ನಿಯತಿ ಫೌಂಡೇಶನ್ ವಿದ್ಯಾರ್ಥಿವೇತನ ವಿತರಣೆ
ಬೆಳಗಾವಿ: ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಬೆಳಗಾವಿಯ ನಿಯತಿ ಫೌಂಡೇಷನ್ ವತಿಯಿಂದ ಬಡ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್ ನೀಡಲಾಯಿತು.
ಬೆಳಗಾವಿ ನಗರದಲ್ಲಿ ಇಂದು ಬೆಳಗಾವಿ ಬಿಇ ಸೊಸೈಟಿಯ ಮಾಡರ್ನ್ ಆಂಗ್ಲ ಮಾಧ್ಯಮ ಶಾಲೆಯ
೪ನೇ ತರಗತಿ ವಿದ್ಯಾರ್ಥಿ ರಚಿತ್ ಪಾಟೀಲನಿಗೆ ೮೦೦೦ ರೂ.ಗಳ ವಿದ್ಯಾರ್ಥಿ ವೇತನವನ್ನು ಈ
ಬಾರಿ ನೀಡಲಾಯಿತು.

ಈ ವಿದ್ಯಾರ್ಥಿಯ ತಂದೆ ವಿಕಲಚೇತನರಾಗಿದ್ದು, ತಾಯಿಯೇ ದುಡಿದು ಕುಟುಂಬ ನಿರ್ವಹಣೆ
ಮಾಡಬೇಕಾಗಿತ್ತು. ಆದ್ದರಿಂದ ಬಡ ಕುಟುಂಬದ ನೆರವಿಗೆ ಧಾವಿಸಿದ ನಿಯತಿ ಫೌಂಡೇಷನ್
ಮಗುವಿನ ಶೈಕ್ಷಣಿಕ ಪ್ರಗತಿಗಾಗಿ ಈ ಮೊತ್ತವನ್ನು ನೀಡಿ ಸಹಕರಿಸಿದೆ. ವಿದ್ಯಾರ್ಥಿ ವೇತನವನ್ನು ರಚಿತ್ ತಾಯಿಗೆ ಡಾ. ಸೋನಾಲಿ ಸರ್ನೋಬತ್ ಹಸ್ತಾಂತರಿಸಿದರು. ಈ
ಸಂದರ್ಭದಲ್ಲಿ ಡಾ. ಸಮೀರ್ ಸರ್ನೋಬತ್ ಅವರಿದ್ದರು.
0