GO BACK LAXMI HEBBALKAR..!

ಬೆಂಗಳೂರು. ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಪುತ್ರ ಮೃನಾಲ್ ಹೆಬ್ಬಾಳಕರ ಸೋಲಿನ ನೋವಿನಲ್ಲಿರುವಾಗಲೇ ಉಡುಪಿಯಲ್ಲಿ ಸ್ವಪಕ್ಷೀಯರೇ ಗೋ ಬ್ಯಾಕ್ GO BACK ಅಭಿಯಾನ ಶುರುವಿಟ್ಟುಕೊಂಡಿದ್ದಾರೆ.

.ಪ್ರಮುಖವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್​ ಉಸ್ತುವಾರಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಆಕ್ರೋಶ ವ್ಯಕ್ತಗೊಂಡಿದೆ.

Oplus_0


ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್‌ನಲ್ಲಿ ʼಗೋ ಬ್ಯಾಕ್ʼ‌ ಅಭಿಯಾನ ಸೃಷ್ಟಿಯಾಗಿದೆ. ಕರಾವಳಿಯಲ್ಲಿ ಕಾಂಗ್ರೆಸ್‌ ಸೋಲಿಗೆ ಜಿಲ್ಲಾ ಉಸ್ತುವಾರಿಗಳೇ ಕಾರಣ ಎಂಬುದಾಗಿ ಕಾಂಗ್ರೆಸ್​ ಆರೋಪಿಸಿದೆ. ಜಿಲ್ಲೆಯಲ್ಲಿ ಸಮಸ್ಯೆ ಉಂಟಾದಾಗ ಬರುವುದಿಲ್ಲ. ಹಾಗಿದ್ದ ಮೇಲೆ ಉಸ್ತುವಾರಿಯಾಗಿರುವ ಅಗತ್ಯವೇನು ಎಂಬುದಾಗಿ ಕಾಂಗ್ರೆಸ್​ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸ್​ ಉಸ್ತುವಾರಿ ಸಚಿವರನ್ನ ಬದಲಿಸುವಂತೆ ಕಾರ್ಯಕರ್ತರ ಒತ್ತಾಯ ಮಾಡಿದ್ದಾರೆ.

ಈ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಬ್ಯುಸಿಯಾಗಿದ್ದರು. ಪುತ್ರ ಮೃಣಾಲ್ ಹೆಬ್ಬಾಳ್ಕರ್​ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಜಗದೀಶ್​ ಶೆಟ್ಟರ್ ವಿರುದ್ಧ ಸೋತಿದ್ದಾರೆ. ಮತದಾನ ಮುಗಿದ ಮೇಲಾದರೂ ಬರಬಹುದಿತ್ತು. ಆವಸಗಲೂ ಬಂದಿಲ್ಲ. ‌ಆದ್ದರಿಂದ ಅವರನ್ನು ಬದಲಿಸಿ ಎನ್ನುವ ಅಭಿಯಾನ ಜೋರಾಗಿದೆ. ಸಾಮಾಜಿಕ‌ ಜಾಲತಾಣದಲ್ಲೂ ಪೋಸ್ಟ್ ಗಳು ಹರಿದಾಡುತ್ತಿವೆ.

Leave a Reply

Your email address will not be published. Required fields are marked *

error: Content is protected !!