Headlines

ಮಧ್ಯರಾತ್ರಿ ಯಿಂದಲೇ ಪೊಲೀಸ್ ಆಯುಕ್ತರ ಮನೆ ಮುಂದೆ ಧರಣಿ

ಬೆಳಗಾವಿ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಮಧ್ಯರಾತ್ರಿ 1 ರಿಂದಲೇ ಪೊಲೀಸ್ ಅಯುಕ್ತರ ನಿವಾಸದ ಮುಂದೆ ಧರಣಿ ನಡೆಸಲು ಬಿಜೆಪಿಗರು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.

ಹಣ ಹಂಚುವವರ ವಿರುದ್ಧ ಪೊಲೀಸರಿಗೆ ಒಪ್ಪಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಈ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.

ಮತ್ತೊಂದು ಮೂಲಗಳ ಪ್ರಕಾರ ಬೆಳಗಾವಿಯಲ್ಲಿ ಸಿಎಂ ತಂಗಿರುವ ಯು.ಕೆ 27 ಮುಂದೆ ಧರಣಿ ನಡೆಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ

ಅಷ್ಟೇ ಅಲ್ಲ ಬೆಳಗಾವಿಯಲ್ಲಿ 6 ಕಡೆಗೆ ರಸ್ತೆ ತಡೆ ನಡೆಸಲು ಸಹ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಣ ಹಂಚುವವರನ್ನು ಹಿಡಿದುಕೊಟ್ಟರೂ ಕಾಂಗ್ರೆಸ್ ನವರು ಅವರನ್ನು ಶಹಾಪುರ ಠಾಣೆಯಿಂದ ಬಿಡಿಸಿಕೊಂಡು ಹೋಗಿದ್ದರೂ ಕೂಡ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!