ಬೆಳಗಾವಿಗರು ಕಾಲಿಟ್ಟಲೆಲ್ಲ ಗೆಲುವು’
ಗಡಿ`ಮಹಾ’ ಕ್ಷೇತ್ರದಲ್ಲಿ ಅರಳಿದ ಕಮಲ
ಬೆಳಗಾವಿ.
ಇಲ್ಲಿ ಉಳಿದ ವಿಷಯ ಏನೇ ಇರಲಿ. ಪಕ್ಷ ನಿಷ್ಠೆ ಮತ್ತು ಸಂಘಟನೆ ವಿಷಯದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಇಟ್ಟ ಹೆಜ್ಜೆ ಹಿಂದೆ ಇಟ್ಟ ಉದಾಹರಣೆ ಇಲ್ಲ.
ಅಷ್ಟೇ ಅಲ ಪಕ್ಷದ ವಿಷಯದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡ ಉದಾಹರಣೆ ಇಲ್ಲ.ಮತ್ತೊಂದು ಸಂಗತಿ ಎಂದರೆ, ಪಕ್ಷದ ವರಿಷ್ಠರು ಕೊಟ್ಡ ಜವಾಬ್ದಾರಿಯನ್ನು ಸಮರ್ಥವಾಗಿ ಇಲ್ಲಿಯವರೆಗೆ ನಿಭಾಯಿಸಿಕೊಂಡು ಬಂದ ಹೆಗ್ಗಳಿಕೆ ಅಭಯ ಪಾಟೀಲರಿಗಿದೆ.

ಹೈಕಮಾಂಡ ಇವರ ಸಂಘಟನೆಯನ್ನು ಗಮನದಲ್ಲಿರಿಸಿಕೊಂಡು ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿನ ಚುನಾವಣೆಯ ಜವಾಬ್ದಾರಿ ಕೊಟ್ಟಿದ್ದರು.ಅಲ್ಲಿ ಗೆಲುವು ಸಹ ಆಗಿತ್ತು.
ಈಗ ಅಂತಹ ಅಭಯ ಪಾಟೀಲರಿಗೆ ಗಡಿಭಾಗ ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಪಲೂಸ್ ಖಡೆಗಾವಿ, ಮೀರಜ, ಸಾಂಗಲಿ, ಜತ್ತ ಮತ್ತು ಶಿರಾಳ ಕ್ಷೇತ್ರಗಳ ಉಸ್ತುವಾರಿ ಕೊಡಲಾಗಿತ್ತು.
ಇಲ್ಲಿ ಕಳೆದ ಮೂರು ತಿಂಗಳಿಂದ ಕ್ಷೇತ್ರದಲ್ಲಿ ಸಂಚರಿಸಿದ ಅಭಯ ಪಾಟೀಲರು ಬೂತ್ ಮಟ್ಟದಿಂದ ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟರು. ಅಷ್ಟೇ ಅಲ್ಲ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ಆಯ್ದ ನಗರಸೇವಕರನ್ಬು ಕರೆಯಿಸಿಕೊಂಡರು. ಅಲ್ಲಿ ಒಬ್ಬ ನಗರಸೇವಕರಿಗೆ ಹತ್ತು ಬೂತ್ ನ ಜವಾಬ್ದಾರಿ ವಹಿಸಿದ್ದರು. ಪೇಜ್ ಪ್ರಮುಖರೊಂದಿಗೆ ಸಂಪರ್ಕ ಸಾಧಿಸುವುದು ಸೇರಿದಂತೆ ಬೆಳಿಗ್ಗೆ ಸ್ವಚ್ಚತಾ ಅಭಿಯಾನವನ್ನು ಸಹ ಮಾಡಿದರು.ಇದರಿಂದ ಸಹಜವಾಗಿ ಬಿಜೆಪಿ ಬಗ್ಗೆ ಜನರಲ್ಲಿ ಹೆಚ್ಚಿನ ವಿಶ್ವಾಸವೂ ಬಂದಿತು.
ಸಂಘಟನೆಗೆ ಎತ್ತಿದ ಕೈ
.ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಇದ್ದಂತೆ ಇಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಸಂಘಟನೆ ಎನ್ನುವುದು ಇರಲಿಲ್ಲ. ಆದರೆ ಎಲ್ಲರೂ ವೈಯಕ್ತಿಕವಾಗಿ ಬಿಲಿಷ್ಟರಾಗಿದ್ದರು,
ಅಂತಹ ಕ್ಷೇತ್ರಗಳಲ್ಲಿ ಕಳೆದ ಮೂರು ತಿಂಗಳಿಂದ ಸಂಚರಿಸಿದ ಅಭಯ ಪಾಟೀಲರು ಬೂತ್
ಮಟ್ಟದಿಂದ ಸಂಘಟನೆ ಕೆಲಸ ನಡೆಸಿದರು, ಅಷ್ಟೇ ಅಲ್ಲ ನಾಯಕರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಕೆಲಸವನ್ನು ಮಾಡಿದರು, ಕೊನೆಗೆ ಅಭ್ಯರ್ಥಿ ಘೋಷಣೆಯಾದ ನಂತರ ಮತ್ತೇ ಹುಟ್ಟಿಕೊಂಡ ವೈಮನಸ್ಸನ್ನು ದೂರ ಮಾಡುವ ಸರ್ಕಸ್ ಕೂಡ ಮಾಡಿದರು,
ಇದೆಲ್ಲ ಮುಗಿದ ನಂತರ ಮತದಾರರನ್ನು ಓಲೈಸಿಕೊಳ್ಳುವ ಕಸರತ್ತು ನಡೆಸಿದರು.
ಬೆಳಗಾವಿಯಲ್ಲಿ ಪ್ರತಿ ಭಾನುವಾರ ನಡೆಸಿದಂತೆ ಸ್ವಚ್ಚತಾ ಅಭಿಯಾನವನ್ನು ಅಲ್ಲಿ ನಿತ್ಯ
ಬೆಳಿಗ್ಗೆ ಕೈಗೆತ್ತಿಕೊಂಡರು, ಈ ಕೆಲಸಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಆಯ್ದ
ನಗರಸೇವಕರನ್ನು ಸಾಂಗಲಿಗೆ ಪ್ರಚಾರಕ್ಕೆ ಕಳಿಸಿದರು, ಅಲ್ಲಿ ಕೂಡ ಬೆಳ್ಳಂ ಬೆಳಿಗ್ಗೆ ಸ್ವಚ್ಚತಾ ಅಭಿಯಾನದ ಜೊತೆಗೆ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಬೆಳೆಸುವ ಕೆಲಸ ಮಾಡಿದರು,
ಇದೆಲ್ಲದರ ಪರಿಣಾಮ 5 ಕ್ಷೇತ್ರಗಳಲ್ಲಿ ಫಲೂಸ್ ಖಡೇಗಾವನ್ನು ಬಿಟ್ಟು ಉಳಿದೆಡೆ ಬಿಜೆಪಿ
ಗೆಲ್ಲಲು ಸಹಕಾರಿಯಾಯಿತು,
ಇನ್ನೂ ಒಂದು ಸಂಗತಿ ಎಂದರೆ, ಇದೇ ಅಭಯ ಪಾಟೀಲರ ಸಂಘಟನೆಯನ್ನು ಗಮನಿಸಿದ ಹೈಕಮಾಂಡ ಇವರನ್ನು ಹಿಂದೆ ಛತ್ತೀಸಗಡ, ಗೋವಾ ಮತ್ತು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿ ವಹಿಸಿತ್ತು, ಅಲ್ಲಿ ಕೂಡ ಗೆಲವುದು ಸಿಕ್ಕಿತ್ತು ಎನ್ನುವುದು ಉಲ್ಲೇಖನೀಯ.

