
ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ..
ಸಿಗದ ಸಂಬಳ. ಬರೀ ಬರುಡೆ ಮಾತು ಕೇಳಿ ರೋಸಿ ಹೋದ ಕಾರ್ಯಕರ್ತೆ. ಹಬ್ಬಕ್ಕೆ ದುಡ್ಡಿಲ್ಲದೆ ಬೇಸರ. “ದಾವಣಗೆರೆ: ಕಳೆದ ಮೂರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಸಿಗದ ಕಾರಣ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ಸಂಬಳ ಆಗದ ಹಿನ್ನಲೆ ಸಾಲದ ಹೊರೆಗೆ ಬೇಸತ್ತು ಅಂಗನವಾಡಿ ಸಹಾಯಕಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದಾವಣಗೆರೆಯ ನಗರದ ಡಾಂಗೇ ಪಾರ್ಕ್ ನ ಅಂಗನವಾಡಿ ಕೇಂದ್ರದ ಸಹಾಯಕಿ ಭಾರತಿ ಅತ್ಮಹತ್ಯೆ ಗೆ ಯತ್ನಿಸಿದ ಮಹಿಳೆಯಾಗಿದ್ದಾರೆ . ಮೂರು ತಿಂಗಳಿನಿಂದ…