Headlines

‘ಮುಸ್ಲೀಂರ ಓಲೈಕೆ ಬಿಡಿ

ಸರ್ಕಾರಕ್ಕೆ ಮನವಿ ಮಾಡಿದ ಸಂಘಟನೆಗಳು.

ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ

ಬೆಳಗಾವಿ:

2022ರ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ಪ್ರಕರಣವನ್ನು ರಾಜ್ಯ ಸರ್ಕಾರವು ಹಿಂಪಡೆದು ಆರೋಪಿಗಳನ್ನು ಮುಕ್ತಗೊಳಿಸುತ್ತಿರುವ ಕ್ರಮ ಖಂಡಿಸಿ, ಬೆಳಗಾವಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಮತಗಳ ಓಲೈಕೆಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ಕಾನೂನು ಬಾಹಿರ ಮತ್ತು ಸಮಾಜ ಘಾತುಕ ಶಕ್ತಿಗಳ ಸದೆಬಡೆದು ಉತ್ತಮ ಕಾನೂನು ಸುವ್ಯವಸ್ಥೆ ಸಮಾಜದಲ್ಲಿ ಸ್ಥಾಪಿಸ ಬೇಕಾದ ಸರ್ಕಾರದ ಕರ್ತವ್ಯ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅತ್ಯಂತ ಬೇಜವಾಬ್ದಾರಿ ಮತ್ತು ಅಸಂವಿಧಾನಿಕ ನಡೆಯಲ್ಲಿ ನಿರತವಾಗಿದೆ ಎಂದು ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದರು.

ರೋಹನ ಜವಳಿ ಮಾತನಾಡಿ, ದೇಶ ಸಮಾಜ ರಕ್ಷಿಸಲು ಇರುವ ಪೋಲೀಸರ, ಮಿಲಿಟರಿಯವರ ಮೇಲೆಯೆ ದಾಳಿ ಮಾಡುತ್ತಾ ಹೋದರೆ ಸಮಾಜ ಹೇಗೆ ಸುಧಾರಿಸಲು ಹೇಗೆ ಸಾಧ್ಯ? ಹಾಗಾಗಿ ಎಲ್ಲಾ ಹಿಂದೂ ಸಮಾಜ ಇದನ್ನು ಖಂಡಿಸುತ್ತದೆ ಎಂದರು. ಸತೀಶ ಬಾಚೀಕra ಮಾತನಾಡಿ, ಎಲ್ಲಾ ಮಹಿಳಾ ಸಂಘ, ಯುವಕ ಸಂಘ, ಗಣೇಶೋತ್ಸವ ಮಂಡಳ ಶಾರದೋತ್ಸವ ಮಂಡಳ ಎಲ್ಲರೂ ಎಚ್ಚರ ವಹಿಸುವ ಅವಶ್ಯಕತೆ ಇದೆ. ಹಿಂದೂ ಹಬ್ಬಗಳಿಗೆ ನೂರೆಂಟು ಷರತ್ತು ವಿಧಿಸುವ ಕಾಂಗ್ರೆಸ್ ಸರ್ಕಾರ ಪೊಲೀಸರ ಮೇಲೆ ಹಲ್ಲೆ ಮಾಡುವ ಜಿಹಾದಿಗಳನ್ನು ಮಟ್ಟ ಹಾಕುವ ಬದಲು ಅವರನ್ನು ರಕ್ಷಿಸಲು ಮೊಕದ್ದಮೆ ಹಿಂದೆ ತೆಗೆದುಕೊಳ್ಳುವ ಈ ದುಷ್ಟ ನಿರ್ಧಾರ ಖಂಡಿಸುತ್ತೇವೆ ಎಂದರು.

ಅಗ್ರಾನಿ ದಮ್ಮಣಿಗಿ ಮಾತನಾಡಿ, ಈ ರೀತಿ ತುಷ್ಟೀಕರಣ ನೀತಿ, ವಕ್ಫ್ಮಂಡಳಿಯಿಂದ ರೈತರ ಜಮೀನನ್ನು ತಮ್ಮದು ಎಂದು ನೋಟೀಸ ಕಳಿಸು ನೀಚ ಕೃತ್ಯ ಸಮಾಜದ ಎಲ್ಲಾ ಬಂದುಗಳು ರೈತರೂಬೀದಿಗೆ ಬಂದು ಹೋರಾಟ ಮಾಡುವ ದಿನ ದೂರ ಇಲ್ಲ ಎಂಬ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

ಮಹೇಶ ಪೋರವಾಲ, ರಮೇಶ ಲದ್ದಡ, ಮುನಿಸ್ವಾಮಿ ಭಂಡಾರಿ, ಗಂಗಾರಾಮ ನಾಯ್ಕ, ಶ್ರೀಕಾಂತ ಕಾಂಬಳೆ, ಶ್ರೀಕಾಂತ ಕದಮ್, ದಯಾನಂದ ನೇತಲಕರ, ವಿಜಯೇಂದ್ರ ಜೋಶಿ, ಗಿರೀಶ ಪೈ, ಮಹೇಶ ಇನಾಮದಾರ, ಆರ್.ಎಸ್.ಮುತಾಲಿಕ, ಸದಾಶಿವ ಹಿರೇಮಠ, ಅಗ್ರಾನಿ ದಮ್ಮಣಗಿ ,ಜಯಾ ನಾಯ್ಕ, ಗೀತಾ ಹೆಗಡೆ, ಅಶೋಕ ಶಿಂತ್ರೆ, ವಿಜಯ ಜಾದವ, ಜೇಠಾಬಾಯಿ ಪಟೇಲ, ಕ್ರಷ್ಣ ಭಟ್ಟ ಮುಂತಾದ 40ಕ್ಕೂ ಹೆಚ್ಚು ಸಮಾಜದವರು ಪ್ರತಿಭಟನೆಯಲ್ಲಿ ಇದ್ದರು. ಕೊನೆಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!