
ಕಾಂಗ್ರೆಸ್ ಸರ್ಕಾರದಲ್ಲಿ ಸಿಗದ ಮನ್ನಣೆ- ವಿಷಾದ
ಪಂಚಮಸಾಲಿ ಮೀಸಲಾತಿ`ಸಚಿವೆಗೆ 2ಎ ಮೀಸಲಾತಿ ಪತ್ರ ಚಳುವಳಿ’ಬೆಳಗಾವಿ.ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕುರಿತಂತೆ ನಮ್ಮ ಬೇಡಿಕೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನ್ನಣೆ ಸಿಗುತ್ತಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಸಮಾಜದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿ ಅಸಮಾಧಾನ ಹೊರಹಾಕಿದರುಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಮ್ಮುಖದಲ್ಲಿಯೇ ಈ ಅಸಮಾಧಾನ ಹೊರಹಾಕಿದ ಸ್ವಾಮಿಜಿಯವರು,ಕಾಂಗ್ರೆಸ್ ಸರಕಾರ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದಾಗ ಸರಕಾರ ಈಗ ರಚನೆಯಾಗಿದೆ. ಸ್ವಲ್ಪ ಕಾಲಾವಕಾಶ ಕೊಡಬೇಕು ಎಂದಿದ್ದರು. ಆದರೆ…