
ASP ಬರಮನಿಗೆ ತುರ್ತು ಬುಲಾವ್..!
ಬೆಳಗಾವಿ. ಪೊಲೀಸ್ ಇಲಾಖೆಯಲ್ಲಿ ಜಬರದಸ್ತ್ ಡೇರಿಂಗ್ ಅಧಿಕಾರಿ ಎಂದೇ ಹೆಸರಾದ ASP ನಾರಾಯಣ ಬರಮನಿ ಅವರಿಗೆ ತುರ್ತಾಗಿ ಬೆಳಗಾವಿಗೆ ತೆರಳುವಂತೆ ಸೂಚನೆಬನೀಡಲಾಗಿದೆ. ಬೆಳಗಾವಿ ಶಹಾಪುರದ ಅಳವಣಗಲ್ಲಿಯಲ್ಲಿಇಂದು ನಡೆದ ಮಕ್ಕಳ ಕ್ರಿಕೆಟ್ ಗಲಾಟೆ ಬೇರೆ ಬಣ್ಣ ಬಳಿದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಸೂಚನೆ ನೀಡಿದೆ ಎಂದು ಗೊತ್ತಾಗಿದೆ. ಈ ಹಿಂದೆ ಯಳ್ಳೂರಿನಲ್ಲಿ ಎಂಇಎಸ್ ಪುಂಡರು ಗಲಾಟೆ ನಡೆಸಿದ ಸಂದರ್ಭದಲ್ಲಿ ಹಿರಿಯ ಐಪಿಎಸ್ ಹೇಮಂತ ನಿಂಬಾಳ್ಕರ ಅವರನ್ನು ಬೆಳಗಾವಿಗೆ ಕಳಿಸಿತ್ತು.