
ಹೈಗೆ ಟಾಂಗ್ ಕೊಡಲು ಹುಬ್ಬಳ್ಳಿಯಲ್ಲಿ ಸಿದ್ಧರಾಮೋತ್ಸವ
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಅಧಿಕಾರ ಬಿಟ್ಡುಕೊಡುವಂತೆ ಸೂಚನೆ ಕೊಟ್ಟಿತಾ ಹೈ ಕಮಾಂಡ್? ರಾಜ್ಯದ ಕಾಂಗ್ರೆಸ್ ನಲ್ಲಿ ಜೋರಾಗ್ತಿದೆ ಬಣ ರಾಜಕೀಯ. ಬೆಳಗಾವಿಯಲ್ಲಿಯೂ ನಡೆದಿದೆ ಮುಸುಕಿನ ಗುದ್ದಾಟ. ಬೆಂಗಳೂರು. ರಾಜ್ಯದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪದಚ್ಯುತಿ ಸುದ್ದಿ ಹಬ್ಬುತ್ತಿದ್ದಂತೆಯೇ ಈಗ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಬದಲಾವಣೆ ಕೂಗು ಏಳತೊಡಗಿದೆ. ಈ ಹಿಂದೆ ನಿಗದಿ ಪಡಿಸಿದಂತೆ ಎರಡುವರೆ ವರ್ಷದ ಅವಧಿ ಮುಗಿದ ತಕ್ಷಣ ಮುಖ್ಯಮಂತ್ರಿ ಹುದ್ದೆಯನ್ಬು ಬಿಟ್ಡುಕೊಡಬೇಕೆಂದು ಹೈ ಕಮಾಂಡ್ ಸಿದ್ಧರಾಮಯ್ಯನವರಿಗೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯನವರು…