Headlines

ಯುಪಿ ಹುಡುಗ – ನೇಣಿಗೆ ಶರಣಾಗಿದ್ದು ಏಕೆ?

ಯುಪಿ ಹುಡುಗ – ನೇಣಿಗೆ ಶರಣಾಗಿದ್ದು ಏಕೆ?
ಬೆಳಗಾವಿ.
ಪೊಲೀಸ್ ಠಾಣೆಯಿಂದಲೇ ಓಡಿಹೋದ ಉತ್ತರ ಪ್ರದೇಶ ಮೂಲದ ಪ್ರೇಮಿಯೊಬ್ಬ ನೇಣಿಗೆ ಶರಣಾದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಈಗ ಬೆಳಗಾವಿ ಪೊಲೀಸ್ ಇಲಾಖೆಯಲ್ಲಿಯೇ ಬಾರೀ ಸಂಚಲನ ಮೂಡಿಸಿದ್ದು ವಿಭಿನ್ನ ಚರ್ಚೆಗ ಎಡೆ ಮಾಡಿಕೊಡುತ್ತಿದೆ.
ಈ ಆತ್ಮಹತ್ಯೆಗೆ ಲವ್ ಸ್ಟೋರಿ ಕಹಾನಿ ಇದೆಯಾ ಅಥವಾ ಮತ್ತೇನಾದರೂ ಇದೆಯಾ ಎನ್ನುವ ಚಚರ್ೆ ಜೋರಾಗಿ ನಡೆದಿದೆ.
ಒಂದು ಮೂಲದ ಪ್ರಕಾರ ಪ್ರೀತಿ ಜಗಳದಲ್ಲಿ ಬುದ್ದಿ ಮಾತು ಹೇಳಲು ಹೋಗಿದ್ದ ಪೊಲೀಸರ ಮಾತಿಗೆ, ಏಟಿಗೆ ಹೆದರಿ ಉತ್ತರಪ್ರದೇಶದ ರಂಜಿತ್ ಖಾನಾಪುರದಲ್ಲಿ ನೇಣಿಗೆ ಕೊರಳೊಡಿದ್ದ ಎನ್ನುವ ಮಾತುಗಳು ಕೇಳಿ ಬರುತ್ತಿವೆ,
ಆದರೆ ಹುಡುಗಿ ಕೊಟ್ಟ ದೂರಿನಲ್ಲಿ ಬೇರೆನೇ ಇದೆ. ಇಲ್ಲಿ ಯುವಕ ರಂಜಿತ್ ಹುಡುಗಿಗೆ ಕಾಟ ಕೊಡುತ್ತಿದ್ದನು, ಅಷ್ಟೇ ಅಲ್ಲ ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿ ಬೆದರಿಕೆ ಹಾಕುತ್ತಿದ್ದನು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಯುವತಿ ಕೊಟ್ಟ ದೂರು ದಾಖಲು ಮಾಡಿಕೊಂಡ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಹೆದರಿ ಓಡಿ ಹೋಗಿದ್ದನು ಎಂದು ಹೇಳಲಾಗಿದೆ.red

