ದಾರವಾಡ,.
ಬೆಳಗಾವಿ ಭೂ ಬಾಡಿಗೆ ವಸೂಲಾತಿ ಗುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ ಬೆಳಗಾವಿ ಪಾಲಿಕೆಗೆ ನೋಟೀಸ್ ನೀಡಿ ವಿಚಾರಣೆಯನ್ನು ಶುಕ್ರವಾರ ಮುಂದಕ್ಕೆ ಹಾಕಿದೆ .
ಸಧ್ಯ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಙತೆ ನ್ಯಾಯಕೋರಿ ಹಿಂದಿನ ಗುತ್ತಿಗೆದಾರ ಹೊರಟ್ಡಿ ಎಂಬುವರು ಹೈ ಕೋರ್ಟ ಮೆಟ್ಟಿಲು ಹತ್ತಿದ್ದರು.

ಇಂದು ಪ್ರಕರಣಕ್ಕೆ ಸಂಬಂಧಿಸಿದಙತೆ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಇದೇ ಶುಕ್ರವಾರ ಬೆಳಿಗ್ಗೆ 10 ಕ್ಕೆ ದಾಖಲಾತಿಯೊಂದಿಗೆ ಹಾಜರಾಗಲು ಸೂಚನೆ ನೀಡಿದ್ದಾರೆ..
ಕಳೆದ ದಿನ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಗುತ್ತಿಗೆದಾರ ಹೊರಟ್ಟಿ ಅವರಿಗೆ ದಂಡ ವಿಧಿಸುವುದು ಸೇರಿದಂತೆ ಅವರ ಮೇಲಿರುವ ಆರೋಪಗಳ ಬಗ್ಗೆ ಕಮಿಟಿ ರಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಈಗ ಪ್ರಕರಣ ಹೈಕೋರ್ಟ ಮೆಟ್ಡಿಲು ಹತ್ತಿದ್ದರಿಂದ ಅದರ ಗಂಭೀರತೆ ಮತ್ತಷ್ಟು ಹೆಚ್ಚಾಗಿದೆ. ಇಲ್ಲಿ ಫಿರ್ಯಾದಿದಾರರ ಪರವಾಗಿ ನಿಲೇಂದ್ರ ವಾದ ಮಂಡಿಸಿದರು.