ಬೆಳಗಾವಿಯಲ್ಲಿದೆ ಪೊಲೀಸರ ಇಬ್ಬಗೆಯ ನ್ಯಾಯ.
ತಹಶೀಲ್ದಾರ ಗೆ ಜಾಮೀನು.ಮುಂದೇನು?
ನೊಂದವರಿಗೆ ಸಾಕ್ಷಿನಾಶದ ಚಿಂತೆ.
ಬರೀ ಪ್ರಭಲ ಸಾಕ್ಷಿ ನೆಪ ಹೇಳುತ್ತ ಕಾಲಹರಣ ಮಾಡಿದ ಪೊಲೀಸರು.
ಬೆಳಗಾವಿ.
ಗಡಿನಾಡ ಅಷ್ಟೇ ಅಲ್ಲ ಇಡೀ ರಾಜ್ಯದ ಜನ ಅಂದುಕೊಂಡಂತೆ ತಹಶೀಲ್ದಾರ ಕಚೇರಿಯ ರುದ್ರೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡಿದ್ದಾರೆ.
ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರುದ್ರೇಶ್ ಯಡವಣ್ಣವರ ವಾಟ್ಸಪ್ ಸಂದೇಶದಲ್ಲಿ ಘಟನೆಗೆ ಯಾರು ಕಾರಣರು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು.

ಆದರೆ ಅದರ ಮೇಲೆಯೇ ಆರೋಪ ಹೊತ್ತವರನ್ನು ಹೆಡಮುರಿ ಕಟ್ಟುವ ಕೆಲಸವನ್ನು ಪೊಲೀಸರು ಮಾಡಬೇಕಿತ್ತು. ಆದರೆ ಅವರು ಒತ್ತಡಕ್ಕೆ ಒಳಗಾಗಿ ಆರೋಪ ಹೊತ್ತವರನ್ನು ಪರೋಕ್ಷವಾಗಿ ರಕ್ಷಣೆ ಮಾಡುವ ಕೆಲಸ ಮಾಡಿದರು.
ಅಂದರೆ ಆರೋಪ ಹೊತ್ತವರು ನ್ಯಾಯಾಲಯದಲ್ಲಿ ಜಾಮೀನು ಸಿಗುವ ತನಕ ಪ್ರಭಲ ಸಾಕ್ಷಿ ಸಂಗ್ರಹ ನೆಪಹೇಳುತ್ತ ಕಾಲಹರಣ ಮಾಡಿದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಸ್ಥಳದಲ್ಲೇ ಇದ್ದು ಕುಟುಂಬಕ್ಕೆ ಸಾಂತ್ವನ ಹೇಳಬೇಕಿದ್ದ ತಹಶೀಲ್ದಾರ ನಾಗರಾಳರು ಮೊದಲು ವಾಟ್ಸಪ್ ನಲ್ಲಿದ್ದ ರುದ್ರೇಶ ಮೆಸೆಜ್ ನ್ನು ಡಿಲಿಟ್ ಮಾಡಿ ಸಾಕ್ಷಿನಾಶ ಮಾಡಿದ್ದರು. ಈಗ ಜಾಮೀನಿನ ಮೇಲೆ ಹೊರಬಂದು ಮತ್ತದೇ ಕಚೇರಿಯಲ್ಲಿ ಕಾರ್ಯನುರ್ವಹಿಸುವ ತಹಶೀಲ್ದಾರರು ಸಾಕ್ಷಿ ನಾಶ ಮತ್ತು ಅವರ ಮೇಲೆ ಪ್ರಭಾವ ಬೀರಲ್ಲ ಅನ್ನೊದಕ್ಕೆ ಏನು ಗ್ಯಾರಂಟಿ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ.

ಸಣ್ಷ ಪುಟ್ಟಕ್ಕೂ ಸಚಿವರು, ಪ್ರಭಾವಿಗಳು ಹೇಳಿದಾಕ್ಷಣ ವರ್ಗಾವಣೆ ಮಾಡುವ ಜಿಲ್ಲಾಧಿಕಾರಿಗಳು ಜಾಮೀನು ಮೇಲೆ ಹೊರಬಂದ ತಹಶೀಲ್ದಾರರ ಮೇಲೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಅಥವಾ ಈಗ ಇದ್ದ ಸ್ಥಳದಲ್ಲಿಯೇ ರೆಡ್ ಕಾರ್ಪೆಟ್ ಹಾಕಿ ಇನ್ನಷ್ಟು ಸಾಕ್ಷಿ ನಾಶಕ್ಕೆ ಅನುಕೂಲ ಮಾಡಿಕೊಡುತ್ತಾರೋ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ.
ಅದೇನೆ ಇರಲಿ, ಬೆಳಗಾವಿ ಪೊಲೀಸರು ಶ್ರೀಮಂತರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ ಇದೆ ಎನ್ನುವುದನ್ನು ಈ ಪ್ರಕರಣದಲ್ಲಿ ತೋರಿಸಿಕೊಟ್ಟಿದ್ದಾರೆ.