ಏನಿದು ಪ್ರಕರಣ?
ಕಳೆದ 8 ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾದ ಈ ಜೋಡಿಗಳನ್ನು ಅಗಲಿಸುವ ವಿಷಯದಲ್ಲಿ ಪೊಲೀಸರ ಮಾತಿನ ಏಟಿಗೆ ಹೆದರಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಎನ್ನುವುದು ಒಟ್ಟಾರೆ ಪ್ರಕರಣದ ಸಾರಾಂಶ.
ಉತ್ತರ ಪ್ರದೇಶ ಮೂಲದ ರಂಜಿತ್ ಎನ್ನುವ ಯುವಕ ಮತ್ತು ಭಾಗ್ಯನಗರದ ಯುವತಿಯೊಬ್ಬಳ ನಡುವೆ ಕಳೆದ ಸುಮಾರು 8 ವರ್ಷದಿಂದ ಪ್ರೀತಿ ಇತ್ತಂತೆ.
ಇಲ್ಲಿ ಪ್ರಿಯಕರ ಖಾನಾಪುರದಲ್ಲಿ ಸಣ್ಣದೊಂದು ಅಂಗಡಿ ಇಟ್ಟುಕೊಂಡಿದ್ದನು. ಅಷ್ಟೇ ಅಲ್ಲ ಅಂಗಡಿಯಲ್ಲಿನ ವ್ಯವಹಾರದ ಬಹುತೇಕ ಹಣ ಯುವತಿಯ ಪೋನ್ಗೆ ವಗರ್ಾವಣೆ ಆಗುತ್ತಿತ್ತು ಎಂದು ಹೇಳಲಾಗಿದೆ.
ಆದರೆ ಇವರಿಬ್ಬರ ಪ್ರೀತಿಗೆ ಯುವತಿಯ ಮನೆಯವರ ಸಮ್ಮತಿ ಇರಲಿಲ್ಲ. ಕೊನೆಗೆ ಕಳೆದ ದಿನ 20 ರಂದು ತನ್ನ ಪ್ರಿಯಕರ ರಂಜಿತ್ ಕಾಲೇಜಿನ ಬಳಿ ಬಂದು ನನ್ನ ವಾಹನ ನಿಲ್ಲಿಸಿ ಬೆದರಿಕೆ ಹಾಕಿದ ಎನ್ನುವುದು ಸೇರಿಸಿ ಇನ್ನಷ್ಟು ದೂರನ್ನು ಉಲ್ಲೇಖಿಸಿ ಯುವತಿ ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು,
ಇತ್ತ ಯುವತಿಯ ತಂದೆ ಠಾಣೆಯಲ್ಲಿದ್ದ ಅಧಿಕಾರಿಗಳ ಬಳಿ ಹೋಗಿ ನನ್ನ ಮಗಳ ಸುತ್ತ ಆ ಹುಡುಗ ಬಾರದಂತೆ ನೋಡಿಕೊಳ್ಳಿ ಎಂದು ಕೇಳಿಕೊಂಡಿದ್ದ ಎನ್ನುವ ಸಂಗತಿ ಕೂಡ ಬೆಳಕಿಗೆ ಬಂದಿದೆ
ಇದನ್ನು ಗಂಭೀರವಾಗಿ ತೆಗೆದುಕೊಂಡ ಟಿಳಕವಾಡಿ ಸಿಪಿಐ ಪರಶುರಾಮ ಪೂಜೇರಿ ಅವರು ಯುವಕನಿಗೆ ದೂರವಾಣಿ ಕರೆ ಮಾಡಿ ಠಾಣೆಗೆ ಬರಲು ಸೂಚಿಸಿದರು. ಆದರೆ ತನ್ನದೇನು ತಪ್ಪಿಲ್ಲ ಎನ್ನುವ ಮನಸ್ಸಿನಲ್ಲಿದ್ದುಕೊಂಡು ಟಿಳಕವಾಡಿ ಠಾಣೆಗೆ ಬಂದರೆ, ಪೊಲೀಸರು ಆತನ ವಿರುದ್ಧ ಗರಂ ಆದರು ಎನ್ನಲಾಗಿದೆ,
ಅಷ್ಟೇ ಅಲ್ಲ ಇನ್ನು ಮುಂದೆ ಅವಳನ್ನು ಮಾತನಾಡಿಸಬೇಡಿ ಎಂದು ಹೇಳಿದರೂ ಅದಕ್ಕೆ ಸಮ್ಮತಿ ಕೂಡ ಯುವಕ ರಂಜಿತ್ ಹೇಳಿದ್ದನಂತೆ. ಆದರೆ ಅಷ್ಟರಲ್ಲಾಗಲೇ ಪೊಲೀಸರು ಪ್ರಕರಣ ದಾಖಲಿಸಿ ಅವನನ್ನು ಜೈಲಿಗಟ್ಟಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಗೊತ್ತಾಗಿದೆ.

ಇನ್ನೇನು ಆತನನ್ನು ಪೊಲೀಸರು ತಮ್ಮ ವಾಹನದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ರಂಜಿತ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು ಎನ್ನಲಾಗಿದೆ.

ಹುಡುಕಾಟ ಶುರು…!
ರಂಜಿತ್ ಠಾಣೆಯಿಂದ ತಪ್ಪಿಸಿಕೊಂಡು ಓಡಿ ಹೋದ ನಂತರ ಪೊಲೀಸರು ಆತನನ್ನು ಹಿಡಿದುಕೊಳ್ಳಲು ಟಿಳಕವಾಡಿ ಎರಡನೇ ರೈಲ್ವೆ ಗೇಟ್, ರೈಲು ನಿಲ್ದಾಣ ಮತ್ತು ಖಾನಾಪುರ ಕಡೆಗೆ ಹೀಗೆ ಹೋದರೂ ಯಾವುದೇ ಪ್ರಯೋಜನ ಆಗಲಿಲ್ಲ. ಎನ್ನಲಾಗಿದೆ.

