ಇಂತಹವರಿಗೆ ಒಂದು ತಿಂಗಳ ಮಟ್ಟಿಗೆ ಗುತ್ತಿಗೆ ಕೊಡಿ ಎಂದು ಮೇಯರ್ ಪತ್ರ.
17 ರಂದೇ ಪತ್ರ ಕೊಟ್ಟ ಮೇಯರ್. ಮೌಖಿಕ ದೂರು ಬಂದಿತ್ತು ಎಂದ ಮೇಯರ್.
16 ರಂದೇ ಪಾಲಿಕೆ ಆಯುಕ್ತರ ಆದೇಶ.
ಇ ಹರಾಜು ಇಲ್ಲದೆ ಆಯುಕ್ತರ ಆದೇಶ. ಗುತ್ತಿಗೆ ಕೊಡುವಲ್ಲಿ ನಿಯಮ ಉಲ್ಲಂಘನೆ ಮಾತು.
ವಿವಾದದ ಮೇಲೆ ವಿವಾದ ಎಳೆದುಕೊಳ್ಖುತ್ತಿರುವ ಬೆಳಗಾವಿ ಪಾಲಿಕೆ
ಬೆಳಗಾವಿ.
ಮೈಸೂರಿನ ಮೂಡಾ ಮಾದರಿಯಲ್ಲಿಯೇ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂ ಬಾಡಿಗೆ ವಸೂಲಾತಿ ಗುತ್ತಿಗೆ ವಿಷಯದಲ್ಲಿ ಭಾರೀ ಪ್ರಮಾಣದ ಲೋಪ' ನಡೆದಿದ್ದು ಬೆಳಕಿಗೆ ಬಂದಿದೆ. ಗಮನಿಸಬೇಕಾದ ಸಂಗತಿ ಎಂದರೆ, ಮೇಯರ್ ಸವಿತಾ ಕಾಂಬಳೆ ಅವರು
ಇಂಥಹವರಿಗೆ ಗುತ್ತಿಗೆ ಕೊಡಿ’ ಎನ್ನುವ ಲಿಖಿತ ಪತ್ರವನ್ನು ಆಯುಕ್ತರಿಗೆ ನೀಡಿದ್ದು ಈಗ ದೊಡ್ಡ ಮಟ್ಟದ ಚಚರ್ೆಗೆ ಕಾರಣವಾಗುತ್ತಿದೆ.
ಇನ್ನೂ ಅಚ್ಚರಿ ಎಂದರೆ, ಇದರಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೇ ಮೂರನೇ ವ್ಯಕ್ತಿಗೆ ಭೂ ಬಾಡಿಗೆ ವಸೂಲಿ ಮಾಡಲು ಪಾಲಿಕೆ ಆಯುಕ್ತರು ಆದೇಶ ಮಾಡಿದ್ದೂ ಸಹ ವಿಭಿನ್ನ ಚಚರ್ೆಗೆ ಅವಕಾಶ ಮಾಡಿಕೊಟ್ಟಿದೆ,

ಆಯುಕ್ತರು ಮೇಯರ್ ಪತ್ರದ ಉಲ್ಲೇಖ ಮಾಡಿಯೇ ಯಾವುದೇ ರೀತಿಯ ಟೆಂಡರ್ ಪ್ರಕ್ರಿಯೆ ಇಲ್ಲದೇ ಒಂದು ತಿಂಗಳ ಮಟ್ಟಿಗೆ ಭೂ ಬಾಡಿಗೆ ವಸೂಲಾತಿಗೆ ಆದೇಶ ನೀಡಿದ್ದಾರೆ,
ಇಲ್ಲಿ ಮೇಯರ್ ಕೊಟ್ಟ ಪತ್ರ, ಆಯುಕ್ತರು ಹೊರಡಿಸಿದ ಆದೇಶ ಮತ್ತು ಜೊತೆಗೆ ಪಾಲಿಕೆ ವಲಯದಲ್ಲಿ ಕೇಳಿ ಬರುತ್ತಿರುವ ಅಂತೆ ಕಂತೆಗಳ ಮಾತನ್ನು ಕೇಳಿದರೆ ಇದು ಮೈಸೂರು ಮೂಡಾ ಹಗರಣವನ್ನು ಮೀರಿಸಬಹುದು ಎನ್ನುವ ಮಾತುಗಳು ಸವೇಧಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಭೂ ಬಾಡಿಗೆ ವಸೂಲಿ ಬೇರೆಯವರಿಗೆ ಗುತ್ತಿಗೆ ಕೊಡಬೇಕಾದ ಸಂದರ್ಭದಲ್ಲಿ ಪಾಲನೆ ಮಾಡಬೇಕಾದ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಲ್ಲಿ ಸ್ಪಷ್ಟ.

ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಒಂದು ಲಕ್ಷದಿಂದ 5 ಲಕ್ಷ ರೂ.ವರೆಗೆ ಒಳಗೆ ಇದ್ದರೆ ಮಾತ್ರ ತಾತ್ಕಾಲಿಕವಾಗಿ ಬೇರೊಬ್ಬರಿಗೆ ಗುತ್ತಿಗೆ ನೀಡುವ ಅಧಿಕಾರ ಆಯುಕ್ತರಿಗೆ ಇರುತ್ತದೆ.
ಆದರೆ 5 ಲಕ್ಷ ರೂ ಮೀರಿದರೆ ಅದನ್ನು ಇ ಪ್ರೋಕ್ಯೂರಮೆಂಟ್ ಮೂಲಕವೇ ಬೇರೆಯವರಿಗೆ ಗುತ್ತಿಗೆ ಕೊಡಬೇಕು,
ಇಲ್ಲಿ ತಿಂಗಳ ಭೂ ಬಾಡಿಗೆ ವಸೂಲಿ ವ್ಯವಹಾರ 10 ಲಕ್ಷ ರೂ ಮೀರುತ್ತದೆ. ಹೀಗಿದ್ದಾಗ ನಿಮಯ ಮೀರಿ ಆಯುಕ್ತರು ರಾತ್ರೋ ರಾತ್ರಿ ಆದೇಶ ಹೇಗೆ ಮಾಡಿದರು? ಮತ್ತು ಮೇಯರ್ ಅವರು ಇಂತಹವರಿಗೆ ಗುತ್ತಿಗೆ ಕೊಡಿ ಎಂದು ಅಧಿಕೃತ ಕಚೇರಿ ಟಿಪ್ಪಣಿ ಮಾಡಿ ಪತ್ರವನ್ನು ಯಾವ ಉದ್ದೇಶವಿಟ್ಟುಕೊಂಡು ನೀಡಿದರು ಎನ್ನುವದನ್ನು ಕೆದಕುತ್ತ ಹೋದರೆ ಹತ್ತು ಹಲವು ಅನುಮಾನದ ಮಾತುಗಳು ಕೇಳಿ ಬರುತ್ತಿವೆ.

ಸಮಾಧಾನಕರ ಸಂಗತಿ ಎಂದರೆ, ಇಂತಹ ಲೋಪವನ್ನು ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಗೊತ್ತಾಗಿದೆ.
ಏನಿದು ಭೂ ಭಾಡಿಗೆ ?
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಯಿಪಲ್ಲೆ, ಹಣ್ಣು ಹಂಪಲು ಮತ್ತು ತಳ್ಳುವ ಗಾಡಿ ಮೇಲೆ ವ್ಯಾಪಾರ ಮಾಡುವವರದಿಂದ ಭೂ ಬಾಡಿಗೆ ವಸೂಲಿ ಮಾಡಲು ಗುತ್ತಿಗೆಯನ್ನು ನೀಡಲಾಗುತ್ತದೆ.
ಇಲ್ಲಿ ಕಳೆದ 2023 ಜುಲೈ 17 ರಿಂದ 16.7,.2024 ರವರೆಗೆ ಒಂದು ವರ್ಷದ ವರೆಗೆ ವಾಷರ್ಿಕ ಬಾಡಿಗೆ 50 ಲಕ್ಷ (ಜಿಎಸ್ಟಿ ಹೊರತುಪಡಿಸಿ) ಇ ಹರಾಜು ಕರೆಯಲಾಗಿತ್ತು, ಅದರಲ್ಲಿ ಹೆಚ್ಚಿನ ಬಿಡ್ ಮೊತ್ತ ಅಂದರೆ 1 ಕೋಟಿ 12 ಲಕ್ಷ 40 ಸಾವಿರಗಳಿಗೆ ಬಿಡ್ನ್ನು ಸಲ್ಲಿಸಿದ ಶಿವಾನಂದ ಹೊರಟ್ಟಿ ಎಂಬುವರಿಗೆ ಗುತ್ತಿಗೆ ನೀಡಲಾಗಿತ್ತು.

ಆದರೆ ಗುತ್ತಿಗೆ ತೆಗೆದುಕೊಂಡವರು ಟೆಂಡರ್ ನಿಯಮವನ್ನು ಉಲ್ಲಂಘಿಸಿ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರವಾಣಿ ಮತ್ತು ಮೌಖಿಕ ದೂರುಗಳು ಬಂದವು ಎನ್ನುವ ಮೇಯರ್ ಪತ್ರದಲ್ಲಿನ ಅಂಶವನ್ನು ಉಲ್ಲೇಖಿಸಿ ಆಯುಕ್ತರು ಬೇರೆಯವರಿಗೆ ಗುತ್ತಿಗೆ ನೀಡಿದ ಆದೇಶ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಇದೆಲ್ಲದರ ಮಧ್ಯೆ ಹಿಂದಿನ ರೆವಿನ್ಯು ಕಮಿಟಿ ಸಭೆಯಲ್ಲಿ ಕೂಡ ಇದೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ನಿಧರ್ಾರ ಮಾಡಲಾಗಿತ್ತು ಎನ್ನಲಾಗಿದೆ, ಇದರಿಂದ ನ್ಯಾಯ ಕೋರಿ ಗುತ್ತಿಗೆದಾರ ಹೊರಟ್ಟಿ ಅವರು ಕೋರ್ಟ ಮೆಟ್ಟಿಲು ಹತ್ತಿದ್ದರು, ಇಲ್ಲಿ ಎಲ್ಲ ಸಾಧಕ ಬಾಧಕವನ್ನು ಗಮನಿಸಿದ ಕೋರ್ಟ ಹೊರಟ್ಟಿಯವರು ನಿಯಮಾನುಸಾರ ಗುತ್ತಿಗೆಯನ್ನು ಪಡೆದುಕೊಂಡಿದ್ದು ಅವಧಿ ಮುಗಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಬಹುದು ಎಂದು ಆದೇಶ ನೀಡಿತ್ತು.
ಮೇಯರ್ ಪತ್ರ ಕೊಟ್ಟಿದ್ದು ಯಾವಾಗ?..
ಇಲ್ಲಿ ಶಿವಾನಂದ ಹೊರಟ್ಟಿ ಅವರ ಭೂ ಬಾಡಿಗೆ ಗುತ್ತಿಗೆ ಅವಧಿ ಯಾವ ದಿನಾಂಕದಂದು ಮುಗಿಯುತ್ತದೆ ಎನ್ನುವುದು ಅಧಿಕಾರಿಗಳಿಗೆ ಗೊತ್ತಿರುತ್ತದೆ, ಅಷ್ಟರೊಳಗೆ ಅವರು ಇ ಪ್ರೋಕ್ಯುರಮೆಂಟ್ ಪ್ರಕಾರ ಹೊಸ ಟೆಂಡರ್ ಪ್ರಕ್ರಿಯೆ ಮಾಡಬೇಕಿತ್ತು, ಆದರೆ ಅದನ್ನು ಅಧಿಕಾರಿಗಳು ಮಾಡದೇ ನೇರವಾಗಿ ಮೂರನೇ ವ್ಯಕ್ತಿಗೆ ಒಂದು ತಿಂಗಳ ಮಟ್ಟಿಗೆ ಭೂ ಬಾಡಿಗೆ ವಸೂಲಾತಿ ನೀಡುವ ಅವಶ್ಯಕತೆಯಾದರೂ ಏನಿತ್ತು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಇಲ್ಲಿ ಯಾವ ಪ್ರಮಾಣದಲ್ಲಿ ಅವಸರಕ್ಕೆ ಬಿದ್ದು ಪಾಲಿಕೆ ಮೇಯರ್ ಮತ್ತು ಆಯುಕ್ತರು ತಪ್ಪು ಎಸಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಅವರ ಪತ್ರವನ್ನು ಗಮನಿಸಿದರೆ ಗೊತ್ತಾಗುತ್ತದೆ.
