Headlines

ಡಿ. 26, 27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ: ಸಚಿವ ಸತೀಶ್‌ ಜಾರಕಿಹೊಳಿ

ಡಿ. 26, 27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿ. 26, 27ರಂದು ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 150 ಜನ ಸಂಸದರು ಪಾಲ್ಗೊಳ್ಳಲಿದ್ದಾರೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ 1924ರಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸ್…

Read More

ಸಮಗ್ರ ತನಿಖೆ ನಡೆಸಲು ಮನವಿ

ಬೆಳಗಾವಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಳಸಿದ ಅಸಂವಿಧಾನಿಕ ಪದದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಸಭಾಪತಿಯವರಿಗೆ ಮನವಿ ಮಾಡಿದ್ದಾರೆ. ಆ ಪದ ಮಹಿಳಾ ಕುಲಕ್ಕೆ ಅವಮಾನವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಭಾಪತಿ ಹೊರಟ್ಟಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Read More

ಮಾನಸಿಕವಾಗಿ ಕುಗ್ಗಿಸುವ ಕೆಲಸ..!

“ನನ್ನನ್ನು ಒಟ್ಟು 4 ಜಿಲ್ಲೆ, 11 ಗಂಟೆಗೂ ಹೆಚ್ಚಿನ ಕಾಲ ಅಲೆದಾಡಿಸಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಪೊಲೀಸ್ ಪವರ್ ಮೂಲಕ ‌ಮಾಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ಬಿ.ವೈ.ವಿಜಯೇಂದ್ರ, ಆರ್.ಆಶೋಕ್, ನಾರಾಯಣಸ್ವಾಮಿ ಎಲ್ಲರೂ ಸಂಕಷ್ಟದ ಸಮಯದಲ್ಲಿ ನನಗೆ ಅತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು” ಎಂದರು. ಹೈಕೋರ್ಟ್ ಆದೇಶದ ಬಗ್ಗೆ ಸತ್ಯಮೇವ ಜಯತೇ ಎಂದು ಒಂದೇ ಮಾತು ಹೇಳುವೆ. ಸತ್ಯಕ್ಕೆ ಜಯ ಸಿಗುತ್ತೆ ಎಂದು ಹೇಳಿದ್ದೆ….

Read More

ಓಲೈಸಲು ಹೋಗಿ ಯಡವಟ್ಡು ಮಾಡಿಕೊಂಡರಾ ಪೊಲೀಸರು..!

ಬೆಳಗಾವಿ.ಚಳಿಗಾಲ ಅಧಿವೇಶನ‌ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಚಿವರನ್ನು ಓಲೈಸಲು ಹೋಗಿ ಬೆಳಗಾವಿ ಪೊಲೀಸರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರಾ?ಸಹಜವಾಗಿ ಈಗ ಅಂತಹ ಮಾತುಗಳು ಕೇಳಿ ಬರುತ್ತಿವೆ.ಈಗ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಜೊತೆ ಪೊಲೀಸರು ನಡೆದುಕೊಂಡ ರೀತಿ ಅಕ್ಷಮ್ಯ ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ.ಪೊಲೀಸರು ರವಿ ವಿರುದ್ಧ ಉಲ್ಲೇಖ ಮಾಡಿದ ಕಲಂನ್ನು ಪರಿಗಣಿಸಿದರೆ ಕೇವಲ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯುವಂತಹುದ್ದು.ಆದರೆ ಇಲ್ಲಿ ಸಭಾಪತಿಯವರ ಅನುಮತಿಯನ್ನೂ ಕೇಳದೆ ಯಾವುದೇ ನೋಟೀಸನ್ಬೂ ನೀಡದೇ…

Read More

ಸರ್ಕಾರಕ್ಕೆ ಕಪಾಳಮೋಕ್ಷ..

