ವಿಶ್ವಹಿಂದು ಪರಿಷತ್ ಮನವಿ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು.
ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಲಿ. ಹಿಂದೂಗಳ ದೇವಸ್ಥಾನ ರಕ್ಷಿಸಿ.
ಬೆಳಗಾವಿ:
ಬಾಂಗ್ಲಾ ದೇಶದ ಪರಿಸ್ಥಿತಿಯ ಲಾಭ ಪಡೆದು ಬಾರತದ ಗಡಿಯೊಳಗೆ ನುಗ್ಗುವ ಜಿಹಾದಿಗಳನ್ನು ತಡೆಯಬೇಕೆಂದು ವಿಶ್ವ ಹಿಂದು ಪರಿಷತ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ,
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ತಿನ ಉತ್ತರ ಪ್ರಾಂತ್ಯದ ಕೋಶಾದ್ಯಕ್ಷ ಕೃಷ್ಣ ಭಟ್ ಅವರು, ಸಧ್ಯ ಜಹಾದಿಗಳು ಒಳನುಸುಳಿವಿಕೆ ಪ್ರಯತ್ನ ಮಾಡಬಹುದು. ಇದನ್ನೂ ತಡೆಯುವ ನಿಟ್ಟಿನಲ್ಲಿ ಕೇಂದ್ರ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು ನಮ್ಮ ದೇಶದ ಭದ್ರತಾ ಪಡೆಗಳು ಗಡಿಯಲ್ಲಿ ಹದ್ದಿನ ಕಣ್ಣಿಟ್ಟು, ಯಾವುದೇ ರೀತಿಯ ಅತಿಕ್ರಮಣಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು,

ಹಿಂದೂ ದೇವಸ್ಥಾನ ರಕ್ಷಿಸಿ
ಬಾಂಗ್ಲಾ ಹಿಂಸಾಚಾರದಲ್ಲಿ ನಲುಗುತ್ತಿರುವ ಹಿಂದುಗಳನ್ನು ಮತ್ತು ಹಿಂದು ಧಾಮರ್ಿಕ ಕೇಂದ್ರಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಭಟ್ ಆಗ್ರಹಿಸಿದರು.
ಬಾಂಗ್ಲಾ ದೇಶದಲ್ಲಿ ಹಿಂದು ಮನೆಗಳ ಲೂಟಿ, ಹಿಂದುಗಳ ಇಸ್ಕಾನ್ ಮಂದಿರ ಧ್ವಂಸ ಮಾಡಲಾಗಿದೆ. ಅಲ್ಲದೇ ಹಿಂದು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿರುವುದು ಆತಂಕ ಮೂಡಿಸುವಂತಾಗಿದೆ ಎಂದರು.

ವಿಎಚ್ ಪಿ ಜಿಲ್ಲಾಧ್ಯಕ್ಷ ಪ್ರಮೋದ ಕುಮಾರ ವಕ್ಕುಂದಮಠ, ಜಿಲ್ಲಾ ಕಾರ್ಯದಶರ್ಣಟಿಜಜಜಿಟಿಜಜ ಆನಂದ ಕರಲಿಂಗಣ್ಣವರ, ಬಜರಂಗದಳ ಜಿಲ್ಲಾ ಸಂಯೋಜಕ ಸಂತೋಷ ಮಾದಿಗರ, ಪ್ರಾಂತ ಉಪಾಧ್ಯಕ್ಷ ಶ್ರೀಕಾಂತ ಕದಮ, ಜಿಲ್ಲಾ ಕೋಶಾಧ್ಯಕ್ಷ ಮೇಶ ಚಂಡಕ, ನಗರ ಕಾರ್ಯದಶರ್ಣಟಿಜಜಜಿಟಿಜಜ ನಾಗೇಶ ಕಾಂಬಳೆ, ಮುನಿಸ್ವಾಮಿ ಭಂಡಾರಿ, ಆದಿನಾಥ ಗಾವಡೆ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.