಿನ ಚುನಾವಣೆಯಲ್ಲಿ ಸುಲಭವಾಗಿ ಗೆಲುವಿನ ದಡ ಸೇರಿದ್ದ ಜೊಲ್ಲೆ ಈ ಬಾರಿ ಗೆಲುವಿಗೆ ಬೆವರು ಹರಿಸಬೇಕಾಗಿದೆ.
ಇನ್ನು ಈ ಬೆಳವಣಿಗೆ ಕಾಂಗ್ರೆಸ್‍ಗೆ ವರದಾನವಾಗಿದ್ದು ಇದನ್ನೇ ಎನಕ್ಯಾಶ್ ಮಾಡಿಕೊಂಡು ಸತೀಶ ಜಾರಕಿಹೊಳಿ ಅವರು ತಮ್ಮ ಸಕ್ರೀಯ ತಂಡವನ್ನು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ.

ಈಗಾಗಲೇ ಒಂದು ಸುತ್ತಿನ ಭರ್ಜರಿ ಪ್ರಚಾರ ನಡೆಸಿ ತಮ್ಮ ಮಗಳ ಐತಿಹಾಸಿಕ ಗೆಲುವಿಗೆ ಮುನ್ನುಡಿ ಬರೆದಂತಿದ್ದಾರೆ. ಮಿಂಚಿನ ವೇಗದಲ್ಲಿ ಸಂಚರಿಸಿ ಭರ್ಜರಿ ಮತಬೇಟೆ ನಡೆಸಿದರು.

ಬಿಜೆಪಿ ಪ್ರಭಾವಿ ಮುಖಂಡರ ಮನೆಗಳಿಗೂ ಭೇಟಿ ನೀಡಿ ಕೆಲಹೊತ್ತು ಗಹನ ಚರ್ಚೆ ನಡೆಸಿ ಬಿಜೆಪಿಗೇ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಇದು ಭಾರಿ ಸಂಚಲನ ಮತ್ತು ಕುತೂಹಲ ಮೂಡಿಸಿದೆ. ಈ ಮೂಲಕ ಸಚಿವರು ಎದುರಾಳಿ ಬಿಜೆಪಿ ವಲಯ ವಿಚಲಿತಗೊಳ್ಳುವಂತೆ ಮಾಡಿದ್ದಾರೆ.

ಇದರೊಂದಿಗೆ ಸಚಿವ ಸತೀಶ ಜಾರಕಿಹೊಳಿ ಜಾಣ್ಮೆ ಮೆರೆದು ರಾಜಕೀಯ ದಾಳ ಉರುಳಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ದಿಢೀರ್ ಬೆಳವಣಿಗೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ಮುಖಂಡರ ಮನೆಗಳಲ್ಲಿ ನಡೆಸಿರುವ ಚರ್ಚೆ ಹಲವರನ್ನು ಹುಬ್ಬೇರುವಂತೆ ಮಾಡಿದ್ದಲ್ಲದೇ ವಿರೋಧಿಗಳ ನಿದ್ದೆಗೆಡಿಸಿದಂತೂ ಸುಳ್ಳಲ್ಲ.

ಈ ಬೆಳವಣಿಗೆಯಿಂದ ಸಹಜವಾಗಿ ಕಾಂಗ್ರೆಸ್‍ಗೆ ಹರಿದು ಬರುವ ಮತಗಳ ಪ್ರಮಾಣವೂ ಹೆಚ್ಚಾಗಲಿದೆ. ಬಿಜೆಪಿ ಲೆಕ್ಕಾಚಾರವನ್ನೇ ಬುಡಮೇಲು ಮಾಡಿರುವ ಈ ವಿದ್ಯಮಾನದಿಂದ ಕಮಲ ಪಡೆ ಕಕ್ಕಾಬಿಕ್ಕಿಯಾದಂತಿದೆ. ಇನ್ನು ಬಿಜೆಪಿ ಮುಖಂಡರ ಮನೆಯಲ್ಲೇ ಸ್ನೇಹಭೋಜನ ಏರ್ಪಡಿಸಿರುವುದು ಕಮಲ ಪಾಳಯಕ್ಕೆ ಚೇತರಿಸಿಕೊಳ್ಳಲಾಗದಷ್ಟು ಪೆಟ್ಟು ನೀಡಿದೆ.

ಕಾಂಗ್ರೆಸ್ ಟೀಮ್ ವರ್ಕ
ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗೆ ಎಲ್ಲ ರೀತಿಯಲ್ಲಿ ಶ್ರಮ ವಹಿಸಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಟೀಮ್ ವರ್ಕ್ ನಡೆಸಿದೆ.

  • ಮಲ್ಲಿಕಾರ್ಜುನ್ ರಾಶಿಂಗೆ, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರು

ಜಯ ಶತಸಿದ್ಧ
ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಜಾರಕಿಹೊಳಿ ಕುಟುಂಬ ಸಮಾಜಸೇವೆಯಲ್ಲಿ ತೊಡಗಿದೆ. ಜನಪರ, ಮುತ್ಸದ್ದಿ ರಾಜಕಾರಣಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಜಯ ಸಾಧಿಸುವುದು ಶತಸಿದ್ಧ.

  • ಮೌನೇಶ್ ಪೋತದಾರ್, ಯುವ ಮುಖಂಡರು

Leave a Reply

Your email address will not be published. Required fields are marked *

error: Content is protected !!