Headlines

ಕಿತ್ತೂರು ಉತ್ಸವದ ಈ ಲಿಂಕ್ ಬಳಸಿದರೆ ಕಾಪಿರೈಟ್.! ಹುಷಾರು..

ವಾರ್ತಾ ಇಲಾಖೆ ಕಳಿಸಿದ ಕಿತ್ತೂರು ಉತ್ಸವದ ಲೈವ್ ಲಿಂಕ್.

ಇನ್ನುಳಿದ ಯೂಟೂಬ್ ಗಳಲ್ಲಿ ಪ್ರಸಾರ ಮಾಡದ ಯೂಟೂಬರ್ಸ್..


ಬೆಳಗಾವಿ.
ವೀರರಾಣಿ ಕಿತ್ತೂರು ಚನ್ನಮ್ಮವ 200 ವೇ ವರ್ಷದ ವಿಜಯೋತ್ಸವ ಸಡಗರ ಸಂಭ್ರದಿಂದ ಸಾಗಬೇಕು, ಜೊತೆಗೆ ಮನೆಯಲ್ಲಿದ್ದುಕೊಂಡೇ ಎಲ್ಲರೂ ಕುಳಿತು ನೋಡುವಂತಾಗಬೇಕು ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಜಿಲ್ಲಾಧಿಕಾರಿಗಳ ಆಶಯಕ್ಕೆ ಎಳ್ಳು ನೀರು ಬಿಡುವ ಕೆಲಸ ಮಾಡಲಾಗುತ್ತಿದೆಯೇ?.


ಸಧ್ಯ ನಡೆದಿರುವ ಬೆಳವಣಿಗೆಯನ್ನು ಗಮನಿಸಿದರೆ ಮೇಲಿನ ವಾಕ್ಯದಲ್ಲಿ ಸತ್ಯವಿದೆ ಎಂದು ಹೇಳಬಹುದು.
ಕಿತ್ತೂರು ಉತ್ಸವದ ಬಗ್ಗೆ ವಿಶೇಷ ಆಸಕ್ತಿ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಪ್ರಚಾರದ ದೃಷ್ಟಿಯಿಂದ ಏನೆಲ್ಲ ವ್ಯವಸ್ಥೆ ಬೇಕು ಎನ್ನುವುದರ ಬಗ್ಗೆ ಚರ್ಚ ನಡೆಸಿದ್ದರು,
ಆ ಸಂದರ್ಭದಲ್ಲಿ ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ಲೈವ್ ಲಿಂಕ್ನ್ನು ವಾರ್ತಾ ಇಲಾಖೆ ಮೂಲಕ ಕೊಡಬೇಕು ಎಂದು ಮನವಿ ಮಾಡಿದ್ದರು, ಇಲ್ಲಿ ವಾತರ್ಾ ಇಲಾಖೆ ಮೂಲಕ ಬಂದರೆ ಅದನ್ನು ಇನ್ನುಳಿದವರು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಳ್ಳಬಹುದು,
ಆದರೆ ಈಗ ವಾರ್ತ ಇಲಾಖೆಯವರು ಕಳಿಸಿದ ಖಾಸಗಿ ವ್ಯಕ್ತಿಯ ಲಿಂಕ್ ಕಳಿಸಿದರೆ ಅದು ಕಾಪಿರೈಟ್ ಬರುತ್ತಿದೆ. ಹೀಗಾಗಿ ಯಾರೊಬ್ಬರು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಿತ್ತೂರು ಉತ್ಸವದ ಪ್ರಚಾರಕ್ಕೆ ಹಿನ್ನೆಡೆ ಆಗುತ್ತಿದೆ ಎಂದು ಹೇಳಬಹುದು.

Leave a Reply

Your email address will not be published. Required fields are marked *

error: Content is protected !!