ಬೆಳಗಾವಿ.
ತಾನೂ ಕೆಟ್ಟಿದ್ದಲ್ಲದೇ ಇತರರನ್ಬೂ ಕೆಡಿಸಿತುಎನ್ನುವಂತೆ ನಾಡ್ರದೋಹಿ ಎಂಇಎಸ್‌ನವರು ಕರಾಳ ದಿನದಲ್ಲಿ ಸಷ್ಣ ಮಕ್ಕಳಿಂದ ನಾಡದ್ರೋಹಿ ಘೋಷಣೆ ಕೂಗಿಸಿ ಅಟ್ಟಹಾಸ ಮರೆದರು.
ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಎಂಇಎಸ್ಗೆ ಅನುಮತಿ ಇಲ್ಲವೇ ಇಲ್ಲ ಎಂದು ಹೂಂಕರಿಸಿದ್ದ ಪೊಲೀಸ್ ಇಲಾಖೆ ನಾಡದ್ರೋಹಿಗಳ ಸಮ್ಮುಖದಲ್ಲಿ ಕೈಕಟ್ಟಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿತು.

ನಾಡದ್ರೋಹಿಗಳು ಪೊಲೀಸ್ ಇಲಾಖೆ ಸಮ್ಮುಖದಲ್ಲಿಯೇ ನಾಡವಿರೋಧಿ ಘೋಷಣೆ ಕೂಗುತ್ತ ಸಾಗಿ ಅಟ್ಟಹಾಸ ಮೆರೆದರು,
ಬೆಳಿಗ್ಗೆ ಸಂಭಾಜಿವೃತ್ತದಿಂದ ಆರಂಭಗೊಂಡ ಕರಾಳ ದಿನದ ಮೆರವಣಿಗೆಯು ಶಹಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಗೋವಾವೇಸ್ ಬಳಿ ಇರುವ ಮರಾಠಾ ಮಂಗಲ ಕಾಯರ್ಾಲಯಕ್ಕೆ ಕೊನೆಗೊಂಡಿತು.
ಈ ಮೆರವಣಿಗೆ ಯುದ್ದಕ್ಕೂ ಪೊಲೀಸರು ಖಡಕ್ ಬಂದೋಬಸ್ತಿ ಮಾಡಿದ್ದರು,
ಉದ್ಯಮಬಾಗ, ಅನಗೋಳ, ಉದ್ಯಮಬಾಗದಿಂದ ಬರುವ ಕನ್ನಡಿಗರಿಗೆ ಈ ಬಂದೋಬಸ್ತಿಯಿಂದ ಸಾಕಷ್ಟು ಕಿರಿಕಿರಿಯಾಯಿತು