ಇದು ಫೊಟೊ ವೈರಲ್ ಕಾಲ..!
ಬೆಳಗಾವಿ. ಬಿದ್ದಾಗ ಆಳಿಗೊಂದು ಕಲ್ಲು ಎನ್ನುವ ಮಾತಿದೆ. ಅದು ಸಹಜ ಕೂಡ ಹೌದು. ಹುಬ್ಬಳ್ಳಿಯ ನೇಹಾ ಹಿರೇಮಠ ಬರ್ಬರ ಹತ್ಯೆಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಫೊಟೊಗಳ ವೈರಲ್ ಮಾಡುವುದು ಶುರುವಾಗಿದೆ. ಆರಂದಲ್ಲಿ ಫಯಾಜನು ನೇಹಾಳನ್ನು ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಯಿತು. ಅದು ಕೂಡ ಸಿಕ್ಕಾಪಟ್ಟೆ ವೈರಲ್ ಆಯಿತು. ಅದನ್ನು ಗಮನಿಸಿದ ನಂತರ ಆಕ್ರೋಶಿತಗೊಂಡ ಜನ ಫಯಾಜಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಆದರೆ ಇದೆಲ್ಲ ಒಂದು ಕಡೆ ನಡೆದಿರುವಾಗ ಸಿಕ್ಕಿಬಿದ್ದ ಫಯಾಜನನ್ನು ಹುಬ್ಬಳ್ಳಿ ಪೊಲೀಸರು ತಮ್ಮವಶಕ್ಕೆ…