Headlines

ಬೆಳಗಾವಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಇಂದೇ ಡ್ರಾ.. ಇಂದೇ ಬಹುಮಾನ..!


ಬೆಳಗಾವಿ

.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ನಾಳೆ ದಿ, 2 ರಂದು ನಡೆಯಲಿದೆ.
ಬಿಜೆಪಿ ಸಂಪೂರ್ಣ ಬಹುಮತದಲ್ಲಿರುವ ಬೆಳಗಾವಿ ಮಹಾನಗಹರ ಪಾಲಿಕೆಯಲ್ಲಿ ಇಲ್ಲಿಯವರೆಗೂ ಯಾವೊಬ್ಬ ನಗರಸೇವಕರು ತಮ್ಮನ್ನು ಇಂತಹ ಸಮಿತಿಗೆ ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿಲ್ಲ.
ಮೂಲಗಳ ಪ್ರಕಾರ ನಾಳೆ ದಿ. 2 ರಂದೇ ಬೆಳಿಗ್ಗೆ 8 ಕ್ಕೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರು ನಗರಸೇವಕರ ಸಭೆ ಕರೆದಿದ್ದಾರೆ ಎಂದು ಗೊತ್ತಾಗಿದೆ

ಅಲ್ಲಿ ಯಾವ ಸಮಿತಿಗೆ ಯಾರು ಸೇರ್ಪಡೆಗೊಳ್ಳುತ್ತಾರೆ ಎನ್ನುವುದು ಬಹಿರಂಗವಾಗಲಿದೆ,
ಇಲ್ಲಿ ಆಡಳಿತ ಪಕ್ಷದಿಂದ 5 ಮತ್ತು ವಿರೋಧ ಪಕ್ಷದವರಿಂದ ಇಬ್ಬರು ಸಮಿತಿಗೆ ಸೇರ್ಪಡೆ ಆಗುತ್ತಾರೆ, ಎಲ್ಲವೂ ಅವಿರೋಧ ಆಯ್ಕೆಯಾಗುತ್ತವೆ.
ಕಳೆದ ಬಾರಿ ಅಧ್ಯಕ್ಷ ಸ್ಥಾನ ವಹಿಸಿಕೊಂಡವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಅಧಿಕಾರ ಹಂಚಿಕೊಡುವ ತೀರ್ಮಾನವನ್ನು ಶಾಸಕ ಅಭಯ ಪಾಟೀಲ ಮಾಡುವ ಸಾಧ್ಯತೆಗಳಿವೆ.

ನಾಳೆ ಕಂದಾಯ, ಪಿಡಬ್ಲುಡಿ, ಲೆಕ್ಕಪತ್ರ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಮಾತ್ರ ನಡೆಯಲಿದೆ, ನಂತರ ಅದರಲ್ಲಿ ಒಬ್ಬರನ್ನು ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ,

ಅಧ್ಯಕ್ಷಗಿರಿ ಬೇಡ…!
ಅಚ್ಚರಿಯ ಸಂಗತಿ ಎಂದರೆ, ಬೆಳಗಾವಿ ದಕ್ಷಿಣದ ಕೆಲ ಮರಾಠಿ ಭಾಷಿಕ ನಗರ ಸೇವಕರು ಈ ಬಾರಿ ತಮಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬೇಡ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ.
ಇದು ಈಗ ಚರ್ಚಯ ವಸ್ತುವಾಗಿ ಬಿಟ್ಟಿದೆ.
ಅದಕ್ಕೆ ಕಾರಣ ಕೂಡ ಇದೆ. ಬೆಳಗಾವಿ ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ ಎಂದು ಹೇಳಲಾಗುತ್ತದೆ.
ಈಗ ಸ್ಥಾಯಿ ಸಮಿತಿ ಅಧ್ಯಕ್ಷರಾದರೆ ಮೇಯರ್ ಹುದ್ದೇಗೇರುವ ಅವಕಾಶ ತಪ್ಪಬಹುದು ಎನ್ನುವ ಕಾರಣದಿಂದ ಈ ಮಾತನ್ನು ಆಡುತ್ತಿರಬಹುದು ಎನ್ನಲಾಗುತ್ತಿದೆ.

ಆದರೆ ನಾಳೆ ದಿ, 2 ರಂದು ಬೆಳಿಗ್ಗೆ ಶಾಸಕ ಅಭಯ ಪಾಟೀಲರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ

Leave a Reply

Your email address will not be published. Required fields are marked *

error: Content is protected !!