ವಿಪಕ್ಷ ನಾಯಕನ ಸ್ಥಾನದಿಂದ ಅಶೋಕ್ ಎತ್ತಂಗಡಿ ಸಾಧ್ಯತೆ ?
E belagavi ವಿಶೇಷ ಲೋಕಸಭೆ ಚುನಾವಣಾ ಫಲಿತಾಂಶ ಹೊರ ಬೀಳಲು ಇನ್ನು ಒಂದೇ ದಿನ ಬಾಕಿ ಇರುವ ಹಂತದಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳು ಆಗುವ ಸೂಚನೆ ಸಿಕ್ಕಿದೆ.ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ಚಿಕ್ಕಮಗಳೂರಿನ ಸಿ.ಟಿ.ರವಿ ಯವರನ್ನು ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಬಿಜೆಪಿ ಪ್ರಕಟಿಸಿರುವುದು ಹಲವು ಊಹೋಪೋಹಗಳಿಗೆ ಕಾರಣವಾಗಿದ್ದು ವಿಧಾನ ಪರಿಷತ್ತು ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕರುಗಳ ಬದಲಾವಣೆ ಮಾತುಗಳೂ ಕೇಳಿ ಬರುತ್ತಿವೆ. ಹಾಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು…