Headlines

ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ-Satish Jarkiholi

ಲೋಕಸಭೆ ಫಲಿತಾಂಶ: ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ

ಚಿಕ್ಕೋಡಿ:

ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ವಿಚಾರಯಾಗಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಕೆಲವೊಂದು ಸಮೀಕ್ಷೆಗಳು ಕಾಂಗ್ರೆಸ್‌ಗೆ ಮುನ್ನಡೆ ಆಗಲಿದೆ ಎಂಬ ಸುಳಿವನ್ನೂ ನೀಡಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಈಗಾಗಲೇ ಮತ ಹಾಕಿಯಾಗಿದೆ. ಜನರೇ ಈ ವಿಚಾರದಲ್ಲಿ ಗೊಂದಲ್ಲಿದ್ದಾರೆ. ಫಲಿತಾಂಶಕ್ಕೆ ತುಂಬಾ ಸಮಯ ಉಳಿದಿಲ್ಲ. ಎಲ್ಲರೂ ಕಾದು ನೋಡೋಣ, ಅನಗತ್ಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು

.

ವಾಲ್ಮೀಕಿ ನಿಗಮದ ಹಗರಣ ಸಿಬಿಐಗೆ ನೀಡಲ್ಲ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಈಗಾಗಲೇ ಪ್ರಕರಣವನ್ನ ಎಸ್‌.ಐ.ಟಿಗೆ ವಹಿಸಲಾಗಿದೆ. ಆಂತರಿಕ ತನಿಖೆ ಕೂಡ ನಡೆಯುತ್ತಿದೆ. ಯಾವುದೇ ಹೆಜ್ಜೆ ಇಡುವ ಮೊದಲು ತಪ್ಪು ಮಾಡಿದ್ದು ಗೋತ್ತಾಗಬೇಕು. ಆರೋಪ ಮಾಡಿದ್ದಾರೆ ಎಂದು ಸಿ.ಬಿ.ಐ ಗೆ ನೀಡಲು ಆಗಲ್ಲ. ಎಸ್‌ಐಟಿ ಮಧ್ಯಂತರ ವರದಿ ನೀಡಿದ್ರೆ ಮುಖ್ಯಮಂತ್ರಿಗ ಗಮನ ಹರಿಸುತ್ತಾರೆ. ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂಬ ಬಿಜೆಪಿ ಒತ್ತಾಯ ಮಾಡಿದ್ರು ಅಂತ ನಾವ್ಯಾಕೆ ಸಿಬಿಐಗೆ ನೀಡಬೇಕು.

ಈಗಾಗಲೇ ಬ್ಯಾಂಕಿನವರು ಸಿಬಿಐ ತನಿಖೆಗೆ ಪತ್ರ ಬರೆದಿದ್ದಾರೆ. ಈಗಾಗಲೇ ಅವರೆ ಸಿಬಿಐ ತನಿಖೆಗೆ ನೀಡಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಇದು. ಯಾವುದೇ ನಿರ್ಧಾರ ಮಾಡಬೇಕು ಎಂದರೂ ವರದಿ ಬರಬೇಕು. ವರದಿ ಬಂದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!