ಬ್ರಾಹ್ಮಣರು ಸಂಘಟಿತರಾದರೆ ನಿಂದಕರು ದೂರ

ಹಿಂಡಲಗಾದಲ್ಲಿ ಬ್ರಾಹ್ಮಣರ ಸಂಘಟನೆ ಸಭೆ.

ಸಮಾಜದ ಅಭಿವೃದ್ಧಿಗೆ ಟ್ರಸ್ಟ ಬದ್ಧ. ಇನ್ನು‌ಮುಂದೆ ಪ್ರತಿಯೊಂದು ಕಡೆಗೂ ಸಭೆ.

ನಿರುದ್ಯೋಗ‌ ನಿವಾರಣೆಗೆ ಪ್ರಯತ್ನ

ಪೇಜಾವರ ಶ್ರೀಗಳ ವಿರುದ್ಧ. ಹೇಳಿಕೆ ನೀಡಿದ್ದ ಬಿ.ಕೆ.ಹರಿಪ್ರಸಾದ್ ವಿರುದ್ಧ ಕಿಡಿಕಾರಿದ ಬ್ರಾಹ್ಮಣರು.

ಬೆಂಗಳೂರಿನಲ್ಲಿ‌ ನಡೆಯುವ ಬ್ರಾಹ್ಮಣರ ಸಮಾವೇಶ ಯಶಸ್ಸಿಗೆ ನಿರ್ಧಾರ.
`

ಬೆಳಗಾವಿ.
ಸಮಾಜದ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಬದ್ಧವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರೂ ಆಗಿರುವ ಉದ್ಯಮಿ ರಾಮ ಭಂಡಾರಿ ಹೇಳಿದರು.
ಇಲ್ಲಿನ ವಿಜಯನಗರದ ವಿಪ್ರ ಬಳದ ಮತ್ತು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಹಿಂಡಲಗಾ ಬಳಿಯ ಗಣೇಶ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ ಬ್ರಾಹ್ಮಣರ ಸಂಘಟನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು,
ಸಧ್ಯದ ಪರಿಸ್ಥಿತಿಯಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ನಾವು ಸಂಘಟಿತರಾದರೆ ಮಾತ್ರ ಸಮಾಜದ ನಿಂದಕರು ದೂರವಾಗುತ್ತಾರೆಂದರು,

ಈ ಹಿನ್ನೆಲೆಯಲ್ಲಿ ಸ್ಥಾಪಿತಗೊಂಡ ಟ್ರಸ್ಟ್ ಬ್ರಾಹ್ಮಣರ ಸಂಘಟನೆ ಜೊತೆಗೆ ಅನೇಕ ಸಮಾಜದ ಅಭಿವೃದ್ಧಿ ಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಈಗ ಬೆಳಗಾವಿಯಾದ್ಯಂತ ಸಭೆಗಳನ್ನು ಮಾಡುವ ಮೂಲಕ ಸಂಘಟನೆ ಶಕ್ತಿಯನ್ನು ಇನ್ನಷ್ಟು ಇಮ್ಮಡಿಗೊಳಿಸಬೇಕಾಗುತ್ದಿದೆ ಎಂದು ಅವರು ಹೇಳಿದರು.
ಕಳೆದ ಒಂದು ವರ್ಷದ ಹಿಂದೆ ಆರಂಭಗೊಂಡ ಈ ಟ್ರಸ್ಟ್ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿದೆ. ಹೀಗಾಗಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಮ್ಮೆಲ್ಲರ ಸಹಕಾರ ಅತೀ ಮುಖ್ಯ ಎಂದು ರಾಮ ಭಂಡಾರಿ ಹೇಳಿದರು,


ಶಿಕ್ಷಣ ಸೇರಿದಂತೆ ಮಕ್ಕಳಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯಕ್ತಮ ಹಾಕಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಟ್ರಸ್ಟ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.
ಇಷ್ಟು ದಿನ ಉದ್ಯಮಬಾಗ ಪರಿಸರದಲ್ಲಿ ಮಾತ್ರ ಟ್ರಸ್ಟ್ ಸಭೆಗಳನ್ನು ಮಾಡಲಾಗುತ್ತಿತ್ತು, ಇನ್ನು ಬೆಳಗಾವಿ ನಗರದ ಪ್ರತಿಯೊಂದು ಪ್ರದೇಶದಲ್ಲಿ ಸಭೆಗಳನ್ನು ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಆಧ್ಯತೆ ಕೊಡಲಾಗುವುದು ಎಂದು ಅವರು ಹೇಳಿದರು.


ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ ಮಾತನಾಡಿ, ಬ್ರಾಹ್ಮಣ ಸಮಾಜ ಯಾವಾಗಲೂ ಯಾರ ಮುಂದೆಯೂ ಕೈವೊಡ್ಡಿ ನಿಂತ ಉದಾಹರಣೆಯಿಲ್ಲ. ಆದರೆ ಕೆಲವರು ನಮ್ಮ ಸಮಾಜದ ಮುಗ್ಧತೆಯನ್ನು ದುರುಪಯೋಗಡಿಸಿಕೊಳ್ಳುತ್ತಿದ್ದಾರೆ, ಆದ್ದರಿಂದ ನಾವೆಲ್ಲರೂ ಸಂಘಟಿತರಾಗುವ ಮೂಲಕ ಎಲ್ಲವನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು,
ಬ್ರಾಹ್ಮಣ ಸಮಾಜದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಅವರಿಗೆ ತರಬೇತಿ ಕೊಡುವ ಕೆಲಸವನ್ನೂ ಮಾಡಲಾಗುತ್ತದೆ ಎಂದು ಭರತ್ ದೇಶಪಾಂಡೆ ಹೇಳಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಿಲಾಸ ಬದಾಮಿ ಇಲ್ಲಿಯವರೆಗೆ ನಡೆದು ಬಂದ ಪ್ರಗತಿ ಬಗ್ಗೆ ವಿವರಿಸಿದರು,

Ram bhandari.

ಟ್ರಸ್ಟ್ನ ಜಂಟೀ ಕಾರ್ಯದರ್ಶಿ ಮತ್ತು ಎಕೆಬಿಎಂಎಸ್ನ ಸಂಘಟನಾ ಕಾರ್ಯದರ್ಶಿ ವಿಲಾಸ ಜೋಶಿ ಅವರು ಬ್ರಾಹ್ಮಣ ಸಮಾಜದ ನಿಂದಕರ ವಿರುದ್ಧ ಕಿಡಿಕಾರಿದರು,
ಇತ್ತೀಚೆಗೆ ಪೇಜಾವರ ಶ್ರೀಗಳ ಕುರಿತು ಕಾಂಗ್ರೆಸ್ನ ಬಿ.ಕೆ .ಹರಿಪ್ರಸಾದ್ ನೀಡಿದ ಹೇಳಿಕೆಯನ್ನು ಖಂಡಿಸಿದರು, ಈ ನಿಟ್ಟಿನಲ್ಲಿ ಹೋರಾಟದ ಮೂಲಕ ನಿಂಕರಿಗೆ ಉತ್ತರ ಕೊಡಬೇಕು ಎಂದು ಅವರು ಹೇಳಿದರು,
ನಗರಸೇವಕ ಜಯತೀರ್ಥ ಸವದತ್ತಿ ಅವರೂ ಬ್ರಾಹ್ಮಣರ ಸಂಘಟನೆ ಮತ್ತು ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಹೊಳ್ಳಬೇಕು ಎಂದರು,

ವಿಪ್ರ ಬಳಗದ ಕಾರ್ಯದರ್ಶಿ ಮಹೇಶ ಕುಲಕರ್ಣಿ ಅವರು, ನಿರುದ್ಯೋಗಿ ಬ್ರಾಹ್ಮಣರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದರು, ಬಳಗದ ಅಧ್ಯಕ್ಷ ವೆಂಕಟೇಶ ನಾಯಿಕ, ಜಿಎಸ್, ಕುಲಕರ್ಣಿ ಮಾತನಾಡಿದರು. ಅನುಶ್ರೀ ದೇಶಪಾಂಡೆ, ಶ್ರೀದೇವಿ ಪಾಟೀಲ ಮುಂತಾದವರು ಹಾಜರಿದ್ದರು.

ಹರಿಪ್ರಸಾದ್ ವಿರುದ್ಧ ಕಿಡಿ

ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ ಅವರು ಉಡುಪಿ ಪೇಜಾವರ ಶ್ರೀಗಳ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ಸಭೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು.
ವಿಪ್ರ ಬಳಗ ಮತ್ತು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಆಯೋಜನೆ ಮಾಡಿದ ಸಭೆಯಲ್ಲಿ ಬಹುತೇಕರು ಹರಿಪ್ರಸಾದ್ ಹೇಳಿಕೆಯನ್ನು ಬಲವಾಗಿ ಖಂಡಿಸಿದರು,
ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರಿ, ಭರತ ದೇಶಪಾಂಡೆ, ವಿಲಾಸ ಜೋಶಿ, ಜಯತೀರ್ಥ ಸವದತ್ತಿ ಮುಂತಾದವರು ಹರಿಪ್ರಸಾದ್ ಹೇಳಿಕೆಯನ್ನು ಖಂಡಿಸಿದರು, ‘ಅಷ್ಟೇ ಅಲ್ಲ ಶೀಘ್ರದಲ್ಲಿಯೇ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಡುವ ನಿರ್ಧಾರ ಮಾಡಲಾಗುವುದು ಎಂದು ತಿಳಿಸಲಾಯಿತು..

Leave a Reply

Your email address will not be published. Required fields are marked *

error: Content is protected !!