MES ದವರಿಗೆ ಬುದ್ದಿಮಾತು ಹೇಳಿದ ಡಿಸಿ..!

ಬೆಳಗಾವಿ. ಕರಾಳ ದಿನಕ್ಕೆ ಅನುಮತಿ ಕೊಡಿ ಎಂದು ಬಂದಿದ್ದ ನಾಡದ್ರೋಹಿ Mes ನಾಯಕರಿಗೆ ಜಿಲ್ಲಾಧಿಕಾರಿಗಳು ಬುದ್ಧಿಮಾತು ಹೇಳಿ ವಾಪಸ್ಸು ಕಳಿಸಿದ ಘಟನೆ ಇಂದು ನಡೆಯಿತು.ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಇಲ್ಲಿಯವರೆಗೂ ನಡೆದಿದ್ದು ಬೇರೆ. ಆದರೆ, ಈ ಬಾರಿ ಮಾದರಿ ಕಾರ್ಯ ನಡೆಯಲಿದೆ. ಯಾವುದೇ ಕಾರಣಕ್ಕೂ ಕರಾಳ ದಿನಕ್ಕೆ ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ. ಆದರೆ, ನ.1ರಂದು ಬಿಟ್ಟು ಪರ್ಯಾಯ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತೇನೆ. ಆದರೆ,…

Read More

ಮಾಜಿ ವಿದ್ಯಾರ್ಥಿಗಳ “ಸ್ನೇಹ ಮಿಲನ”

ಬೆಳಗಾವಿ.ಸ್ವಾಧ್ಯಾಯ ವಿದ್ಯಾ ಮಂದಿರ, ಪ್ರೌಢಶಾಲೆ ತಿಲಕವಾಡಿ, ಬೆಳಗಾವಿಯ 1997-98 ನೇ ಸಾಲಿನ ವಿದ್ಯಾರ್ಥಿಗಳ “ಸ್ನೇಹ ಮಿಲನ” ಶನಿವಾರ 19.10.2024 ರಂದು ನಡೆಯಲಿದೆ. ಆ ಬ್ಯಾಚ್‌ನ ಎಲ್ಲ ಸಹಪಾಠಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ನಂಬರ್ ಗಳಿಗೆ ಸಂಪರ್ಕಿಸ ಬೇಕಾಗಿ ವಿನಂತಿ.ರವೀಂದ್ರ ಗೌಡ ಪಾಟೀಲ -94492 59995ಅಮಿತ ಕುಲಕರ್ಣಿ -99723 17914

Read More

16200 KG ದೀಪದ ಎಣ್ಣೆ ಸಂಗ್ರಹ

ಯಲ್ಲಮ್ಮನ ಸನ್ನಿಧಿ: 16,200 ಕೆಜಿ ಎಣ್ಣೆ ಸಂಗ್ರಹ-ದರ ಹೆಚ್ಚಿದ ಭಕ್ತಿಯಿಂದ ದೀಪ ಉರಿಸಿದ ಭಕ್ತಗಣ ಬೆಳಗಾವಿ.ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಈ ಬಾರಿ ನಡೆದ ನವರಾತ್ರಿ ಜಾತ್ರೆಯಲ್ಲಿ 16,200 ಕೆ.ಜಿ ದೀಪದ ಎಣ್ಣೆ ಸಂಗ್ರಹವಾಗಿದೆ. ನವರಾತ್ರಿಯಲ್ಲಿ ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಎದುರು ದೀಪ ಇರಿಸಲಾಗುತ್ತದೆ. ಗುಡ್ಡಕ್ಕೆ ಬರುವ ಪ್ರತಿ ಭಕ್ತರು ಅದಕ್ಕೆ ಎಣ್ಣೆ ಹಾಕಿ, ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎಣ್ಣೆ ದರ ಹೆಚ್ಚಿದ್ದರಿಂದ ಎಣ್ಣೆ ಸಂಗ್ರಹ ಪ್ರಮಾಣ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ,…

Read More

ಶಾಸಕರ ಮಧ್ಯಸ್ಥಿಕೆ ಇತ್ಯರ್ಥಗೊಂಡ ಸಮಸ್ಯೆ

ಶಾಸಕ ಅಭಯ ಪಾಟೀಲ ಮತ್ತು ಭಜರಂಗದಳದವರ ಮಧ್ಯಸ್ಥಿಕೆ.. ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್. ಕಾಲೇಜಿಗೆ ಪೊಲೀಸ್ ಅಧಿಕಾರಿಗಳ ದೌಡು ಬಗೆಹರಿದ ಸಮಸ್ಯೆ. ಧಾರ್ಮಿಕ‌ ಭಾವನೆಗೆ ಧಕ್ಕೆ ಇಲ್ಲ ಎಂದ ಪ್ರಿನ್ಸಿಪಾಲ ಶಿವಕುಮಾರ ಬೆಳಗಾವಿ.ನಗರದ ಕಾಲೇಜೊಂದರಲ್ಲಿ ಉಲ್ಭಣಿಸಿದ ಸೂಕ್ಷ್ಮ ಸಮಸ್ಯೆಯೊಂದು ಶಾಸಕರು ಮತ್ತು ಭಜರಂಗದಳದವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿದೆ.ಇಂದು ಬೆಳಗಿನ ಜಾವದಿಂದ ಮಚ್ಛೆ ಪ್ರದೇಶದ ಕಾಲೇಜೊಂದರಲ್ಲಿ ಮಂದಿರದ ಬಾಗಿಲಿಗೆ ಕೀಲಿ ಹಾಕಿ ಅನ್ಯ ಧರ್ಮದವರ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ…

Read More

ಸಿಎಂ ವಿರುದ್ಧ ಪಂಚಮಸಾಲಿಗಳ ಮುನಿಸು..!

ಪಂಚಮಸಾಲಿ ಸಮಾಜಕ್ಕೆ ನಡೆಯದ ಸಿ.ಎಂ: 18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ: ಬಸವ ಜಯಮೃತ್ಯುಂಜಯ ಶ್ರೀಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಅ.18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ತಿಳಿಸಿದರು.ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ 7ನೇ ಹಂತದ ಹೋರಾಟವಾಗಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ವಕೀಲರ ಸಮಾವೇಶದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅ.15ರಂದು ಸಭೆ ನಡೆಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದ…

Read More

ಮಹಾಲಕ್ಷ್ಮೀ ದರ್ಶನ ಪಡೆದ MLA ಬಾಲಚಂದ್ರ

ಮೂಡಲಗಿ- ದೇವರ ದಯೆಯಿಂದ ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ರೈತರು ಸುಖವಾಗಿದ್ದರೆ ಇಡೀ ದೇಶವೇ ಸುಖದಿಂದ ಇರುತ್ತದೆ ಎಂದು ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ರವಿವಾರ ಸಂಜೆ ತಾಲ್ಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮಿ ದೇವರ ದರ್ಶನ ಪಡೆದು ಮಾತನಾಡಿದ ಅವರು, ದಸರಾ ಮುಗಿದು ದೀಪಾವಳಿ ಹಬ್ಬಕ್ಕೆ ಅಣಿಯಾಗುತ್ತಿರುವ ಈ ಸಂದರ್ಭದಲ್ಲಿ ದೇವರು ಎಲ್ಲರಿಗೂ ಒಳ್ಳೇಯದು ಮಾಡುತ್ತಾನೆ ಎಂದವರು ತಿಳಿಸಿದರು. ಹಳ್ಳೂರ ಗ್ರಾಮದಲ್ಲಿಂದು ವಿವಿಧ ಕಾಮಗಾರಿಗಳಿಗೆ ಚಾಲನೆ…

Read More

ಯಲ್ಲಮ್ಮ ಸುಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಬದ್ಧ- ಸಿಎಂ

ಯಲ್ಲಮ್ಮನ ಗುಡ್ಡದಲ್ಲಿ ಕೊಠಡಿಗಳು, ಡಾರ್ಮಿಟರಿ ಲೋಕಾರ್ಪಣೆ ಸವದತ್ತಿ ಯಲ್ಲಮ್ಮ ಸುಕ್ಷೇತ್ರ ಸಮಗ್ರ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಬೆಳಗಾವಿ, :ರೇಣುಕಾ ಯಲ್ಲಮ್ಮ‌ ದೇವಸ್ಥಾನ ಪೌರಾಣಿಕ ಕ್ಷೇತ್ರವಾಗಿದ್ದು. ಇಲ್ಲಿ ಬರುವಂತಹ‌ ಲಕ್ಷಾಂತರ ಭಕ್ತಾಧಿಗಳ ವಸತಿ, ಕುಡಿಯುವ ನೀರು‌ ಹಾಗೂ ಶೌಚಾಲಯಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌‌ ಹೇಳಿದರು. ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರೂ. 22.45 ಕೋಟಿ ವೆಚ್ಚದಲ್ಲಿ ಪ್ರವಾಸಿಗರಿಗೆ ನಿರ್ಮಿಸಲಾಗಿರುವ ಕೊಠಡಿಗಳು, ಡಾರ್ಮಿಟರಿ, ಪಾರ್ಕಿಂಗ್, ಉದ್ಯಾನ…

Read More

ಸಿಎಂಗೆ ಲಿಂಬೆ ಹಣ್ಣು ಕೊಟ್ಟ ಯಡಿಯೂರಪ್ಪ..!

