ಸಚಿವ ನಾಗೇಂದ್ರ ನಂತರ ಮತ್ಯಾರು? ಇನ್ನೂ ಕೆಲ ಸಚಿವರ ಅಸಲಿ ಮುಖ ಬಯಲಿಗೆ ಬರುವ ಸಾಧ್ಯತೆ ಮತ್ತೊಬ್ಬ ಸಚಿವರು ಭ್ರಷ್ಟಾಚಾರ ಪ್ರಕರಣದಲ್ಲಿ ತಂದಿದ್ದ ಸ್ಟೇ ತೆರವಿಗೆ ನಡೆದಿದೆ ಯತ್ನ. ನಂತರ ಉನ್ನತ ಮಟ್ಟದ ತನಿಖೆ ನಡೆದರೆ ಕುತ್ತು ಗ್ಯಾರಂಟಿ,
ಆ ಸ್ಟೇ ತೆರವಾದ್ರೆ ಅಪಾಯ ಗ್ಯಾರಂಟಿ ಬೆಂಗಳೂರು. ಹಿರಿಯ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದ ನಂತರ ಸಚಿವ ನಾಗೇಂದ್ರ ರಾಜೀನಾಮೆ ಕೂಗು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಸಚಿವ ನಾಗೇಂದ್ರಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ,ಇದೆಲ್ಲದರ ಮಧ್ಯೆ ಸಚಿವ ನಾಗೇಂದ್ರ ನಂತರ ಮತ್ಯಾವ ಸಚಿವರ ಭ್ರಷ್ಟಾಚಾರ ಬಯಲಾಗಲಿದೆ ಎನ್ನುವುದನ್ನು ಕಾದು ನೋಡಬೇಕು. ಅದಕ್ಕೆ ಕಾರಣ ಕೂಡ ಇದೆ,
ಮತ್ತೊಂದು ಕಡೆಗೆ ಸಚಿವರೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಕೋರ್ಟನಿಂದ ತಡೆಯಾಜ್ಞೆ ತಂಡಿದ್ದಾರೆ, ಅದನ್ನು ತೆರವುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಒಪ್ಪಿಸುವ ಕೆಲಸವೂ ಕೂಡ ತೆರೆಮರೆಯಲ್ಲಿ ಜೋರಾಗಿ ನಡೆದಿದೆ. ಇಲ್ಲಿ ತಡೆಯಾಜ್ಞೆ ತೆರವು ಆದರೆ ಇನ್ನೂ ಕೆಲವು ಸಚಿವರ `ಅಸಲಿ’ ಮುಖ ಕಳಚಲಿದೆ ಎನ್ನುವುದು ಸುಳ್ಳಲ್ಲ.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ. ಈ ಹಿಂದೆ ಬೆಳಗಾವಿ ತಾಲೂಕಿನ ಗುತ್ತಿಗೆದಾರ ಸಂತೋಷ ಪಾಟೀಲರ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ಲೋಕೋಪಯೋಗಿ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದೊದಗಿತ್ತು, ಆಗ ಕಾಂಗ್ರೆಸ್ನ ಕೆಲವರು ಇದರ ಬಗ್ಗೆ ಧ್ವನಿಎತ್ತಿದ್ದಲ್ಲದೇ ಅದನ್ನು ರಾಜಕೀಯವಾಗಿಯೂ ಬಳಸಿಕೊಂಡಿದ್ದರು, ಆ ಸಂದರ್ಭದಲ್ಲಿ ಗುತ್ತಿಗೆದಾರನು ಸಚಿವ ಈಶ್ವರಪ್ಪ ಹೆಸರಿನ ಮೇಲೆ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು, ಆಗ ಬಿಜೆಪಿ ಮುಖ್ಯಮಂತ್ರಿಗಳು ಈಶ್ವರಪ್ಪ ರಾಜೀನಾಮೆ ಪಡೆದುಕೊಂಡಿದ್ದರು, ನಂತರ ನಡೆದ ವಿಚಾರಣೆಯಲ್ಲಿ ಈಶ್ವರಪ್ಪ ಪ್ರಕರಣದಿಂದ ಆರೋಪ ಮುಕ್ತರಾದರು.
ಅಧಿಕಾರಿ ಆತ್ಮಹತ್ಯೆ.. ಈಗ ಕಾಂಗ್ರೆಸ್ ಸಕರ್ಾರದ ಅವಧಿಯಲ್ಲಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಹೆಸರು ತಳಕು ಹಾಕಿಕೊಂಡಿದೆ, ಈಗ ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ, ಆ ಸಚಿವರ ರಾಜೀನಾಮೆಗೆ ಜೂನ್ 6 ರ ಗಡುವು ನೀಡಿದೆ,. ಹೀಗಾಗಿ ಇಲ್ಲಿ ಮುಜುಗುರವನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಿದ್ದಾರೆಂದು ಹೇಳಲಾಗುತ್ತಿದೆ.