ಬೆಳಗಾವಿ. ಮಕ್ಕಳ ಕ್ರಿಕೆಟ್ ಗಲಾಟೆ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದ ಶಹಾಪುರದಲ್ಲಿ ನಡೆದಿದೆ.


ಶಹಾಪುರ ಪ್ರದೇಶದ ಅಳವಣಗಲ್ಲಿಯಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಬಡೆದಿದೆ. ಇದು ವಿಕೋಪಕ್ಕೆ ಹೋಗಿ ಬೇರೆ ಬಣ್ಣ ಬಡೆದುಕೊಂಡಿದೆ. ನಂತರ ಕೆಲವರು ತೆರಳಿ ಒಬ್ಬ ಹುಡುಗನ ಮನೆ ಮೇಲೆ ಇಟ್ಟಿಗೆ ತೂರಾಟ ಮಾಡಿದರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಪರ, ವಿರೋಧದ ಘೋಷಣೆಗಳು ಮುಗಿಲು ಮುಟ್ಟಿದವು ಎನ್ನಲಾಗಿದೆ.
ಈ ಘಟನೆಯಲ್ಲಿ ಒಂದಿಬ್ಗರಿಗೆ ಪೆಟ್ಟಾಯಿತು ಎಂದು ಗೊತ್ತಾಗಿದೆ. ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ನಗರಸೇವಕರು ಸ್ಥಳಕ್ಕೆ ಧಾವಿಸಿದರು.ಆದರೆ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು ನಗರಸೇವಕರೊಂದಿಗೆ ವಾದ ನಡೆಸಿದರು. ನಂತರ ಶಹಾಪುರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು.