ಬೆಳಗಾವಿ. ಕಳೆದ ದಿನ ರಾತ್ರಿ ಹೊತ್ತು ನಾವಗೆ ಬಳಿ ಖಾಸಗಿ ಕಾರ್ಖಾನೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಯಶಸ್ವಿಯಾಗಿದೆ.

ಈ ಘಟನೆಯಲ್ಲಿ ಯಲ್ಲಪ್ಪ ಎನ್ನುವ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇನ್ನೂ ಕೆಲವರು ಸುಟ್ಟ ಗಾಯಗಳಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿ ಮೃತನ ಕುಟುಂಬಕ್ಕೆ ಕಾರ್ಖಾನೆ ಮಾಲಿಕ 10 ಲಕ್ಷ ರೂ ಪರಿಹಾರ ಮತ್ತು ಒಬ್ಬರಿಗೆ ನೌಕರಿಕೊಡುವ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.