Headlines

ಗ್ರಾಮೀಣ ಜನರ‌ ಸಮಸ್ಯೆ ಆಲಿಸಿದ ಸಂಸದ ಶೆಟ್ಟರ್..


ಸಂಸದ ಜಗದೀಶ್ ಶೆಟ್ಟರ್ ಬಸವೇಶ್ವರ ವೃತ್ತ ಹಾಗೂ ಟೋಲ್ ನಾಕಾ ಭೆಟ್ಟಿ


ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ ನಡುವಿನ ಅಸುರಕ್ಷಿತ ಸಂಚಾರಿ ವ್ಯವಸ್ಥೆ ಪರಿಶೀಲನೆ

ಗ್ರಾಮೀಣ ಕ್ಷೇತ್ರದಲ್ಲಿ ಸಂಸದ ಶೆಟ್ಡರ್ ಭರ್ಜರಿ ಓಡಾಟ. ಜನರ ಸಮಸ್ಯೆಗೆ ಸ್ಪಂದಿಸಿದ ಶೆಟ್ಡರ್

ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ ನಡುವಿನ ಅಸುರಕ್ಷಿತ ಸಂಚಾರಿ ವ್ಯವಸ್ಥೆ ಪರಿಶೀಲನೆ
ಬೆಳಗಾವಿ .

ಬೆಳಗಾವಿ: ಹಿರೇಬಾಗೇವಾಡಿಯ ಬಸವೇಶ್ವರ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ದಾರಿ ನಡುವಿನ ಸಂಚಾರಕ್ಕಾಗಿ ರಸ್ತೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ
ಹಿರೇಬಾಗೇವಾಡಿಯ ನಾಗರಿಕರು ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ
ಪ್ರವಾಸಿ ಮಂದಿರದಲ್ಲಿ ಈ ಹಿಂದೆ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಸಂಸದ ಜಗದೀಶ ಶೆಟ್ಟರ ಹಿರೇಬಾಗೇವಾಡಿಗೆ ಭೇಟಿ ನೀಡಿ, ಬಸವೇಶ್ವರ ವೃತ್ತ ಹಾಗೂ ಟೋಲ್ ನಾಕಾ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.


.ಪೂನಾ,ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಳಗಾವಿ-ಬೈಲಹೊಂಗಲ್ ರಾಜ್ಯ ಹೆದ್ದಾರಿಗಳು ಇದೇ
ಹಿರೇಬಾಗೇವಾಡಿ ಜನ ವಸತಿ ಪ್ರದೇಶಗಳಿರುವ ನಡುವೆ ಹಾಯ್ದು ಹೋಗುತ್ತವೆ .ಹಾಗಾಗಿ ಈ
ಬದಿಯಿಂದ ಆ ಬದಿಗೆ ಸಂಚರಿಸಲು ಸುರಕ್ಷಿತವಾದ ದಾರಿ ಇಲ್ಲ ಎಂಬವದನ್ನು ಮನವರಿಕೆ
ಮಾಡಿಕೊಂಡರು.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಲು ನಾಗರಿಕರು, ಅಂಗನವಾಡಿ ಮಕ್ಕಳು,
ವಿದ್ಯಾರ್ಥಿಗಳು, ಸರಕಾರಿ ಆಸ್ಪತ್ರೆ, ಆರಕ್ಷಕ ಠಾಣಿಗೆ ಬರುವ ಜನರು ನಿತ್ಯ ಅನುಭವಿಸುತ್ತಿರುವ ಸಂಚಾರಿ ಸಮಸ್ಯೆಗಳನ್ನು ಆಲಿಸಿದರು.

ಸ್ಥಳದಲ್ಲಿಯೇ ಉಪಸ್ಥಿತರಿದ್ದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಟೋಲ್ ನಾಕಾ ಬಳಿ ತೆರಳಿ ಪರಿಶೀಲನೆ ನಡೆಸಿದರು. ಹಿರೇಬಾಗೇವಾಡಿ ಟೋಲ್ ಭಾಗದಿಂದ ಪಾರಿಶ್ವಾಡ
ಭಾಗಕ್ಕೆ ತೆರಳುವ ದ್ವಿವಿಭಜಕ ರಸ್ತೆ ದಾಟುವದು ಸಹ ತುಂಬಾ ಅಪಾಯಕಾರಿಯಾಗಿದ್ದು, ಸಾಕಷ್ಟು ಅಫಘಾತಗಳು ಆಗಿರುವ ಬಗ್ಗೆ ಸಾರ್ವಜನಿಕರು ಆಂತಕ ವ್ಯಕ್ತಪಡಿಸಿದರು.

ಈ ಎಲ್ಲಾ ಸಮಸ್ಯೆಗಳು ಇದೀಗ ನನ್ನ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ತಾವು ಅಗತ್ಯ ಕ್ರಮ
ಕೈಗೊಳ್ಳದಾಗಿ ಸಂಸದ ಜಗದೀಶ ಶೆಟ್ಟರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸೀತ್ಮಾ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ,
ಗ್ರಾ.ಪಂ ಈರಣ್ಣಾ ಅರಳಿಕಟ್ಟಿ, ಸಂಜಯ ದೇಸಾಯಿ, ಉತ್ತರ ಕರ್ನಾಟಕ ಜನ ಸಂಗ್ರಾಮ
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ವಸ್ತ್ರದ ಹಾಗೂ ಬಿಜೆಪಿ ಯುವ ಮುಖಂಡ
ಆನಂದ ನಂದಿ, ಧನಂಜಯ ಜಾಧವ, ಅಶೋಕ ಜಪ್ತಿ, ದಯಾನಂದ ಹಂಚಿನಮನಿ, ಬಸಪ್ಪ ವಾಲಿಶೆಟ್ಟರ,
ಉಮೇಶ ನಂದಿ, ಬಸವರಾಜ ಹಂಚಿನಮನಿ, ಶ್ರೀಕಾಂತ ಹಂಚಿನಮನಿ, ನವೀನ ತೋಟಗಿ, ರಾಜು
ಅರಳಿಕಟ್ಟಿ, ಗಿರೆಪ್ಪ ಸ್ಪಪಡ್ಲಿ, ಶಿವಾನಂದ ಸೊನಪ್ಪನ್ನವರ ಮತ್ತು ಜಿವಿವಿ ಸಂಘದ ಶಾಲಾ ಶಿಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿಭಿವೃದ್ಧಿ ಪ್ರಾಧಿಕಾರದ ಸಹಾಯಕ ಅಭಿಯಂತ ಅಜಿತ ಗ್ರಾಮಸ್ಥರು ಸೇರಿದಂತೆ ಹಲವಾರು ನಾಗರಿಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಂಸದ ಜಗದೀಶ ಶೆಟ್ಟರ್ ಶ್ರಾವಣ ಮಾಸದ ನಿಮಿತ್ತ ಇಲ್ಲಿನ ಶ್ರೀ ಫಡಿಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಕಮೀಟಿ ಹಾಗೂ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು. ನಂತರ ನೂತನ ಬೆಳಗಾವಿ-ಧಾರವಾಡ ರೈಲ್ವೆ ಯೋಜನೆ ಜಾರಿಯಿಂದಾಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಕುರಿತಂತೆ ಸಾರ್ವಜನಿಕರಿಂದ ಹಲವಾರು ಮನವಿ ಸ್ವೀಕರಿಸಿದರು.

Leave a Reply

Your email address will not be published. Required fields are marked *

error: Content is protected !!