
ಸಿದ್ದು ಕೆಳಗಿಳಿಸಲು ಡಿಕೆ ಗ್ಯಾಂಗ್ ಕಸರತ್ತು..?
ಬೆಂಗಳೂರು. ಮೈಸೂರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅದರಲ್ಲೂ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ದಿನ ಪಕ್ಷ ಶಾಶ್ವತ..ಇವತ್ತು ಅವರು, ನಾಳೆ ಬೇರೆಯವರು ಎನ್ನುವ ಮಾತು ಸಿದ್ಧು ವಿರೋಧಿ ಬಣ ಮತ್ತಷ್ಟು ಪುಟಿದೇಳುವಂತೆ ಮಾಡಿದೆ. ಮೇಲ್ನೋಟಕ್ಕೆ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡ ಸಚಿವರು, ಬಿಜೆಪಿಯನ್ನು ಟೀಕಿಸಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎನ್ನುತ್ತಲೇ ಪರೋಕ್ಷವಾಗಿ ಡಿಕೆಶಿಯನ್ಬು ಆ ಪಟ್ಟಕ್ಕೆ ಕುಳ್ಳಿರಿಸುವ ಪ್ರಯತ್ನ…