
ಹೆತ್ತವರೇ ನಮಗೆ ನಿಜವಾದ ದೇವರು…!
ಗೋಕಾಕ- ನಮ್ಮ ಹೆತ್ತವರೇ ನಮಗೆ ನಿಜವಾದ ದೇವರು. ದೇವರ ಸ್ವರೂಪಿಯಾಗಿರುವ ತಂದೆ- ತಾಯಿಯವರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.ಶುಕ್ರವಾರ ಸಂಜೆ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀದೇವಿ ಮತ್ತು ಭರಮದೇವರ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ ನೆರವೇರಿಸಿ ಮಾತನಾಡಿದರು. ಭಾರತೀಯರಾದ ನಾವುಗಳು ದೈವ ಪರಂಪರೆಗೆ ಶ್ರದ್ಧಾ ಭಕ್ತಿ…