ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ಸಂಘಟನೆ ಅಷ್ಟು ಸರಳವೇ…?
ಮಹಾ ಚುನಾವಣೆ ಆಖಾಡಾದಲ್ಲಿ ಧುಮುಕಿದ ಬೆಳಗಾವಿಗರು.
ಅಭಯ ಪಾಟೀಲ, ಧನಂಜಯ ಜಾಧವ , ಡಾ. ಸೋನಾಲಿ ಸರ್ನೋಬತ್ , ಉಜ್ವಲಾ ಬಡವನ್ನಾಚೆ ಪ್ರಚಾರ.
ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕರು ಸಾಂಗಲಿಯಲ್ಲಿ ಬೀಡು.

ಬೆಳಗಾವಿ.
ಗೊತ್ತು ಗುರಿ ಇಲ್ಲದ ಸ್ಥಳಕ್ಕೆ ಹೋಗಿ ಪಕ್ಷ ಸಂಘಟನೆ ಮಾಡುವುದು ಎಂದರೆ ಅದು ಅಷ್ಟು ಸುಲಭವೇ?
ಊಹುಂ. ಅದು ಸುಲಭದ ಮಾತಲ್ಲ. ಆದರೆ ಬಿಜೆಪಿ ಹೈ ಕಮಾಂಡ ಅಂತಹ ಜವಾಬ್ದಾರಿ ಯನ್ನು ಬೆಳಗಾವಿಯ ಕೆಲವರಿಗೆ ವಹಿಸಿದೆ.

ಗಡಿನಾಡ ಬೆಳಗಾವಿಯಲ್ಲಿ ಹೊರ ರಾಜ್ಯಗಳಿಗೆ ಚುನಾವಣೆ ಪ್ರಚಾರ ಎಂದಾಕ್ಷಣ ಬಿಜೆಪಿ ಹೈ ಕಮಾಂಡ ತಲೆಗೆ ಮೊದಲು ಬರುವ ಹೆಸರು ಅಭಯ ಪಾಟೀಲ.

ಈ ವ್ಯಕ್ತಿ ಮಾತನಾಡುವುದು ಕಂಡರೆ ಒಂಥರಾಒರಟ.! ಹೀಗಾಗಿ ಅಧಿಕಾರಿಗಳು ಇವರನ್ನು ಕಂಡರೆ ಮಾರುದ್ದ ದೂರ ಹೋಗಿ ನಿಲ್ಲುತ್ತಾರೆ.
ಆದರೆ ಅದೇ ಪಕ್ಷ ಸಂಘಟನೆ ವಿಷಯ ಬಂದಾಗ ಇವರನ್ನು ಮೀರಿಸಿದವರು ಇಲ್ಲ ಎಂದು ಹೇಳಬಹುದು.

ಅಭಯ ಪಾಟೀಲರ ಅದೃಷ್ಟ ಎಷ್ಟು ಚನ್ನಾಗಿದೆ ಅಂದ್ರೆ, ಇವರು ಎಲ್ಲೆಲ್ಲಿ ಪ್ರಚಾರಕ್ಕೆ ಹೋಗಿದ್ದಾರೋ ಅಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.
ಗೋವಾ, ಛತ್ತೀಸಗಡ, ವಿಜಯಪುರ ಮಹಾನಗರ ಪಾಲಿಕೆ ಸೇರಿದಂತೆ ಮತ್ತಿತರ ಕಡೆಗೆ ಪ್ರಚಾರಕ್ಕೆ ಹೋಗಿದ್ದರು.
ಈಗ ಸಾಂಗಲಿ ಗೆ ಪ್ರಚಾರಕ್ಕೆ ಹೋಗಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಜವಾಬ್ದಾರಿ ಹೊತ್ತ ನಂತರ ಅಭಯ ಪಾಟೀಲರು ಹಬ್ಬ, ಹರಿದಿನ ಎಲ್ಲವನ್ನೂ ಬದಿಗೊತ್ತಿ ಸಂಘಟನೆ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡುತ್ತಾರೆ.

ಈಗ ಸಾಂಗಲಿಯಲ್ಲಿ ಕೂಡ ಇವರು ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಪ್ರಚಾರದ ಆಖಾಡಕ್ಕೆ ಧುಮುಕಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕರು ಅಷ್ಟೇ ಅಲ್ಲ ಕಾರ್ಯಕರ್ತರ ಪಡೆ ಅಲ್ಲಿ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿದೆ.
ಈ ತಂಡ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಬೆಳೆಸಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದೆ. ಒಂದು ವೇಳೆ ಇಲ್ಲಿ ಏನಾದರೂ ಸಮಸ್ಯೆ ಬಂದರೆ ಅದನ್ನು ಶಾಸಕ ಅಭಯ ಪಾಟೀಲರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಕೆಲಸ ನಡೆಯುತ್ತಿದೆ.

ಇಲ್ಲಿ ಇವರಷ್ಟೇ ಅಲ್ಲ ಡಾ. ಸೋನಾಲಿ ಸರ್ನೋಬತ್ ಅವರು ಕೊಲ್ಲಾಪುರ ಸೌಥ್ ಭಾಗದಲ್ಲಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಕಳೆದ ಹಲವು ದಿನಗಳಿಂದ ಅಲ್ಲಿಯೇ ಬಿಡಾರ ಹೂಡಿ ಮತದಾರರನ್ನು ಬಿಜೆಪಿಯತ್ತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಮುಖಂಡ ಧನಂಜಯ ಜಾಧವ ಅವರು ಸಾತಾರಾ ಭಾಗದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗುತ್ತಿದ್ದಾರೆ.

ಅಲ್ಲಿ ಕೂಡ ಆಯಾ ಪ್ರದೇಶಕ್ಕೆ ಹೋಗಿ ಸಭೆಗಳನ್ನು ಮಾಡುವ ಮೂಲಕ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಒಟ್ಟಾರೆ ಮಹಾರಾಷ್ಟ್ರ ಚುನಾವಣೆಯಲ್ಲಿ ಬೆಳಗಾವಿಗರದ್ದೇ ಹವಾ ಎನ್ನುವುದರಲ್ಲಿ ಎರಡು ಮಾತಿಲ್ಲ.