ಸಂತ್ರಸ್ತರ ನೆರವಿಗೆ ಧಾವಿಸಿದ ಜಿಲ್ಲಾಡಳಿತ.
ಜಿಲ್ಲಾಡಳಿತಕ್ಕೆ ಸಹಕಾರಿಯಾದ ಜನಪ್ರತಿನಿಧಿಗಳು.
ಪ್ರವಾಹ ಪಿಡೀತ ಪ್ರದೇಶದಲ್ಲಿ ಜಾರಕಿಹೊಳಿ ತಂಡ.
ಬೆಳಗಾವಿಯಲ್ಲಿ ಬಿಜೆಪಿ ನಗರಸೇವಕರ ತಂಡ ವಾರ್ಡನಲ್ಲಿ ಸಂಚಾರ
ಬೆಳಗಾವಿ.
ಗಡಿನಾಡ ಬೆಳಗಾವಿ ಜಿಲ್ಕೆಯಲ್ಲಿ ಈಗ ನದಿಗಳ ಅಬ್ಬರದಿಂದ ಎಲ್ಲೆಡೆ ಪ್ರವಾಹ ಭೀತಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಮಸ್ತರ ನೆರವಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಧಾವಿಸುತ್ತಿದೆ..ಅದರಲ್ಲಿ ಋಡು ಮಾತಿಲ್ಲ.

ಬಹುತೇಕ ಕಡೆಗೆ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಸಙತ್ರಸ್ತರ ನೆರವಿಗೆ ಧಾವಿಸುವುದರಲ್ಲಿ ಸಕ್ರೀಯರಾಗಿದ್ದಾರೆ.
ಆದರೆ ಗಮನುಸಬೇಕಾದ ಸಂಗತಿ ಎಂದರೆ, ಯಮಕನಮರಡಿ, ಗೋಕಾಕ, ಅರಭಾವಿ ಕ್ಷೇತ್ರದಲ್ಲಿ ಜಾರಕುಹೊಳಿ ತಂಡ ಈ ವಿಷಯದಲ್ಲಿ ಸಕ್ರೀಯವಾಗಿ ಸಂಸ್ತಸ್ತರ ನೆರವಿಗೆ ಅಭಯ ಹಸ್ತ ಚಾಚಿದ್ದಾರೆ.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಎನ್ ಎಸ್ ಎಫ್ ತಂಡ ಸೂತ್ರಸ್ತರ ನೆರವಿಗೆ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮಲಗೌಡ ಪಾಟೀಲರು ಪ್ರವಾಹ ಪಿಡೀತ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದಾರೆ.

ಮತ್ತೊಂದು ಕಡೆಗೆ ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಬಿಜೆಪಿ ನಗರಸೇವಕರು ತಮ್ಮ ತಮ್ಮ ವಾರ್ಡಗಳಲ್ಲಿ ಸಂಚಾರ ನಡೆಸಿದ್ದಾರೆ