ಅಭಯ ಪಾಟೀಲ ಆರೋಪ
ಇದು ಅನುದಾನ ರಹಿತ ಸರ್ಕಾರ.
ವರ್ಷಕ್ಕೆ 11 ರೂ ಸಹ ಬಂದಿಲ್ಲ. ಜನ ಶಾಸಕರನ್ನು ಊರಿಗೆ ಬರಕೊಡಲ್ಲ.
ಮೇಯರ್ ಕೊಠಡಿ ಬೀಗ ತೆಗೆಸ್ರಿ.ಇಲ್ಕಂದ್ರ ನಿಮ್ಮ ಕೊಠಡಿಗೆ ಬೀಗ ಹಾಕ್ತೇವೆ
ಲೋಕಸಭೆ ಫಲಿತಾಂಶ ನಂತರ ಕಾಂಗ್ರೆಸ್ ಸರ್ಕಾರ ಢಮಾರ್
ಬೆಳಗಾವಿ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ
ಅನುದಾನ ರಹಿತ ಸರ್ಕಾರ’ವಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ವ್ಯಂಗ್ಯವಾಡಿದ್ದಾರೆ,
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರ ವಿದ್ದಾಗ ನಾನೃ ಒಂದು ವರ್ಷದಲ್ಲಿ ಬರೊಬ್ಬರಿ 300 ಕೋಟಿ ರು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೆ. ಆದರೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಳೆದ ಒಂದು ವರ್ಷದಿಂದು 11 ರೂ ಅನುದಾನ ಸಹ ಬಂದಿಲ್ಲ ಹೀಗಾಗಿ ನಾನೂ ಸಹ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗಿಲ್ಲ. ಇದೇ ರೀತಿ ಇನ್ನೂ 6 ತಿಂಗಳು ಗತಿಸಿದರೆ ಜನರು ನಮ್ಮನ್ನು ಊರಿಗೆ ಸಹ ಬರಲು ಬಿಡಲ್ಲ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಬಳ್ಳಾರಿ ನಾಲಾ ಹೂಳೆತ್ತುವ ಸಂಬಂಧ ಎರಡು ಸಲ ಪ್ರಸ್ತಾವನೆ ಕೆಳಿಸಲಾಗಿದೆ, ಬೊಮ್ನಾಯಿ ಸಕರ್ಾರ ಇದ್ದಾಗ 107 ಕೋಟಿ ರೂ ಅನುಮೋದನೆಯನ್ನೂ ಕೊಟ್ಟಿದೆ. ಆದರೆ ಕಾಂಗ್ರೆಸ ಸಕರ್ಾರ ಆ ಅನುದಾನವನ್ನು ತಡೆಹಿಡಿದಿದೆ ಎಂದು ಆರೋಪಿಸಿದರು,
ಇನ್ನೂ ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಸರ್ಕಾರ ಪತನವಾಗುತ್ತದೆ ಎನ್ನುವ ಸಂಗತಿಯನ್ನು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ, ಹೀಗಾಗಿ ಅದರಲ್ಲಿ ಅಚ್ಚರಿ ಪಡುವಂತಬಹುದು ಏನಿಲ್ಲ ಎಂದರು, ರಾಜ್ಯದಲ್ಲಿ 22 ಬಿಜೆಪಿ ಮತ್ತು 2 ಜೆಡಿಎಸ್.ಗೆಲ್ಲುತ್ತವೆ, ಬೆಳಗಾವಿಯಲ್ಲಿ 2 ಸೀಟುಗಳು ಬಿಜೆಪಿಗೆ ಬರುತ್ತವೆ. ಅದರಲ್ಲಿ ಅನುಮಾನವೇ ಇಲ್ಲ ಎಂದರು.

ಮೇಯರ್ ಕೊಠಡಿಗೆ ಬೀಗ…!
ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಹಾನಗರ ಪಾಲಿಕೆಯಲ್ಲಿರುವ ಮೇಯರ್ ಉಪಮೇಯರ್ ಯವರ ವಾಹನಗಳನ್ನು ವಶಕ್ಕೆ ತೆತೆದುಕೊಳ್ಳುತ್ತಿದ್ದರು, ಆದರೆ ಮೊಟ್ಟ ಮೊದಲ ಬಾರಿ ಅವರ ಕೊಠಡಿಗಳಿಗೆ ಬೀಗ ಹಾಕಿದ್ದಾರೆಂದು ಶಾಸಕ ಅಭಯ ಪಾಟೀಲ ಗರಂ ಆದರು,
ಹಾಗಿದ್ದರೆ ರಾಜ್ಯದ ಸಿಎಂ ಆಫೀಸ್ ಯಾಕೆ ಬಿಟ್ಟಿದ್ದೀರಿ, ಅದಕ್ಕೂ ಯಾಕೆ ಬೀಗ ಜಡಿದಿಲ್ಲ ಎಂದು ಪ್ರಶ್ನೆ ಮಾಡಿದರು,
ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಹೊಸ ಯೋಜನೆ ಘೋಷಣೆ ಮಾಡಬಾರದು ಎಂದಿದೆ,. ಆದ್ದರಿಂದ ತಕ್ಷಣ ನೀವು ನೀವು ಕಚೇರಿ ಬೀಗ ತೆಗೆಯಬೇಕು. ಇಲ್ಲವಾದರೆ ನಿಮ್ಮ ಕಚೇರಿಗೆ ನಾವು ಬೀಗ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು,

ಬೀದಿ ನಾಯಿಗಳ ಹಾವಳಿ..!
ಬೀದಿ ನಾಯಿ ಹಾವಳಿ ಬಗ್ಗೆ ಪಾಲಿಕೆಯವರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ, 8 ತಿಂಗಳ ಹಿಂದೆ ಟೆಂಡರ್ ಮಾಡಿದಾಗ ಯಾರೂ ಬರಲಿಲ್ಲ. ಅಸ್ಸಾಂ ನಿಂದ ಬಂದು ನಾಯಿ ಹಿಡಿಯುವ ಕೆಲಸ ನಡೆದಿತ್ತು, ಆದರೆ ಪ್ರಾಣಿ ಪ್ರಿಯರು ಅಡಚನೆ ಮಾಡುತ್ತಿದ್ದುದರಿಂದ ತೊಂದರೆ ಅಗುತ್ತಿದೆ, ಈ ನಿಟ್ಟಿನಲ್ಲಿ ಪಾಲಿಕೆ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು,