ಪ್ರಾದೇಶಿಕ ಆಯುಕ್ತರಿಂದ ಜಾರಿಯಾದ ನೋಟೀಸ್.
ಡಿಸಿ ಮತ್ತು ಪಾಲಿಕೆ ಆಯುಕ್ತರ ಪ್ರಸ್ತಾವನೆ ಮೇರೆಗೆ ನೋಟೀಸ್ ಜಾರಿ ಮಾಡಿದ ಪ್ರಾದೇಶಿಕ ಆಯುಕ್ತರು.
22 ರಂದು ವಿಚಾರಣೆಗೆ ಹಾಜರಾಗಲು ಸೂಚನೆ. ಹಾಜರಾಗದಿದ್ದರೆ ಏಕಪಕ್ಷೀಯ ನಿರ್ಣಯ ಎಂದ ಪ್ರಾದೇಶಿಕ ಆಯುಕ್ತರು.
ಈ ನೋಟೀಸ್ ಹಿಂದೆ ರಾಜಕೀಯ ವಾಸನೆ
ಬೆಳಗಾವಿ.
ಅಧಿಕಾರಿಗಳ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ನಗರಸೇವಕರನ್ನು ಹಣೆಯುವ ಕೆಲಸವನ್ಬು ರಾಜ್ಯ ಸರ್ಕಾರ ಮಾಡುತ್ತಿದೆಯೇ?
ಬೆಳಗಾವಿಯ ತಿನಿಸು ಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು BJP ನಗರಸೇವಕರಾದ _jayant jadhav (ward 23 ) ಮತ್ತು Mangesh pawar (ward 41) ಇವರಿಗೆ ಇದೇ ದಿ. 22 ರಂದು ಬೆಳಿಗ್ಗೆ 11 ಕ್ಕೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದ್ದಾರೆ. ಇದರ ಹಿಂದೆ ರಾಜಕೀಯ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


ನೋಟೀಸ್ ದಲ್ಲಿ ಏನಿದೆ?
.ಜಿಲ್ಲಾಧಿಕಾರಿಗಳ ದಿ. 8.1.2024 ಮತ್ತು ಪಾಲಿಕೆ ಆಯುಕ್ತರ ದಿ, 6.1.2024ರ ಪ್ರಸ್ತಾವನೆಯನ್ವಯ ಕೆಎಂಸಿ ಕಾಯ್ದೆ 1976 ಸೆಕ್ಷನ್ 26)(1) ಸಿ ಹಾಗೂ ಕೆಎಂಸಿ ಕಾಯ್ದೆ 1976 26(1) ರಡಿ ನಿಮ್ಮ ವಿರುದ್ಧ ದೂರು ಸಲ್ಲಿಸಿದ್ದರ ಮೇರೆಗೆ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ. ಈ ನೋಟೀಸನ್ನು ಪ್ರಾದೇಶಿಕ ಆಯುಕ್ತರು ಕಳೆದ ದಿ.15 ರಂದು ನೀಡಿದ್ದಾರೆ