
ಬೆಳಗಾವಿಯಲ್ಲಿ ಪೊಲೀಸರ ಕೈಕಟ್ಟಿ ಹಾಕಿದ್ದು ಯಾರು?
ಮಹಾನಗರ ಪಾಲಿಕೆ ನಗರಸೇವಕಿ ಪತಿ ಮೇಲೆ ಹಲ್ಲೆ. ಹಲ್ಲೆ ಪ್ರಕರಣದಲ್ಲಿ ಸತ್ಯ ಮರೆಮಾಚಲು ಯತ್ನಿಸಿದರೇ ಪೊಲೀಸರು.? ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಾಗೆ ಗುಬ್ಬಿ ಕಥೆ ಹೇಳಲಾಯಿತೇ? ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ದಂಧೆಗಳನ್ನು ಗಮನಿಸಿದರೆ ಹೆಡಮುರಿ ಕಟ್ಟಲು ಮುಂದಾಗಬೇಕಿದ್ದ ಪೊಲೀಸರ ಕೈಗಳನ್ನು ಬಲವಾಗಿ ಕಟ್ಟಿ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕುಂದಾನಗರಿ ಜತೆಗೆ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊತ್ತ ಬೆಳಗಾವಿ ಹೆಸರಿಗೆ ಈ ಪರಿ ಕಳಂಕ ಬರುವ ಹಾಗೆ ಖಾಕಿಧಾರಿಗಳು ಯಾಕೆ…