ಸವದಿ ಶಿಷ್ಯ ಡಿಸಿಸಿ ಅಧ್ಯಕ್ಷ?
ಬೆಳಗಾವಿ.. ಅಂತೂ ಇಂತೂ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ನಿನ್ನೆ ಅಂಗೀಕಾರವಾಗಿದೆ. ಹೀಗಾಗಿ ಮುಂದಿನ ಅಧ್ಯಕ್ಷ ಯಾರು ಎನ್ನುವ ಚರ್ಚೆ ರಾಜಕೀಯವಲಯದಲ್ಲಿ ನಡೆದಿದೆ. ಬೆಳಗಾವಿ ರಾಜಕಾರಣದ ಕೇಂದ್ರ ಬಿಂದು ಬೆಳಗಾವಿ ಡಿಸಿಸಿ ಬ್ಯಾಂಕ್. ಹೀಗಾಗಿ ಅಧ್ಯಕ್ಷ ಯಾರಾಗ್ತಾರೆ ಎನ್ನುವ ಕುತೂಹಲ ಬಹುತೇಕರನ್ನು ಕಾಡುತ್ತಿದೆ. ಸಧ್ಯ ನಡೆಯುತ್ತಿರುವ ಚರ್ಚೆಯ ಪ್ರಕಾರ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಿತ್ತೂರಿನ ಮಾಜಿ ಶಾಸಕ ಮಹಾಙತೇಶ ದೊಡಗೌಡರ ಹೆಸರು ಅಧ್ಯಕ್ಷ ಸ್ಥಾನದ ರೇಸನಲ್ಲಿ ಕೇಳಿ ಬರುತ್ತಿದೆ….