ಹೊಸ ದೆಹಲಿ.
ಮೂರನೇ ವಾರಿ ಪ್ರಧಾನಿಯಾಗಿ ನರೇಂದ್ರ ದಾಮೋದರದಾಸ್ ಮೋದಿ ಪ್ರಮಾಣ ವಚನ ಸ್ವೀಕರಿಸಿದರು
ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾಗಿದ್ದ ನರೇಂದ್ರ ಮೋದಿ (73) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದರು. ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದ್ರೌಪದಿ ಮುರ್ಮು ನರೇಂದ್ರ ಮೋದಿ ಅವರಿಗೆ ಪ್ರಮಾಣ ವಚನ ಬೋಧಿಸಿದರು


ಮೂರು ಬಾರಿ ಪ್ರಧಾನಿ: ಜವಾಹರಲಾಲ್ ನೆಹರು 1947 ರಿಂದ 1964 ರವರೆಗೆ 16 ವರ್ಷ ಮತ್ತು 286 ದಿನಗಳ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 1951-52 ರಲ್ಲಿ ಕಾಂಗ್ರೆಸ್ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ನಂತರ ಮತ್ತು ಆನಂತರ 1957 ಮತ್ತು 1962ರಲ್ಲಿ ನೆಹರು ಪ್ರಧಾನಿಯಾಗಿದ್ದರು. ನೆಹರೂ ಮೇ 1964ರಲ್ಲಿ ತಮ್ಮ ಮೂರನೇ ಅವಧಿಯ ಮಧ್ಯದಲ್ಲಿ ನಿಧನ ಹೊಂದಿದರು. ನೆಹರೂ ಮೂರನೇ ಅವಧಿಯಲ್ಲಿಯೂ ಸಹ ಸಂಪೂರ್ಣ ಬಹುಮತವನ್ನು ಉಳಿಸಿಕೊಂಡು ಸರ್ಕಾರ ರಚನೆ ಮಾಡಿದ್ದರು. ಆದರೆ 2019ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದಿದ್ದ ಬಿಜೆಪಿ 2024ರಲ್ಲಿ 240 ಸ್ಥಾನಗಳನ್ನು ಮಾತ್ರ ಪಡೆದಿದೆ. ಎನ್‌ಡಿಎ ಮೈತ್ರಿಕೂಡದ ಪಾಲುದಾರ ಪಕ್ಷಗಳ ಜೊತೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದೆ.
ಪ್ರಲ್ಹಾದ ಜೋಶಿ ಪ್ರಮಾಣ ವಚನ

ಕಳೆದ ಬಾರಿ ಕೂಡ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಹುಬ್ಬಳ್ಳಿ ಧಾರವಾಡದ ಸಂಸದ ಪ್ರಲ್ಹಾದ ಜೋಶಿ ಅವರಿಗೆ ಮತ್ತೇ ಮಂತ್ರಿಯಾಗುವ ಅವಕಾಶ ಸಿಕ್ಕಿತು.

ಇಂದು ಪ್ರಧಾನಿ ಮೋದಿ ಅವರ ಜೊತೆಗೆ ಜೋಶಿ ಅವರು ಮಂತ್ರಿಯಾಗಿಬಪ್ರಮಾಣ ವಚನ ಸ್ವೀಕರಿಸಿದರು.
ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಜೋಶಿ ಅವರು ಉತ್ತಮವಾಗಿ ಕಾರ್ಯನುರ್ವಹಿಸಿದ್ದರು.