ಸವದತ್ತಿ.ಯಲ್ಲಮ್ನದೇವಿ ಸನ್ನಿಧಿಗೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಡಿಯೂರಪ್ಪ ಲಿಂಬೆ ಹಣ್ಣು ನೀಡಿದರು.ಸವದತ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲು ಆಗಮಿಸಿದ್ದ ಅವರು ಶಕ್ತಿ ದೇವತೆ ಯಲ್ಲಮ್ನದೇವಿ ದರ್ಶನ ಪಡೆದರು. ದೇವಸ್ಥಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅಲ್ಲಿನ ಅರ್ಚಕ ಯಡಿಯೂರಪ್ಪ ಅವರು ಸಿಎಂ ಸೇರಿದಂತೆ ಇನ್ನುಳಿದ ಸಚಿವರಿಗೂ ಲಿಂಬೆ ಹಣ್ಣು ನೀಡಿದರು.ರೇಣುಕಾದೇವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೆ ಅಲ್ಲ ಕೆಲ ಹೊತ್ತು ಕೈ‌ಮುಗಿದುಕೊಂಡು ನಿಂತು ಬೇಡಿಕೊಂಡರು.ಮುಖ್ಯಮಂತ್ರಿಗಳನ್ನು ಮಂತ್ರ ಘೋಷಗಳೊಂದಿಗೆ ದೇವಿ ದರ್ಶನಕ್ಕೆ ದೇಗುಲದ ಅರ್ಚಕರು ಕರೆದುಕೊಂಡು…

Read More

ಸಿಎಂ ಬೆನ್ನಟ್ಟಿದ ಆ ಹದ್ದಿನ‌ ಕಣ್ಣು ಯಾವುದು?

ಯಲ್ಲಮ್ಮದೇವಿ ಸನ್ನಿದಿಗೆ ಸಿಎಂ ಸಿದ್ಧರಾಮಯ್ಯ. ಆಪ್ತರೊಂದಿಗೂ ಬಿಚ್ಚು ಮನಸ್ಸಿನಿಂದ ಮಾತಾಡಲಾಗದ ಸ್ಥಿತಿ. ಸಿಎಂ ಬೆನ್ನಟ್ಟಿದ ಆ ಹದ್ದಿನ ಕಣ್ಣು ಯಾವುದು? ಮೈಸೂರಿನಿಂದ ಬೆಳಗಾವಿವರೆಗೆ ಸಾಥ್. ಹೈಕಮಾಂಡ ಲೆಕ್ಕಹಾಕಿದ ಶಾಸಕರ ಲೆಕ್ಕ. ಬೆಳಗಾವಿ. ಮೂಡಾ ಹಗೆಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಒಂದು ರೀತಿಯು ಮುಜುಗುರ ಸ್ಥಿತಿ. ಕಳೆದ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಭ್ರಷ್ಟಾಚಾರ ದ ಆರೋಪ ಅವರ ಮೇಲೆ ಇರಲಿಲ್ಲ. ಆದರೆ ಈಗ ಮೂಡಾ ಸೈಟ ಹಗರಣ ಅವರನ್ನು ಹೆಗಲೇರಿದೆ. ಇದನ್ನು ಬಿಡಿ. ರಾಜಕಾರಣ ಅಂದ ಮೇಲೆ…

Read More

ಸರ್ಕಾರದ ವಿರುದ್ಧ ಸಿಡಿದ ಕೈ ಶಾಸಕ

ಚಿಕ್ಕೋಡಿ ರೈತರ ಪರ ಯಾವುದೇ ಯೋಜನೆಗಳು ಜಾರಿಗೆ ಬರುತ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ, ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.ಕಾಗವಾಡ ವಿಧಾನಸಭಾ ಕ್ಷೇತ್ರದ ತಾವಂಶಿ ಗ್ರಾಮದಲ್ಲಿಂದು ಮಾತನಾಡಿದ ಅವರು, “ರೈತರು ಒಂದು ವರ್ಷ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟರೆ ನೀವೇನು ತಿಂತೀರಿ?. ನಿಮ್ಮ ಬಳಿ ಹಣ, ಬಂಗಾರ ಬೆಳ್ಳಿ ಸಾಕಷ್ಟಿರಬಹುದು. ಅದನ್ನು ತಿಂದು ಬದುಕೋಗಾಗುತ್ತಾ ಎಂದು ಪ್ರಶ್ನೆ ಮಾಡಿದರು. “ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ….

Read More
error: Content is protected !!