Headlines

ಹೆಸ್ಕಾಂ 13 ಜನರ ವಿರುದ್ಧ ಆರೋಪ ಸಾಬೀತು. 27 ಕ್ಕೆ ಶಿಕ್ಷೆ ಪ್ರಕಟ

ಹೆಸ್ಕಾಂ ಮಜ್ಜಿಗಿ ಪ್ರಕರಣ: 27 ರಂದು ಶಿಕ್ಷೆ ಪ್ರಕಟ
ಹೆಸ್ಕಾಂನ 13 ಜನರ ವಿರುದ್ಧ ಆರೋಪ ಸಾಬೀತು

ಬೆಳಗಾವಿ:
ಹೆಸ್ಕಾಂ ಅಧೀಕ್ಷಕ ಅಭಿಯಂತರರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ, ತೇಜೋವಧೆ ಹಾಗೂ ಅಮಾನತಿಗೆ ಕಾರಣರಾದ 13 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ.


ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿರುವ ಬೆಳಗಾವಿ ಹೆಸ್ಕಾಂ ಕಚೇರಿಯ ಸಹಾಯಕ ಅಭಿಯಂತ ತುಕಾರಾಂ ಮಜ್ಜಿಗಿ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪ್ರಕರಣ ದಾಖಲಿಸಿ ಅವರ ತೇಜೋವಧೆ, ಮಾನ ಹಾನಿ, 9 ದಿನಗಳ ನ್ಯಾಯಾಂಗ ಬಂಧನ ಹಾಗೂ ಅಮಾನತ್ತಿಗೆ ಕಾರಣರಾದ ಪ್ರಕರಣದಲ್ಲಿ 13 ಮಂದಿ ಆರೋಪಿಗಳಿಗೆ ಇಲ್ಲಿನ‌ ನ್ಯಾಯಾಲಯ . 27 ರ ಗುರುವಾರ ಶಿಕ್ಷೆ ಪ್ರಕಟಿಸಲಿದೆ..
ಬಿ.ವಿ ಸಿಂಧು, ಸಹಾಯಕ ಅಭಿಯಂತರರು, ಹೆಸ್ಕಾಂ ಬೆಳಗಾವಿ, ಹಾಲಿ: ಬೆಸ್ಕಾಂ ಮೈಸೂರು, ನಾಥಾಜಿ ಪಿ ಪಾಟೀಲ, ಸಹಾಯಕ ಮಾರ್ಗದಾಳು, ಅಜಿತ ಎಂ ಪೂಜಾರಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಮಲನರ್ಜ ಎಸ್ ಶಹಾಪೂರಕರ, ಸಹಾಯಕ ಮಾರ್ಗದಾಳು, ಸುಭಾಸ ಎಂ ಹಲ್ಲೋಳ್ಳಿ, ಕಿರಿಯ ಇಂಜನೀಯರ, ಈರಪ್ಪ ಎಂ ಪತ್ತಾರ, ಮಾರ್ಗದಾಳು, ಮಲ್ಲಿಕಾಜರ್ುನ ಎಸ್ ರೇಡಿಹಾಳ, ಮೇಲ್ವಿಚಾರಕರು, ಭೀಮಪ್ಪ ಎಲ್ ಗೋಡಲ ಕುಂದರಗಿ, ಹಿರಿಯ ಸಹಾಯಕರು, ರಾಜೇಂದ್ರ ಬಿ ಹಳಿಂಗಳಿ, ಸ್ಟೇಷನ ಅಟೆಂಡರ್ ಗ್ರೇಡ-2, ಸುರೇಶ ಕೆ ಕಾಂಬಳೆ, ಲೆಕ್ಕಾಧಿಕಾರಿ, ಈರಯ್ಯ ಗುರಯ್ಯ ಹಿರೇಮಠ, ಲೈನಮನ್, ಮಾರುತಿ ಭರಮಾ ಪಾಟೀಲ್, ಲೈನಮನ್ ಮತ್ತು ದ್ರಾಕ್ಷಾಯಣಿ ಮಹಾದೇವ ನೇಸರಗಿ, ನಿವೃತ್ತ ಸಹಾಯಕಿ ಹೆಸ್ಕಾಂ ಬೆಳಗಾವಿ ಇವರ ವಿರುದ್ಧ ಆರೋಪ ಸಾಬೀತಾಗಿದೆ,


ನ್ಯಾಯಾಲಯದಲ್ಲಿ ಸರ್ಕಾರದ ಪರ ಮುರಳಿಧರ ಕುಲಕರ್ಣಿ ವಾದ ಮಂಡಿಸಿದರು. ಸಧ್ಯ ಆರೋಪಿಗಳನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!