ಸವದತ್ತಿಯಲ್ಲಿ ಕೇಂದ್ರ ಸಚಿವರ ಸಹೋದರ ಅರೆಸ್ಟ್
ಬೆಳಗಾವಿ ಸವದತ್ತಿ ಪಟ್ಟಣದಲ್ಲಿ ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಬಂಧನವಾಗಿದೆ. ಗೋಪಾಲ ಜೋಶಿ ವಿರುದ್ಧ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಎರಡು ಕೋಟಿ ವಂಚಿರುವ ಆರೋಪವಿತ್ತು. ಬೆಂಗಳೂರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಗೋಪಾಲ್ ಜೋಶಿ ವಿರುದ್ಧ ಪ್ದಾರಕರಣ ದಾಖಲಾಗಿತ್ತು . ಬೆಂಗಳೂರು ಬಸವೇಶ್ವರ ನಗರ ಪೊಲೀಸರು ಸವದತ್ತಿಗೆ ಆಗಮಿಸಿ ಗೋಪಾಲ ಜೋಶಿ ಅವರನ್ನು ಬಂಧಿಸಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.