“ಹೈಕೋರ್ಟ್ ಮಹತ್ವದ ತೀರ್ಪುನ್ನು ಸ್ವಾಗತಿಸುತ್ತೇವೆ. *ನ್ಯಾಯಾಲಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.ಸಿ.ಟಿ.ರವಿ ಅವರನ್ನು ನೋಟಿಸ್ ನೀಡದೆ ಬಂಧನ ಮಾಡಿರುವುದಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಇನ್ನು ಬೆಳಗಾವಿಯಿಂದ ರವಿ ಅವರನ್ನು ಬಿಟ್ಟಿದ್ದೇ ಹೆಚ್ಚು ಎಂದು ಡಿಸಿಎಂ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ಸಚಿವ ಈ ರೀತಿ ಮಾಡುತ್ತಿರುವುದು ದುರಾಡಳಿತ. ನಾವು ನಮ್ಮ ಕಾರ್ಯಕರ್ತರು ಬಳೆ ತೊಟ್ಟು ಕೂತಿಲ್ಲ. ಈ ರೀತಿ ಗೂಂಡಾ ವರ್ತನೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

Read More

DK ಮತ್ತು ಸಿದ್ದು ನ್ಯಾಯಾಧೀಶರಾ?

“ಸಿ.ಟಿ.ರವಿ ಬೇಡಿಕೊಂಡ್ರೂ ಕೂಡ ಅವರನ್ನು ಪೊಲೀಸರು ಬಿಡಲಿಲ್ಲ. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಕೂಗಿದವರ ಬಂಧನ ಆಗಿಲ್ಲ. ಅವರನ್ನು ಬಿಟ್ಬುಟ್ರು. ದೇಶ ಭಕ್ತ ಸಿ.ಟಿ.ರವಿ ಅವರನ್ನು ಅರೆಸ್ಟ್ ಮಾಡಿದರು” ಎಂದು ವಿಪಕ್ಷ ನಾಯಕ ಆರ್.ಆಶೋಕ್ ಸರ್ಕಾರದ ವಿರುದ್ಧ ಗರಂ ಆದರು.ಇಲ್ಲಿ ನಡೆದಿರುವ ಘಟನೆ ಬಗ್ಗೆ ಶಿಕ್ಷೆ ಕೊಡುವವರು ಸಿಎಂ ಸಿದ್ದರಾಮಯ್ಯ ಅವರಾ? ಡಿ.ಕೆ.ಶಿವಕುಮಾರ್ ಅವರಾ? ಅವರು ನ್ಯಾಯಾಧೀಶರಾ ಎಂದು ಪ್ರಶ್ನೆ ಮಾಡಿದರು. ಮಾಪಣೆ ಕೇಳ್ಬೇಕು ಎನ್ನುವ ಇವರಿಗೆ ನಾವೇಕೆ ಕ್ಷಮಾಪಣೆ ಕೇಳ್ಬೇಕು? ತಪ್ಪು ಎಂದು ಸಾಬೀತಾಗಬೇಕು, ಕಾನೂನು ವ್ಯವಸ್ಥೆಯಲ್ಲೂ…

Read More

ಸಿ.ಟಿ.ರವಿ ತಕ್ಷಣ ಬಿಡುಗಡೆಗೆ ಕೋರ್ಟ್ ಆದೇಶ

“ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪದ ಹಿನ್ನರಲೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಇಂದು ಆದೇಶಿಸಿದೆ. ಜಾಮೀನು ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ ಈ ಆದೇಶ ಮಾಡಿತು. . ಸಿ.ಟಿ.ರವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಬಂಧನದ ಕಾರಣದ ಕುರಿತು ಕಕ್ಷಿದಾರರಿಗೆ,…

Read More

ಸಿ.ಟಿ.ರವಿ ಹೆಬ್ಬಾಳಕರಗೆ ಅಂದಿದ್ದಾರೂ ಏನು?

