ಕುಡಿಯುವ ನೀರು ಪೂರೈಕೆ ಯೋಜನೆಗೆ ಅಡ್ಡಿ’
ಬೆಳಗಾವಿ ದಕ್ಷಿಣ ಕ್ಷೇತ್ರದ ವಾರ್ಡ ೪೩ ರಲ್ಲಿ ನಿರಂತರ ನೀರು ಪೂರೈಕೆ ಯೋಜನೆ
PWD ರಸ್ತೆ ಅಗೆಯಲು ಅನುಮತಿ ನೀಡದ ಅಧಿಕಾರಿ.
Land T ವಿರುದ್ಧ ಅಧಿಕಾರಿ ಮುನಿಸು
ಸಮಸ್ಯೆ ಬಗೆಹರಿಸಿ ಎಂದ ಶಾಸಕ ಅಭಯ ಪಾಟೀಲ.
ಕುಡಿಯುವ ನೀರು ಪೂರೈಕೆ ಯೋಜನೆಗೆ ಅಡ್ಡಿ ಇಲ್ಲ ಎಂದ ಸಚಿವ ಸತೀಶ ಜಾರಕಿಹೊಳಿ.
ಬೆಳಗಾವಿ.
ಬಿಜೆಪಿ ಹಿಡಿತದ ಕ್ಷೇತ್ರಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡುತ್ತಿದೆಯೇ? ಅಥವಾ ಸಂಬಂಧಿಸಿದ ಅಧಿಕಾರಿಗಳೇ ಈ ರೀತಿ ತಪ್ಪು ಸಂದೇಶವನ್ನು ಜನರಿಗೆ ನೀಡುತ್ತಿದ್ದಾರೆಯೇ?
ಅಂತಹ ಅನುಮಾನ ಈಗ ಬೆಳಗಾವಿಗರನ್ನು ಕಾಡುತ್ತಿದೆ. ಅಷ್ಟೇ ಅಲ್ಲ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಸಹ ಮುಗಿಲು ಮುಟ್ಟಿದೆ.
ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರು ಪೂರೈಕೆ ಯೋಜನೆಗೆ ಅಡ್ಡಿ ಮಾಡಬಾರದು ಎನ್ನುವುದು ಸರ್ಕಾರದ ಉದ್ದೇಶ,
ಸರ್ಕಾರ ಕೂಡ ಈ ನಿಟ್ಟಿನಲ್ಲಿ ಅನೇಕ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬೆಳಗಾವಿ ಲೋಕೋಪಯೋಗಿ ಇಲಾಖೆಯ ಅಭಿಯಂತ ಮೇತ್ರಿ ಎಂಬುವರು ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಪ್ರಸ್ತಾಪಿಸಿ ನೀರು ಪೂರೈಕೆ ಯೋಜನೆಗೆ ನಾಳೆ ಬಾ ಎನ್ನುತ್ತಿರುವುದು ಜನರ ಆಕ್ರೋಶಕ್ಕೆ ಕಾರಣ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲರು ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ, ಈಗಾಗಲೇ ಭಾಗ್ಯನಗರ ಸೇರಿದಂತೆ ಇನ್ನೂ ಕೆಲವೆಡೆ ಈ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ,
ಈಗ ಅದನ್ನು ಇನ್ನುಳಿದ ವಾರ್ಡಗಳಿಗೂ ವಿಸ್ತರಿಸಬೇಕು ಎನ್ನುವ ಉದ್ದೇಶದಿಂದ ಎಲ್ ಆ್ಯಂಡ್ ಟಿ ಕಂಪನಿ ಮೂಲಕ ಕಾಮಗಾರಿಗೆ ಅದರ ಜವಾಬ್ದಾರಿಯನ್ನು ವಹಿಸಲಾಗಿತ್ತು,
ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಬವಣೆಯನ್ನು ಎದುರಿಸುತ್ತಿರುವ ವಾರ್ಡ ನಂಬರ 43 ಚಿದಂಬರ ನಗರ ಸೇರಿದಂತೆ ಇನ್ನಿತರ ಕಡೆಗೆ ನಿರಂತರ ನೀರು ಪೂರೈಕೆ ಮಾಡುವ ಉದ್ದೇಶದಿಂದ ಅನಗೋಳ ನಾಕಾ ಬಳಿ ದೊಡ್ಡದಾದ ನೀರು ಸಂಗ್ರಹ ಟ್ಯಾಂಕನ್ನು ನಿಮರ್ಿಸಲಾಯಿತು, ಅಷ್ಟೇ ಅಲ್ಲ ಚಿದಂಬರ ನಗರ ಸೇರಿದಂತೆ ಮೃತುಂಜಯ ನಗರ ಮತ್ತು ಇನ್ನಿತರ ತಡೆಗೆ ಮನೆ ಮನೆ ಸಂಪರ್ಕ ಕಲ್ಪಿಸಲು ಹೊಸ ಪೈಪಲೈನ್ ಕೂಡ ಹಾಕುವ ಕೆಲಸ ಕೂಡ ಮುಗಿದಿದೆ,
ಚಿದಂಬರ ನಗರದ ದೇವಸ್ಥಾನಲ್ಲಿ ಇಂದು ಎಲ್ ಆ್ಯಂಡ್ ಟಿ ಕಂಪನಿಯ ಸಿಬ್ಬಂದಿಗಳು ಮನೆ ಮನೆ ಸಂಪರ್ಕ ಕೊಡುವ ನಿಟ್ಟಿನಲ್ಲಿ ದಾಖಲೆ ಸಂಗ್ರಹಿಸುವ ಕೆಲಸವನ್ನು ಮಾಡಿದರು,
ಆದರೆ ಈಗ ನೀರು ಸಂಗ್ರಹ ಟ್ಯಾಂಕ್ನಿಂದ ಮನೆ ಮನೆಗೆ ಪೂರೈಕೆ ಮಾಡುವ ಸಂಪರ್ಕ ಕಲ್ಪಿಸುವ ಮಧ್ಯದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಬರುತ್ತದೆ,. ಅದನ್ನು ಅಗೆದು ಅಲ್ಲಿ ಪೈಪ್ ಲೈನ ಹಾಕಿದರೆ ಮಾತ್ರ ಜನರಿಗೆ ನಿರಂತರ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ,
ಆದರೆ ಅದಕ್ಕೆ ಲೋಕೋಪಯೋಗಿ ಇಲಾಖೆಯ ಅಭಿಯಂತ ಮೇತ್ರಿ ಎಂಬುವವರು ಅದಕ್ಕೆ ಅಡ್ಡಿ ಮಾಡಿ ಕೆಲಸವನ್ನು ಸ್ಥಗಿತಗೊಳಿಸಿದರು, ಅಷ್ಟೇ ಅಲ್ಲ ಇದಕ್ಕೆ ಅನುಮತಿ ಕೊಡುವುದಿಲ್ಲ ಎನ್ನುವ ಮಾತುಗಳನ್ನು ಆಡಿದರು ಎಂದು ಗೊತ್ತಾಗಿದೆ.
ಈ ರಸ್ತೆ ಅಗೆದು ನೀರಿನ ಸಂಪರ್ಕ ಕಲ್ಪಿಸಲು ಕೋರಿ ಅನುಮತಿ ಕೊಡಬೇಕು ಎನ್ನುವ ಪತ್ರವನ್ನು ಲೋಕೋಪಯೋಗಿ ಇಲಾಖೆಗೆ ಪತ್ರವನ್ನು L AND T ಕಂಪನಿಯವರು ನೀಡಿದ್ದಾರೆ,
ಈ ಬಗ್ಗೆ ಎಲ್ ಆ್ಯಂಡ್ ಟಿ ಕಂಪನಿಯವರು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ನಗರ ಸೇವಕಿ ವಾಣಿ ಜೋಶಿ ಕೂಡ ನಮ್ಮ ವಾರ್ಡನ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ವಿಳಂಬ ಮಾಡಬೇಡಿ ಎಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ, ಹೀಗಾಗಿ ಅವರು ಅದನ್ನು ಶಾಸಕರ ಗಮನಕ್ಕೂ ತಂದಿದ್ದಾರೆ,

