ಬೆಳಗಾವಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ.
ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಸಾರಥ್ಯ.
ದಕ್ಷಿಣ ಮತ್ತು ಉತ್ತರಕ್ಕೆ ಅಧಿಕಾರ ಹಂಚಿಕೆ.ಎಲ್ಲರಿಗೂ ಸಮಾನ ನ್ಯಾಯ
ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನಕ್ಕೆ ಇಂದು ವಿರೋಧ ಆಯ್ಕೆ ನಡೆಯಿತು.

ಆರೋಗ್ಯ ಸ್ಥಾಯಿ ಸಮಿತಿಗೆ ಶ್ರೀಶೈಲ ಕಾಂಬಳೆ, ಪಿಡಬ್ಲುಡಿ ಕಮಿಟಿಗೆ ಜಯತೀರ್ಥ ಸವದತ್ತಿ, ಲೆಕ್ಕಪತ್ರ ಕಮಿಟಿಗೆ ರೇಷ್ಮಾ ಕಾಮಕರ ಮತ್ತು ಕಂದಾಯ ಕಮಿಟಿಗೆ ನೇತ್ರಾವತಿ ಭಾಗವತ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಅನಿಲ ಬೆನಕೆ,ಆಡಳಿತ ಪಕ್ಷದ ನಾಯಕ ಗುರೀಶ್ ಧೋಂಗಡಿ, ಪಿಡಬ್ಲುಡಿ ಕಮಿಟಿ ಮಾಜಿ ಅಧ್ಯಕ್ಷೆ ವಾಣಿ ಜೋಶಿ, ಹನುಮಂತ ಕೊಂಗಾಲಿ, ಸಂತೋಷ ಪೇಡ್ನೆಕರ ಸೇರಿದಂತೆ ಇನ್ನುಳಿದ ನಗರಸೇವಕರು ಹಾಜರಿದ್ದು ಶುಭ ಕೋರಿದರು