ಮೇಯರ್ ಸವಿತಾ ಕಾಂಬಳೆ ಅವರು ಕಚೇರಿ ಟಿಪ್ಪಣಿ ಎಂದು ಉಲ್ಲೇಖಿಸಿ `ಸಂಖ್ಯೆ ಇಲ್ಲದ’ ಪತ್ರವನ್ನು ದಿ, 17 ಜುಲೈ 2024 ರಂದು ಆಯುಕ್ತರಿಗೆ ಬರೆದರು. ಆದರೆ ಇಲ್ಲಿ ಆಯುಕ್ತರು ಮೇಯರ್ ಪತ್ರ ತಲುಪುವುದಕ್ಕಿಂತ ಮುಂಚಿತವಾಗಿಯೇ ಅಂದರೆ ಜುಲೈ 16 ರಂದೇ ಹೊಸಬರಿಗೆ ಗುತ್ತಿಗೆ ನೀಡಿ ಆದೇಶ ಮಾಡಿದ್ದಾರೆ,
`17′ ರಂದು ಬರೆದ ಮೇಯರ್ ಪತ್ರವು ದಿ. 16 ರಂದು ಸಂಜೆ 6 ಕ್ಕೆ ಪಾಲಿಕೆಯ ಸ್ವೀಕೃತಿ ವಿಭಾಗದಲ್ಲಿ ಸ್ವೀಕೃತವಾಗಿದೆ. ಆದರೆ ಪತ್ರ ಮುಟ್ಟಿದ ತಕ್ಷಣ ಅಂದೇ ರಾತ್ರಿ 8.30ರ ಹೊತ್ತಿಗೆ ಆಯುಕ್ತರು ಒಂದು ತಿಂಗಳ ಮಟ್ಟಿಗೆ ಮೋದಗೇಕರ ಎಂಬುವರಿಗೆ ಭೂ ಬಾಡಿಗೆ ವಸೂಲಾತಿ ಆದೇಶ ಪತ್ರ ನೀಡುವ ಅವಶ್ಯಕತೆಯಾದರೂ ಏನಿತ್ತು ಎನ್ನುವುದು ಚಿದಂಬರ ರಹಸ್ಯವಾಗಿದೆ.
ಈ ಪತ್ರವನ್ನೇ ಆಧಾರವಾಗಿಟ್ಟುಕೊಂಡು ರಾತ್ರೋ ರಾತ್ರಿ ಯಾವುದೇ ಇ ಹರಾಜು ಇಲ್ಲದೇ ಆಯುಕ್ತರು ಹೊಸಬರಿಗೆ ಗುತ್ತಿಗೆ ನೀಡಿ ಆದೇಶ ಹೊರಡಿಸಿದ್ದಾರೆ, ಈಗ ಆಯುಕ್ತರ ಆದೇಶ ಪತ್ರವನ್ನು ಇಟ್ಟುಕೊಂಡು ಮತ್ತೇ ಕೋರ್ಟ ಮೆಟ್ಟಿಲು ಹತ್ತುವ ಎಲ್ಲ ಸಿದ್ಧತೆಗಳು ನಡೆದಿವೆ.
ಹಮ್ ಬೀ ಚುಪ್..!
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಆಡಳಿತ ಮತ್ತು ವಿರೋಧ ಪಕ್ಷದವರು ಹಮ್ ಭೀ ಚುಪ್, ತುಮ್ಭಿ ಚುಪ್ ಎನ್ನುವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ,
ಕಳೆದ ಎರಡು ದಿನಗಳ ಹಿಂದೆಯಷ್ಟೇ ಪಾಲಿಕೆ ವಿರೋಧ ಪಕ್ಷದ ನಾಯಕ ಮುಜಮಿಲ್ ಡೋಣಿ ಜೊತೆಗೆ ಆಡಳಿತ ಬಿಜೆಪಿಯ ಕೆಲವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೀಗಾದರೆ ಬೆಳಗಾವಿ ಜನತೆಯ ಸಮಸ್ಯೆಗಳನ್ನು ಕೇಳೋರು ಯಾರು ಎನ್ನುವ ಬಹುದೊಡ್ಡ ಪ್ರಶ್ನೆ ಹಲವರನ್ನು ಕಾಡುತ್ತಿದೆ.