ಬೆಳಗಾವಿ.. ಬೆಳಗಾವಿ ಚಳಿಗಾಲ ಅಧಿವೇಶನ ಕೊನೆ ಕ್ಷಣದಲ್ಲಿ ವಾತಾವರಣವನ್ನು ಕಾವೇರಿಸುವಂತೆ ಮಾಡಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಡಿದರೆನ್ನಲಾದ ಮಾತು ಈಗ ರಾಜಕೀಯ ಸಂಘರ್ಷಕ್ಜೆವಕಾರಣವಾಗಿದೆ. ಇಲ್ಲಿ ಸಿ.ಟಿ ರವಿ ಅವರು ನಾನು ಆ ರೀತಿಯ ಕೆಟ್ಟ ಶಬ್ದ ಪ್ರಯೋಗ ಮಾಡಿಲ್ಲ ಎಂದು ಹತ್ತು ಹಲವು ಬಾರಿ ಹೇಳಿದ್ದಾರೆ. ಫಾಸ್ಟಟೇಟ್ ಎಂದು ಹೇಳಿದ್ದೇನೆ ಹೊರತು ಪ್ರಾಸ್ಟಿ…ಟ್ ಎಂದು ಹೇಳಿಲ್ಲ ಎಂದು ಸಿ.ಟಿ.ರವಿ ಪದೇ ಪದೇ ಸ್ಪಷ್ಟಪಡಿಸಿದರೂ ಕೂಡ ಸಚಿವೆ ಹೆಬ್ಬಾಳಕರ…

Read More

ರಾಷ್ಟ್ರದ ಅಭಿವೃದ್ಧಿಗಾಗಿ ಬಲಿಷ್ಠ ಯೋಜನೆ ರೂಪಿಸುವ ಅಗತ್ಯ- ಸತೀಶ್

ಬೆಳಗಾವಿ : ಜಾಗತಿಕ ಮಟ್ಟದಲ್ಲಿ ಬೇಡಿಕೆಗೆ ತಕ್ಕಂತೆ ಸುಸ್ಥಿರ, ಬಾಳಿಕೆ ಬರುವ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ವಸ್ತುಗಳನ್ನು ಉತ್ಪನ್ನ ಮಾಡುವ ಅಗತ್ಯವಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. ಇಲ್ಲಿನ ಖಾಸಗಿ ಹೊಟೇಲ್‌ ನಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ಮತ್ತು ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಭಾರತ) ಲೋಕಲ್ ಸೆಂಟರ್ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಸ್ಟೇನ್‌ಲೆಸ್ ಸ್ಟೀಲ್ ಅಭಿವೃದ್ಧಿ ಸಂಘ (ISSDA) ಆಯೋಜಿಸಿದ ಒಂದು ದಿನದ ಅಂತಾರಾಷ್ಟ್ರೀಯ ಜ್ಞಾನ ಹಂಚಿಕೆ ಕಾರ್ಯಗಾರ ಉದ್ಘಾಟಿಸಿ ಅವರು…

Read More

ಬ್ರಾಹ್ಮಣ ಸಮಾವೇಶಕ್ಕೆ ಗಣ್ಯರ ಆಹ್ವಾನ

ನವದೆಹಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ 50 ನೇ ಬ್ರಾಹ್ಮಣ ಸಮಾವೇಶಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.. ರಾಜ್ಯದ ಮಠಾಧೀಶರನ್ನು ಅಷ್ಟೆ ಅಲ್ಲ ಗಣ್ಯಾತಿಗಣ್ಯರನ್ನು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಲಿಯವರು ಖುದ್ದು ಭೆಟ್ಡಿಯಾಗಿ ಸಮಾವೇಶಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ನವದೆಹಲಿಗೆ ತೆರಳಿದ ಅಶೋಕ ಹಾರನಹಳ್ಳಿಯವರು ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡಕರಿ ಪ್ರಲ್ಹಾದ ಜೋಶಿ. ಸುಧಾಂಶು ತ್ರವೇದಿ, ಬಿ.ಎಲ್. ಸಂತೋಷ ಸೇರಿದಂತೆ ಇತರರಿಗೆ ಖುದ್ದು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಅರುಣ ಹಿರಣ್ಣಯ್ಯ…

Read More
error: Content is protected !!