ಕುಡಿಯುವ ನೀರಿಗೇಕೆ ಅಡ್ಡಿ..:?
ಕೆಲವೊಂದು ಕಡೆಗೆ ಗುಡ್ಡ ಅಗೆದು ನೀರು ಕೊಡುವ ಕೆಲಸವನ್ನು ಸಕರ್ಾರ ಮಾಡಿದೆ. ಸಚಿವ ಸತೀಶ ಜಾರಕಿಹೊಳಿ ಕೂಡ ನೀರು ಪೂರೈಕೆ ವಿಷಯದಲ್ಲಿ ಅಡ್ಡಿ ಬೇಡ ಎನ್ನುವ ಮಾತುಗಳನ್ನು ಆಡುತ್ತಲೇ ಬಂದಿದ್ದಾರೆ,
ಆದರೆ ಬೇರೆ ಕಾರಣಕ್ಕೆ ಹೇಳಿದ ಮಾತನ್ನೇ ನೆಪವಾಗಿಟ್ಟುಕೊಂಡು ಲೋಕೋಪಯೋಗಿ ಇಲಾಖ ಅಧಿಕಾರಿಗಳು ರಸ್ತೆ ಅಗೆಯಲು ಅನುಮತಿ ಕೊಡುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
ಇಲ್ಲಿ ಪಿಡಬ್ಲುಡಿ ರಸ್ತೆ ಅಗೆದರೆ ಅದರ ದುರಸ್ತಿ ವೆಚ್ಚವನ್ನು ಭರಿಸಿಕೊಂಡು ಅನುಮತಿ ಕೊಡುವ ಕೆಲಸವಮನ್ನು ಸಂಬಂಧಿಸಿದವರುಯ ಮಾಡಬೇಕಿತ್ತು, ಆದರೆ ಸಚಿವರ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಜನರ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಅಡ್ಡಿ ಮಾಡುವುದು ಯಾವ ನ್ಯಾಯ ಎನ್ನುವುದು ಜನರ ಪ್ರಶ್ನೆ.