ಕೊನೆಗೆ ಪೊಲೀಸರು ಪ್ರಿಯತಮೆಯ ಮೊಬೈಲ್ನಿಂದ ಯುವಕರನಿಗೆ ಕರೆ ಮಾಡಿಸಿದರು, ಅಷ್ಟೇ ಅಲ್ಲ ಸ್ಪೀಕರ್ ಇಟ್ಟು ಮಾತನಾಡಿಸಿದ ಸಂದರ್ಭದಲ್ಲಿ ರಂಜಿತ್, “ನಿನ್ನ ಮತ್ತು ನನ್ನ ಪ್ರೀತಿಯು ಎಂಟು ವರ್ಷಗಳಿಂದ ಪ್ರಾರಂಭವಿತ್ತು, ನಾನು ನಿನಗೆ ಬೇಡವಾಗಿದ್ದರೆ ನೀನೇ ನನಗೆ ಫೋನ್ ಮಾಡಿ ಹೇಳಿದ್ದರೆ ನಿನ್ನ ಗೋಜಿಗೆ ಬರುತ್ತಿರಲಿಲ್ಲ. ಆದರೆ ವಿನಾಕಾರಣ ನನ್ನನ್ನು ಪೊಲೀಸ್ ಠಾಣೆಯ ಮೆಟ್ಟಲು ಹತ್ತಿಸಿ ಪೊಲೀಸರಿಂದ ಬಡಿಸಿರುತ್ತಿ, ತಂದೆ ತಾಯಿ ಇಲ್ಲದ ನಾನು ನಿನ್ನನ್ನೇ ನಂಬಿದ್ದೆ. ನಾನು ಅಮಾಯಕ. ಏನು ಮಾಡಲಿ. ಈಗ ನನ್ನ ಮಾನ ಮಯರ್ಾದೆಯೂ ಹೋಯಿತು, ನೀನೂ ಕೂಡ ಕೈ ಬಿಟ್ಟೆ. ಆದ್ದರಿಂದ ನಾನು ಸಾಯುತ್ತೇನೆ” ಅಂತ ಹೇಳಿ ಆತ್ಮಹತ್ಯೆ ಮಾಡಿಕೊಂಡನು ಎಂದು ಮೂಲಗಳು ತಿಳಿಸಿವೆ.

ಆದರೆ ಟಿಳಕವಾಡಿ ಪೊಲೀಸರು ಮಾತ್ರ ಈ ಆರೋಪವನ್ನು ಸಾರಾಸಾಗಟವಾಗಿ ಅಲ್ಲಗಳೆದಿದ್ದಾರೆ, ಕಳೆದ ದಿ, 20 ರಂದು ದೂರು ದಾಖಲಾಗಿದ್ದು ನಿಜ. ಅದರಲ್ಲಿ ಬಂಧನ ಮಾಡುವ ಸಂಗತಿಯನ್ನು ಆತನಿಗೆ ಹೇಳಿದ್ದೇವು, ಠಾಣೆಗೆ ಕರೆಯಿಸಿದ್ದ ಸಂದರ್ಭದಲ್ಲಿ ಆತನನ್ನು ನಾವೇ ಅವನ ಅಣ್ಣನೊಂದಿಗೆ ಕಳಿಸಿ ಕೊಟ್ಟಿದ್ದೇವೆ ಎಂದು ಪೊಲೀಸರು ಹೇಳುತ್ತಾರೆ.
ಆದರೆ ಆತ ಆತ್ಮಹತ್ಯೆ ಏಕೆ ಮಾಡಿಕೊಂಡ ಎನ್ನುವುದು ನಮಗೆ ಗೊತ್ತಾಗಿಲ್ಲ. ಈ ಬಗ್ಗೆ ವಿಚಾರಣೆ ಮಾಡಿದಾಗ ಆತ ಮಾದಕ ವ್ಯಸನಕ್ಕೆ ಮಾರು ಹೋಗಿದ್ದ ಎಂದು ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!