ಸೊಲ್ಲಾಪುರದಲ್ಲಿ ಕಡಾಡಿ ತಂತ್ರ..!
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಉಸ್ತುವಾರಿ ಕೊಟ್ಟಿದ್ದ ಸೊಲ್ಲಾಪುರ ಮತ್ತು
ಧಾರಾಶಿವ ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಗೆದ್ದಿದೆ,
ಕಳೆದ ಒಂದುವರೆ ತಿಂಗಳಿಂದ ಕಡಾಡಿ ಅವರು ಅಲ್ಲಿಯೇ ಬೀಡು ಬಿಟ್ಟು ರಣತಂತ್ರ ಹೆಣೆದಿದ್ದರು,
ಈ ಹಿನ್ನೆಲೆಯಲ್ಲಿ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಿದೆ,

ಸೊಲ್ಲಾಪುರದ ಉತ್ತರ, ದಕ್ಷಿಣ ಮತ್ತು ಮಧ್ಯ ಕ್ಷೇತ್ರ, ಅಕ್ಕಲಕೋಟ, ಪಂಡರಪೂರ ಮತ್ತು ತುಳಜಾಪುರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ,
ಇನ್ನು ಕೊಲ್ಲಾಪುರ ದಕ್ಷಿಣ ಕ್ಷೇತ್ರದಲ್ಲಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಮತ್ತು
ಡಾ, ಸೋನಾಲಿ ಸರ್ನೋಬತ್ ಅವರಿಗೆ ಜವಾಬ್ದಾರಿಯನ್ನು ಕೊಡಲಾಗಿತ್ತು, ಅಲ್ಲಿ ಕೂಡ ಬಿಜೆಪಿ ಗೆದ್ದಿದೆ.