ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ,
ವೃದ್ಧೆಯ ಬ್ಲೌಸಹರಿದ ಕಿರಾತಕರು.
ರಕ್ಷಣೆ ಕೊಡುವಂತೆ ತಾಯಿ, ಮಗಳ ಮನವಿ
ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ಅಮಾನವೀಯ, ಹೇಯ ಘಟನೆಯೊಂದು ನಡೆದಿದೆ. ಒಂದು ರೀತಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಇದಾಗಿದೆ.
ಬೆಳಗಾವಿಯ ವಡ್ಡರವಾಡಿಯಲ್ಲಿ ದುರುಳರು ಮಹಿಳೆಯೊಬ್ಬಳ ಸೀರೆ ಎಳೆದು ಅಟ್ಟಹಾಸ ಮೆರೆದಿದ್ದಾರೆ.

ಮಗಳು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಳೆಂದು ಆರೋಪಿಸಿ ಕೆಲವರು ಮನೆಗೆ ನುಗ್ಗಿ ತಾಯಿ, ಮಗಳ ಮೇಲೆ ಹಲ್ಲೆ ಮಾಡಿದರು.
ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ಮಾಡಲಾಗಿದೆ.

ಮನೆಗೆ ನುಗ್ಗಿ ಹಲ್ಲೆ ಮಾಡಿ ಬಟ್ಟೆ ಹರಿದು ಹಾಕುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ
ತಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಬಿಎನ್‌ಎಸ್ ಕಾಯ್ದೆಯಡಿ 115(2), 3(5), 331, 352, 74 ಸೆಕ್ಷನ್ ನಲ್ಲಿ ಪ್ರಕರಣ ದಾಖಲಾಗಿದೆ.