ಸಚಿವರೇ ಹೇಳಿದ್ದಾರೆ..!
ಬೆಳಗಾವಿಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ಯಾವುದೇ ಪೂರ್ವಾನುಮತಿಯಿಲ್ಲದೇ ರಸ್ತೆ ಅಗೆಯುವ ಕೆಲಸವನ್ನು ಮಾಡುತ್ತಿದ್ದಾರೆ, ಸಚಿವರೂ ಕೂಡ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಅಗೆಯಲು ಯಾವುದೇ ಸಂದರ್ಭದಲ್ಲೂ ಅನುಮತಿ ಕೊಡಬಾರದು, ಬೇಕಿದ್ದರೆ ಅದನ್ನು ಸರ್ಕಾರದಿಂದ ತೆಗೆದುಕೊಂಡು ಬರಲಿ ಎಂದು ಸೂಚನೆ ನೀಡಿದ್ದಾರೆ,
ಈ ಹಿನ್ನೆಲೆಯಲ್ಲಿ ರಸ್ತೆ ಅಗೆಯಲು ಅನುಮತಿ ನೀಡಿಲ್ಲ. ನಾನು ಚುನಾವಣೆಯಲ್ಲಿ ಬ್ಯೂಜಿ ಇದ್ದುದರಿಂದ ಈ ಕೆಲಸದಲ್ಲಿ ವಿಳಂಬವಾಗಿದೆ, ಈಗ ಅದರ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ.
ಮೇತ್ರಿ. ಅಭಿಯಂತರರು. ಲೋಕೋಪಯೋಗಿ ಇಲಾಖೆ, ಬೆಳಗಾವಿ

ಅಡ್ಡಿ ಸಲ್ಲದು..
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಎಲ್ಲರಿಗೂ ನಿರಂತರ ನೀರು ಸಿಗಬೇಕು ಎನ್ನುವ ನಿಟ್ಟಿನ;ಲ್ಲಿ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಯಾರೂ ಕುಡಿಯುನ ನೀರು ಪೂರೈಕೆಗೆ ಅಡ್ಡಿ ಮಾಡುವುದು ಸರಿಯಲ್ಲ. ಏನೇ ಸಮಸ್ಯೆ ಇದ್ದರೂ ಕೂಡ ಅಧಿಕಾರಿಗಳು ತಕ್ಷಣ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು,
ಅಭಯ ಪಾಟೀಲ,.
ಶಾಸಕರು. ಬೆಳಗಾವಿ ದಕ್ಷಿಣ

ಅನುಮತಿ ಕೊಡಿಸಲಾಗುವುದು..
ಕುಡಿಯುವ ನೀರು ಪೂರೈಕೆಗೆ ನಮ್ನಸರ್ಕಾರ ಪ್ರಥಮ ಆಧ್ಯತೆ ನೀಡುತ್ತದೆ. ಬೆಳಗಾವಿಯ ಅನಗೋಳ ಬಳಿ ಇರುವ ನೀರು ಪೂರೈಕೆ ಯೋಜನೆಗೆ ಅನುಮತಿ ಕೊಡಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
ಸತೀಶ ಜಾರಕಿಹೊಳಿ
ಸಚಿವರು. ಜಿಲ್ಲಾ ಉಸ್ತುವಾರಿ. ಬೆಳಗಾವಿ.

ಸಮಸ್ಯೆ ಬಗೆಹರಿಸಿ
ಶಾಸಕ ಅಭಯ ಪಾಟೀಲರ ಸತತ ಪ್ರಯತ್ನದ ಫಲವಾಗಿ ನಮ್ಮ ವಾರ್ಡ ಸೇರಿದಂತೆ ಇನ್ನಿತರ ಕಡೆಗೆ ನಿರಂತರ ನೀರು ಪೂರೈಕೆ ಯೋಜನೆ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಮುಖ್ಯಲೈನ್ ದಿಂದ ಸಬಲೈನ್ ಗೆ ಸಂಪರ್ಕ ಕೊಡುವ ಮಧ್ಯೆ ಲೋಕೋಪಯೋಗಿ ಇಲಾಖೆ ರಸ್ತೆ ಬರುತ್ತದೆ, ಅದಕ್ಕೆ ಪಿಡಬ್ಲುಡಿಯವರು ಅನುಮತಿ ಕೊಟ್ಟರೆ ಬೇಗನೆ ಮುಗಿಯುತ್ತದೆ, ಜನರಿಗೂ ಅನುಕೂಲವಾಗುತ್ತದೆ.
ವಾಣಿ ಜೋಶಿ. ನಗರಸೇವಕಿ. ಮಹಾನಗರ ಪಾಲಿಕೆ, ಬೆಳಗಾವಿ