ಮದ್ಯದ ಮಳಿಗೆ ಸ್ಥಳಾಂತರಕ್ಕೆ ಒತ್ತಾಯಿಸಿ ಕಿತ್ತೂರಿನ ಮಹಿಳೆಯರ ಪ್ರತಿಭಟನೆ
ಬೆಳಗಾವಿ:
ಕಿತ್ತೂರಿನ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂಎಸ್ ಐಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಕಿತ್ತೂರಿನ ಮಹಿಳೆಯರು ನಗರದ ಅಬಕಾರಿ ಇಲಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಮದ್ಯದ ಮಳಿಗೆಯ ಎದುರು ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು, ಈ ಮಳಿಗೆಯಿಂದ ಕಿರಿಕಿರಿಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕಳೆದ 14 ವರ್ಷಗಳಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಮದ್ಯಂಗಡಿ ತೆರದ ನಂತರ ಸೋಮವಾರ ಪೇಟೆಯ ಮಾರುಕಟ್ಟೆ ಸಹಿತ ಬಂದ್ ಆಗಿದೆ. ರಾತ್ರಿ ಕುಡಿದು ಮನೆಯ ಬಾಗಿಲಿನ ಎದುರಿನಲ್ಲಿಯೇ ಮಲಗುತ್ತಾರೆ. ರಾತ್ರಿ ಮನೆ ಬಾಗಿಲು ಬಿಡಿದು ನಿಂದಿಸುವುದು ನಡೆದೇ ಇದೆ. ಮದ್ಯಂದಗಡಿಗೆ ಲಾರಿ ಬಂದರೆ ಮುಗಿತು ಹೆಣ್ಣು ಮಕ್ಕಳು ಹೊರಗೆ ಹೋಗದೆ ಸ್ಥಿತಿ ನಿರ್ಮಾಣ ವಾಗುತ್ತದೆ. ಹೀಗಾಗಿ, ಕೊಡಲೇ ಅಧಿಕಾರಿಗಳು ಗಮನ ಹರಿಸಿ ಮದ್ಯಂಗಡಿ ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಬಕಾರಿ ಇಲಾಖೆಯರು ಮದ್ಯಂಗಡಿ ಬಂದ್ ಮಾಡುವರಗೆ ನಾವೂ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.