ದೆಹಲಿ ತಲುಪುವುದೇ ಕಾಂಗ್ರೆಸ್ ಗೆ ಅನುಮಾನ.
EXIT POLL ನಲ್ಲೇ ಎಕ್ಸಿಟ್ ಆದ ಕಾಂಗ್ರೆಸ್.
ಕರ್ನಾಟಕದಲ್ಲೂ ಕೈಕೊಟ್ಟ ಗ್ಯಾರಂಟಿ
ಬೆಂಗಳೂರು.
ಗುರಿ ತಲುಪಿ ಬಿಟ್ಟೆವು ಎನ್ನುವ ಭರವಸೆಯಲ್ಲಿ ವೇಗವಾಗಿ ಹೊರಟ ವ್ಯಕ್ತಿಯ ಕಾಲಿಗೆ ಮುಳ್ಳು ನಟ್ಟರೆ ಹೇಗೆ ಆಗುತ್ತೊ ಹಾಗೆ ಕಾಂಗ್ರೆಸ್ ಪರಿಸ್ಥಿತಿ ಆಗಿದೆ.
ರಾಷ್ಟ್ರವ್ಯಾಪಿ ಎಲ್ಲ ಟಿವಿ, ಮುದ್ರಣ ಮಾಧ್ಯಮಗಳು ಕಳೆದ ದಿನ ಹಿರಹಾಕಿದ EXIT POLL. CONGRESS. ನ ದೆಹಲಿ ಓಟಕ್ಕೆ ಬ್ರೆಕ್ ಬಿದ್ದಂತಾಗಿದೆ.

ಇಲ್ಲಿ ಎಕ್ಸಿಟ್ ಪೊಲ್ ಗಳ ಅಂಕಿ ಸಂಖ್ಯೆ ಹೆಚ್ಚುಕಡಿಮೆ ಆದರೂ ಕೂಡ ನರೇಂದ್ರ ಮೋದಿ ಅವರೇ ಮೂರನೇ ಅವಧಿಗೆ ಪ್ರಧಾನ ಮಂತ್ರಿ ಆಗುವುದನ್ನು ತಡೆಗಟ್ಟಲು ಇಂಡಿ ಒಕ್ಕೂಟದಿಂದ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ.
ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾಸರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸರಿಯಾಗಿಯೇ ಕೈ ಕೊಟ್ಟಿದೆ. ಸಧ್ಯ ಬಂದಿರುವ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ ಡಬಲ್ ಅಂಕಿ ದಾಟುವುದೂ ಕೂಡ ಅನುಮಾನ ಎನ್ನುವ ಮಾತುಗಳಿವೆ.
ಬಿಜೆಪಿ ಕನಿಷ್ಟ 20 ರಿಂದ 22 ಸ್ಥಾನಗಳನ್ನು ಗೆದ್ದರೆ ಜೆಡಿಎಸ್ 2 ಸ್ಥಾನ ಗೆಲ್ಲುತ್ತದೆ ಎನ್ನುವ ಅಂಶ ಹೊರಬಿದ್ದಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನ ಕೆಲ ಘಟಾನುಘಟಿಗಳು ಗೆದ್ದೇ ಬಿಟ್ಟೆವು ಎನ್ಬುವ ಭ್ರಮೆಗೆ ಪೆಟ್ಟು ಬೀಳುವುದು ಗ್ಯಾರಂಟಿ. ಇಲ್ಲಿ ಹಾಗೇನಾದರೂ ಆದರೆ ಸಿದ್ಧರಾಮಯ್ಯನವರ ನಂತರ ಎರಡನೇ ಅವಧಿಗೆ ಕಾಂಗ್ರೆಸ್ ನವರೇ ಸಿಎಂ ಆಗ್ತಾರಾ ಎನ್ನುವ ಸಂಶಯ ಬಹುತೇಕರನ್ನು ಕಾಡತೊಡಗಿದೆ. ಮೂಲಗಳ ಪ್ರಕಾರ ಮಹಾ ಮಾದರಿ ಆಪರೇಷನ್ ನಡೆದರೂ ಅಚ್ಚರಿ ಪಡಬೇಕಿಲ್ಲ.